ಬಾರ್ಸಿಲೋನಾ (ಸ್ಪೇನ್): ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಕಂಪನಿಯಾಗಿರುವ ಅಮೆಜಾನ್ ವಿರುದ್ಧ ಬಾರ್ಸಿಲೋನಾ ಸ್ಥಳೀಯ ಕಾರ್ಮಿಕ ಇಲಾಖೆ ತನಿಖೆ ಆರಂಭಿಸಿದೆ. ಅಮೆಜಾನ್ ಸ್ಪೇನ್ನ ಕ್ಯಾಟಲೋನಿಯಾದಲ್ಲಿ ಹಲವಾರು ವರ್ಷಗಳವರೆಗೆ ಉಪಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ.
2020ರಲ್ಲಿಯೂ ಇದೇ ರೀತಿಯ ಕಾನೂನು ಬಾಹಿರ ಕೃತ್ಯಕ್ಕಾಗಿ ಕಂಪನಿಯು ಅಂದಾಜು 8 ಲಕ್ಷ 26 ಸಾವಿರ ಡಾಲರ್ಗೂ ಅಧಿಕ ದಂಡ ಪಾವತಿಸಿತ್ತು. ಈ ಬಾರಿ ಅಮೆಜಾನ್ಗೆ 33 ಲಕ್ಷ ಡಾಲರ್ ದಂಡ ವಿಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಮೇಲಿನ ಎರಡೂ ಪ್ರಕರಣಗಳಲ್ಲಿ ಅಮೆಜಾನ್, ತನ್ನ ಡೆಲಿವರಿ ಸೇವೆಗಳನ್ನು ನೀಡಲು ಮತ್ತು ತಾತ್ಕಾಲಿಕ ನೌಕರರನ್ನು ಒದಗಿಸಲು ಉಪಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡ ಎರಡು ಕಂಪನಿಗಳಿಗೆ ಜನರಲಿಟ್ಯಾಟ್ ದಂಡ ವಿಧಿಸಿದೆ. ಈ ದಂಡದ ಮೊತ್ತ 2.6 ಮಿಲಿಯನ್ ಯುರೊಗಳಿಗೂ ಅಧಿಕವಾಗಿದೆ. ನೌಕರರನ್ನು ಕಾನೂನು ಬಾಹಿರವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದಕ್ಕಾಗಿ ಅಮೆಜಾನ್ಗೆ ಕ್ಯಾಟಲನ್ ಕಾರ್ಮಿಕ ಪ್ರಾಧಿಕಾರವು ಈಗ 5.8 ಮಿಲಿಯನ್ ಯುರೋ ದಂಡ ವಿಧಿಸಲು ನಿರ್ಧರಿಸಿದೆ ಎಂದು ಸ್ಥಳೀಯಾಡಳಿತದ ವಕ್ತಾರರೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಅಮೆಜಾನ್ನ ಪ್ರತಿಕ್ರಿಯೆ ಕೇಳಿದಾಗ, ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ತಿಳಿಸಿದೆ. ಬಹುಶಃ ಅಮೆಜಾನ್ ತನಗೆ ವಿಧಿಸಲಾದ ದಂಡವನ್ನು ಪ್ರಶ್ನಿಸಿ ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇದನ್ನು ಓದಿ:ಕೆಂಪೇಗೌಡ ಏರ್ಪೋರ್ಟ್ಗೆ ಆಕಾಶ್ ಏರ್ಲೈನ್ಸ್ನ ಮೊದಲ ವಿಮಾನ