ETV Bharat / business

ಏರ್​ ಇಂಡಿಯಾ ವಿಮಾನಗಳ ಕಾರ್ಯಾಚರಣೆ ಮುಖ್ಯಸ್ಥರಾಗಿ ಮನೀಷ್ ಉಪ್ಪಲ್ ನೇಮಕ

ಮನೀಷ್ ಉಪ್ಪಲ್ ಅವರನ್ನು ಏರ್​​ ಇಂಡಿಯಾ ವಿಮಾನ ಕಾರ್ಯಾಚರಣೆ ಮುಖ್ಯಸ್ಥರಾಗಿ ನಿಯೋಜನೆ ಮಾಡಲಾಗಿದೆ. ಇವರು ಕ್ಯಾಪ್ಟನ್ ಆರ್​​ ಸಂಧು ಅವರಿಗೆ ವರದಿ ಮಾಡಿಕೊಳ್ಳಲಿದ್ದಾರೆ.

Air India appoints Manish Uppal as head of flight operations
ಏರ್​ ಇಂಡಿಯಾ ವಿಮಾನಗಳ ಕಾರ್ಯಾಚರಣೆ ಮುಖ್ಯಸ್ಥರಾಗಿ ಮನೀಷ್ ಉಪ್ಪಲ್ ನೇಮಕ
author img

By

Published : Aug 2, 2023, 8:47 AM IST

ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ ಮನೀಷ್ ಉಪ್ಪಲ್ ಅವರನ್ನು ವಿಮಾನ ಕಾರ್ಯಾಚರಣೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಮಂಗಳವಾರ ಹೊರಡಿಸಿದ ಪ್ರಕಟಣೆಯ ಪ್ರಕಾರ, ಪ್ರಸ್ತುತ ಏರ್ ಏಷ್ಯಾ ಇಂಡಿಯಾದಲ್ಲಿ ಕಾರ್ಯಾಚರಣೆಯ ಮುಖ್ಯಸ್ಥರಾಗಿರುವ ಉಪ್ಪಲ್ ಅವರು, ತಕ್ಷಣದಿಂದ ಜಾರಿಗೆ ಬರುವಂತೆ ಏರ್ ಇಂಡಿಯಾ ಲಿಮಿಟೆಡ್‌ನಲ್ಲಿ ಫ್ಲೈಟ್ ಆಪರೇಷನ್‌ಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.

ಫ್ಲೈಟ್​ ಆಪರೇಷನ್​​​​ ಮುಖ್ಯಸ್ಥರಾಗಿ ನಿಯೋಜಿತಗೊಂಡಿರುವ ಉಪ್ಪಲ್ ಅವರು, ಏರ್​​ ಇಂಡಿಯಾ ಕಾರ್ಯಾಚರಣೆಗಳ ಮುಖ್ಯಸ್ಥ, ಕ್ಯಾಪ್ಟನ್ ಆರ್ ಎಸ್ ಸಂಧು ಅವರಿಗೆ ವರದಿ ಮಾಡಿಕೊಳ್ಳುತ್ತಾರೆ ಎಂದು ಏರ್​ ಇಂಡಿಯಾ ಹೇಳಿಕೆ ತಿಳಿಸಿದೆ.

"ಮನೀಷ್​ ತರಬೇತಿ ಪಡೆದ ಏರ್‌ಲೈನ್ ಟ್ರಾನ್ಸ್‌ಪೋರ್ಟ್ ಪೈಲಟ್ ಆಗಿದ್ದು, ಫ್ಲೀಟ್‌ ಹಾಗೂ ವಾಣಿಜ್ಯ ವಿಮಾನಗಳು ಮತ್ತು ಏರ್‌ಲೈನ್ ಕಾರ್ಯಾಚರಣೆಗಳನ್ನು ನಿರ್ವಹಿಸುವಲ್ಲಿ 19 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು DGCA ಅನುಮೋದಿತ TRI (A) ಮತ್ತು A 320 ನಲ್ಲಿ ನಿಯೋಜಿತ ಪರೀಕ್ಷಕರಾಗಿದ್ದಾರೆ‘‘ ಎಂದು ಏರ್​ ಇಂಡಿಯಾ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಏರ್ ಇಂಡಿಯಾದ ಪ್ರಕಾರ, ಅವರು ಈ ಹಿಂದೆ ಕೆಲಸ ಮಾಡಿದ ಏರ್‌ಲೈನ್ ಕಾರ್ಯಾಚರಣೆಗಳಲ್ಲಿ ವಿವಿಧ ಹಂತಗಳಲ್ಲಿ ನಾಯಕತ್ವ ವಹಿಸಿಕೊಂಡ ಅನುಭವವನ್ನು ಪಡೆದುಕೊಂಡಿದ್ದಾರೆ. ಏರ್‌ಏಷ್ಯಾ ಇಂಡಿಯಾದ ಸ್ಟಾರ್ಟ್-ಅಪ್ ತಂಡದ ಭಾಗವಾಗಿಯೂ ಮನೀಷ್​ ಕೆಲಸ ಮಾಡಿದ್ದಾರೆ.

ಈಗಾಗಲೇ ಬಹುದೊಡ್ಡ ಖರೀದ ಒಪ್ಪಂದ ಮಾಡಿಕೊಂಡಿರುವ ಏರ್​ ಇಂಡಿಯಾ: ಭಾರತದ ಟಾಟಾ ಗ್ರೂಪ್​ ಒಡೆತನದ ಏರ್ ಇಂಡಿಯಾ ಸಂಸ್ಥೆ ವಿಮಾನಯಾನ ಕ್ಷೇತ್ರದಲ್ಲಿ ಎರಡು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ. ಏರ್‌ಬಸ್​ನಿಂದ 250 ವಿಮಾನಗಳ ಏರ್​ ಇಂಡಿಯಾ ಖರೀದಿ ಒಪ್ಪಂದ ಮಾಡಿಕೊಂಡಿದೆ. ಅಷ್ಟೇ ಅಲ್ಲ ಬೋಯಿಂಗ್‌ನಿಂದ 290 ವಿಮಾನಗಳನ್ನು ಖರೀದಿಸಲು ಟಾಟಾ ಒಪ್ಪಂದವನ್ನು ಕಳೆದ ಫೆಬ್ರವರಿಯಲ್ಲೇ ಪೂರ್ಣಗೊಳಿಸಿದೆ.

ಏರ್ ಇಂಡಿಯಾ ಬೋಯಿಂಗ್‌ನಿಂದ 200ಕ್ಕೂ ಹೆಚ್ಚು ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ಮಾಡಿಕೊಂಡಿವೆ. ಕಳೆದ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್‌, ಟಾಟಾ ಸನ್ಸ್​ ಮಾಜಿ ಅಧ್ಯಕ್ಷರಾದ ರತನ್ ಟಾಟಾ, ಟಾಟಾ ಸನ್ಸ್ ಅಧ್ಯಕ್ಷ ಎನ್.ಚಂದ್ರಶೇಖರನ್, ಮ್ಯಾಕ್ರನ್, ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ನಡೆದ ವರ್ಚುಯಲ್‌ ಕಾರ್ಯಕ್ರಮದಲ್ಲಿ ಏರ್‌ಬಸ್‌ನಿಂದ 250 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಮೂಲಕ ಏರ್ ಇಂಡಿಯಾ, ಅಮೆರಿಕ ಮತ್ತು ಫ್ರಾನ್ಸ್​​​ನೊಂದಿಗೆ ಅತಿ ದೊಡ್ಡ ಮೊತ್ತದಲ್ಲಿ ವಿಮಾನಗಳನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ.

ಇದನ್ನು ಓದಿ: ಮತ್ತೆ ₹10 ಲಕ್ಷ ದಂಡ ಜಡಿದ ಡಿಜಿಸಿಎ: ವಿಮಾನದಲ್ಲಿ ಮದ್ಯ ಪೂರೈಕೆ ನೀತಿಯನ್ನೇ ಬದಲಿಸಿದ ಏರ್​ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.