ETV Bharat / business

ಕಂಪನಿಯ ಎಲ್ಲ ವ್ಯವಹಾರಗಳು ಸದೃಢವಾಗಿವೆ: ಹೂಡಿಕೆದಾರರಿಗೆ ಧೈರ್ಯ ತುಂಬಿದ ಅದಾನಿ ಸಮೂಹ ಸಂಸ್ಥೆ

ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ಸಮೂಹದ ಷೇರುಗಳಲ್ಲಿ ಕುಸಿತ ಕಂಡುಬಂದಿತ್ತು. ಆದರೆ ಈಗ ಕಂಪನಿ ಚೇತರಿಕೆ ಕಾಣುತ್ತಿದ್ದು, ಸಮೂಹದ ಷೇರುಗಳ ಬೆಲೆಯಲ್ಲೂ ಏರಿಕೆ ಕಂಡು ಬರುತ್ತಿದೆ. ಏತನ್ಮಧ್ಯೆ ಹೂಡಿಕೆದಾರರು ಭಯಪಡುವ ಅಗತ್ಯವಿಲ್ಲ ಎಂದು ಅದಾನಿ ಗ್ರೂಪ್ ಸಿಎಫ್​ಒ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಕಂಪನಿಗಳ ಬ್ಯಾಲೆನ್ಸ್ ಶೀಟ್ ತುಂಬಾ ಚೆನ್ನಾಗಿದೆ ಮತ್ತು ಹೂಡಿಕೆದಾರರು ಉತ್ತಮ ಆದಾಯವನ್ನು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Etv Bharatadani-group-touts-very-healthy-balance-sheet-in-bid-to-calm-investors
Etv Bharatಕಂಪನಿಯ ಎಲ್ಲ ವ್ಯವಹಾರ ಸದೃಢವಾಗಿದೆ: ಹೂಡಿಕೆದಾರರಿಗೆ ಧೈರ್ಯ ತುಂಬಿದ ಅದಾನಿ ಸಮೂಹ ಸಂಸ್ಥೆ
author img

By

Published : Feb 16, 2023, 10:27 AM IST

ನವದೆಹಲಿ: ತನ್ನ ಬ್ಯಾಲೆನ್ಸ್ ಶೀಟ್ "ತುಂಬಾ ಉತ್ತಮ" ಸ್ಥಿತಿಯಲ್ಲಿದೆ ಎಂದು ಅದಾನಿ ಗ್ರೂಪ್​ ಹೇಳಿದೆ. ಷೇರುಗಳಲ್ಲಿನ ನಿರಂತರ ಚಂಚಲತೆಯ ನಡುವೆ ವ್ಯಾಪಾರ ಬೆಳವಣಿಗೆಯ ವೇಗವನ್ನು ಕಾಯ್ದುಕೊಳ್ಳಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಮತ್ತು ನೋಡಿಕೊಳ್ಳುತ್ತೇವೆ ಎಂದು ಹೂಡಿಕೆದಾರರಿಗೆ ಅದಾನಿ ಗ್ರೂಪ್ ಬುಧವಾರ ಭರವಸೆ ನೀಡಿದೆ. ಅಮೆರಿಕದ ಹೂಡಿಕೆಗಳ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್‌ ವರದಿ ಪ್ರಕಟವಾದ ಬಳಿಕ ಅದಾನಿ ಸಮೂಹ ಸಂಸ್ಥೆಗಳ ಷೇರುಗಳ ಬೆಲೆಯಲ್ಲಿ ಭಾರಿ ಏರುಪೇರು ಕಂಡು ಬಂದಿತ್ತು. ಹೀಗಾಗಿ ಕಂಪನಿ ಹೂಡಿಕೆದಾರರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸ ಮಾಡುತ್ತಿದೆ.

ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿದ ಬಳಿಕ ಹೂಡಿಕೆದಾರರನ್ನು ಉದ್ದೇಶಿಸಿ ಅದಾನಿ ಗ್ರೂಪ್ ಮುಖ್ಯ ಹಣಕಾಸು ಅಧಿಕಾರಿ ಜುಗ್ಶಿಂದರ್ ಸಿಂಗ್ ಮಾತನಾಡಿದ್ದಾರೆ. ಕಂಪನಿಯ ಆಂತರಿಕ ನಿಯಂತ್ರಣ, ಅನುಸರಣೆ ಮತ್ತು ಕಾರ್ಪೊರೇಟ್ ಆಡಳಿತದ ಬಗ್ಗೆ ತಮಗೆ ಅತ್ಯಂತ ವಿಶ್ವಾಸ ಇದೆ ಎಂದು ಜುಗ್ಶಿಂದರ್ ಸಿಂಗ್ ಹೇಳಿದ್ದಾರೆ. ಅದಾನಿ ಸಮೂಹವು ತನ್ನ ಕಂಪನಿಗಳ ಹಣಕಾಸು ವ್ಯವಹಾರದ ಎಲ್ಲ ಪ್ರಮುಖ ಅಂಶಗಳನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿದೆ. ಕಂಪನಿ ಸಾಕಷ್ಟು ಸದೃಢವಾಗಿದೆ ಅಗತ್ಯ ಹಣಕಾಸು ಹೊಂದಿದೆ. ಮತ್ತು ಸಾಲಗಳನ್ನು ಮರುಪಾವತಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದ್ದು, ಹೂಡಿಕೆದಾರರಿಗೆ ತಾನು ಸದೃಢವಾಗಿದ್ದೇನೆ ಎಂಬ ಸಂದೇಶ ರವಾನಿಸಿದೆ.

ನಾವು ಸದೃಢವಾಗಿದ್ದೇವೆ- ಅದಾನಿ ಗ್ರೂಪ್​; ನಮ್ಮ ಎಲ್ಲ ವ್ಯವಹಾರ ಮತ್ತು ಲೆಕ್ಕಪತ್ರಗಳು ಉತ್ತಮ ಸ್ಥಿತಿಯಲ್ಲಿವೆ ಎಂದು ಜುಗ್ಶಿಂದರ್ ಸಿಂಗ್ ಹೇಳಿದ್ದಾರೆ. ನಾವು ಉದ್ಯಮದ ಪ್ರಮುಖ ಬೆಳವಣಿಗೆಯ ಸಾಮರ್ಥ್ಯ, ಬಲವಾದ ಕಾರ್ಪೊರೇಟ್ ಕಾರ್ಯಾಚರಣೆಗಳು, ಸುರಕ್ಷಿತ ಸ್ವತ್ತುಗಳು ಮತ್ತು ಬಲವಾದ ನಗದು ಹರಿವನ್ನು ಹೊಂದಿದ್ದೇವೆ. ಪ್ರಸ್ತುತ ಮಾರುಕಟ್ಟೆಯು ಸ್ಥಿರಗೊಂಡ ನಂತರ ನಾವು ನಮ್ಮ ಬಂಡವಾಳ ಮಾರುಕಟ್ಟೆಯ ಕಾರ್ಯತಂತ್ರವನ್ನು ಪರಿಶೀಲಿಸುತ್ತೇವೆ. ಆದರೆ,ಷೇರುದಾರರಿಗೆ ಬಲವಾದ ಆದಾಯವನ್ನು ನೀಡುವಂತಹ ವ್ಯವಹಾರವನ್ನು ತಲುಪಿಸುವ ನಮ್ಮ ಸಾಮರ್ಥ್ಯದ ಬಗ್ಗೆ ನಾವು ವಿಶ್ವಾಸ ಹೊಂದಿದ್ದೇವೆ ಎಂದಿದ್ದಾರೆ.

ಜನವರಿ 24 ರಂದು ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಹೊರಬಂದಾಗಿನಿಂದ ಗೌತಮ್ ಅದಾನಿ ನೇತೃತ್ವದ ಗುಂಪು ನಿರಂತರ ಒತ್ತಡದಲ್ಲಿದೆ. ಗುಂಪು ತನ್ನ ವಿರುದ್ಧದ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದ್ದರೂ, ಹೂಡಿಕೆದಾರರ ವಿಶ್ವಾಸವು ಇದರಿಂದ ಪ್ರಭಾವಿತವಾಗಿದೆ. ಕಳೆದ ಮೂರು ವಾರಗಳಲ್ಲಿ, ಸಮೂಹ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವು $ 125 ಶತಕೋಟಿಗಳಷ್ಟು ಕುಸಿದಿದೆ. ಇದರಿಂದ ಹೊರ ಬರಲು ಹಾಗೂ ಹೂಡಿಕೆದಾರರ ವಿಶ್ವಾಸ ಉಳಿಸಿಕೊಳ್ಳಲು ನಿರಂತರ ಕೆಲಸ ಮಾಡುತ್ತಿದೆ.

ಈ ನಿಟ್ಟಿನಲ್ಲಿ, ಈಗಿನ ಅಸ್ಥಿರ ಮಾರುಕಟ್ಟೆ ವಾತಾವರಣದಲ್ಲಿ ತನ್ನ ವ್ಯಾಪಾರ ಬೆಳವಣಿಗೆಯನ್ನು ಮುಂದುವರಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿದೆ ಎಂದು ಜುಗ್ಶಿಂದರ್ ಸಿಂಗ್ ಹೇಳಿದರು. ನಮ್ಮ ಆಂತರಿಕ ನಿಯಂತ್ರಣಗಳು, ನಿಯಂತ್ರಕ ಅನುಸರಣೆ ಮತ್ತು ಕಂಪನಿ ಕಾರ್ಯಾಚರಣೆಗಳ ಬಗ್ಗೆ ನಮಗೆ ವಿಶ್ವಾಸವಿದೆ. ಸೆಪ್ಟೆಂಬರ್ 2022ರ ತ್ರೈಮಾಸಿಕದ ಅಂತ್ಯದಲ್ಲಿ ಅದಾನಿ ಗ್ರೂಪ್ ಒಟ್ಟು 2.26 ಲಕ್ಷ ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದರೆ, ಕಂಪನಿ ಬಳಿ 31,646 ನಗದು ಇದೆ ಎಂದು ಹೇಳಿಕೊಂಡಿದೆ.

ಇದನ್ನು ಓದಿ: ಏರ್‌ಬಸ್​ನಿಂದ 250 ವಿಮಾನ, ಬೋಯಿಂಗ್‌ನಿಂದ 290 ವಿಮಾನ ಖರೀದಿಗೆ ಏರ್ ಇಂಡಿಯಾ ಒಪ್ಪಂದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.