ನವದೆಹಲಿ : ಅದಾನಿ ಗ್ರೂಪ್‌ನ ಮಾಧ್ಯಮ ವಿಭಾಗವು ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (NDTV) ನಲ್ಲಿ 29.18 ರಷ್ಟು ಪಾಲನ್ನು ಖರೀದಿಸಿದೆ ಎನ್ನಲಾಗುತ್ತಿದೆ. ಕಂಪನಿಯಲ್ಲಿ ಇನ್ನೂ 26 ಶೇಕಡಾ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಕೊಡುಗೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದೆ. ಈ ಮೂಲಕ ಅದಾನಿ ಸಮೂಹವು ಬ್ರಾಡ್‌ಕಾಸ್ಟರ್‌ನಲ್ಲಿ ಶೇಕಡಾ 55 ರಷ್ಟು ಪಾಲನ್ನು ಹೊಂದಿರುವ ಬಹುಪಾಲು ಷೇರು ಹೊಂದಿರುವ ಸಂಸ್ಥೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಪರೋಕ್ಷವಾಗಿ 29.18 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಅಂದರೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಒಡೆತನದ ಎಎಮ್ಜಿ(AMG) ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ (AMNL)ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ವಿಶ್ವಪ್ರದನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (VCPL) ಮೂಲಕ ಈ ಷೇರು ಖರೀದಿ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ಸಾರ್ವಜನಿಕ ಷೇರುದಾರರಿಂದ 4 ರೂಪಾಯಿ ಮುಖಬೆಲೆಯ NDTV ಯ 1,67,62,530 ಸಂಪೂರ್ಣ ಪಾವತಿಸಿದ ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅದಾನಿ ಸಮೂಹವು ಬ್ರಾಡ್‌ಕಾಸ್ಟರ್‌ನಲ್ಲಿ ಶೇಕಡಾ 55ರಷ್ಟು ಪಾಲುದಾರಿಕೆಯನ್ನು ಹೊಂದಲಿದೆ.
AMG ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ (AMNL) ನ ಸಿಇಒ ಸಂಜಯ್ ಪುಗಾಲಿಯಾ, ಈ ಸ್ವಾಧೀನವು ಹೊಸ ಯುಗದ ಮಾಧ್ಯಮದ ಹಾದಿಯನ್ನು ವೇದಿಕೆಗಳಲ್ಲಿ ಸುಗಮಗೊಳಿಸುವ ಕಂಪನಿಯ ಗುರಿಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ.
-
Adani Group to purchase 29.18% stake in media group NDTV. pic.twitter.com/XMUUc4gUzK
— ANI (@ANI) August 23, 2022 " class="align-text-top noRightClick twitterSection" data="
">Adani Group to purchase 29.18% stake in media group NDTV. pic.twitter.com/XMUUc4gUzK
— ANI (@ANI) August 23, 2022Adani Group to purchase 29.18% stake in media group NDTV. pic.twitter.com/XMUUc4gUzK
— ANI (@ANI) August 23, 2022
ಎನ್‌ಡಿಟಿವಿ ಸ್ಪಷ್ಟನೆ: ಆದರೆ, ಈಟಿವಿ ಭಾರತ ಜೊತೆ ಮಾತನಾಡಿದ ಎನ್‌ಡಿಟಿವಿ ಮೂಲಗಳು ಇದನ್ನು ಸ್ಪಷ್ಟವಾಗಿ ನಿರಾಕರಿಸಿವೆ. ಎನ್‌ಡಿಟಿವಿ ಕೂಡ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಅದಾನಿ ಸಮೂಹ ಸಂಸ್ಥೆಗೆ NDTV ಸುದ್ದಿ ವಾಹಿನಿಯ ಷೇರನ್ನು ನಮಗೆ ಗೊತ್ತಿಲ್ಲದೆಯೇ ಖರೀದಿ ಮಾಡಿದಾರೆ. ಇದು ನಮ್ಮ ಗಮನಕ್ಕೆ ಬಂದಿಲ್ಲವೆಂದು ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ : ಅದಾನಿ ಪವರ್ ತೆಕ್ಕೆಗೆ ಡಿಬಿ ಪವರ್: 7,000 ಕೋಟಿ ರೂ. ಒಪ್ಪಂದ