ETV Bharat / business

ಭಾರತದಲ್ಲಿ 145 ಟ್ರಿಲಿಯನ್ ರೂಪಾಯಿ ಮೊತ್ತದ ಆನ್ಲೈನ್ ವಹಿವಾಟು

author img

By

Published : Apr 17, 2023, 2:53 PM IST

ದೇಶದಲ್ಲಿ ನಗದುರಹಿತ ವಹಿವಾಟು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2022ರಲ್ಲಿ 88 ಬಿಲಿಯನ್ ಸಂಖ್ಯೆಯ ಆನ್ಲೈನ್ ವಹಿವಾಟುಗಳು ನಡೆದಿರುವುದು ದಾಖಲೆಯಾಗಿದೆ.

2022ರಲ್ಲಿ 145 ಟ್ರಿಲಿಯನ್ ರೂಪಾಯಿ ಮೊತ್ತದ 88 ಬಿಲಿಯನ್ ಆನ್ಲೈನ್ ವಹಿವಾಟು
India saw 88 bn payment transactions worth Rs 150 tn in 2022

ನವದೆಹಲಿ : 2022ರಲ್ಲಿ ಯುಪಿಐ, ಡೆಬಿಟ್​ ಮತ್ತು ಕ್ರೆಡಿಟ್ ಕಾರ್ಡ್, ಮೊಬೈಲ್ ಮತ್ತು ಪ್ರಿಪೇಡ್ ಕಾರ್ಡ್​ಗಳ ಮೂಲಕ ಒಟ್ಟು 145.5 ಟ್ರಿಲಿಯನ್ ರೂಪಾಯಿ ಮೊತ್ತದ 87.92 ಬಿಲಿಯನ್ ಆನ್ಲೈನ್ ಪೇಮೆಂಟ್ ವಹಿವಾಟುಗಳು ನಡೆದಿವೆ ಎಂದು ಸೋಮವಾರ ವರದಿಯೊಂದು ತಿಳಿಸಿದೆ. ವಹಿವಾಟಿನ ಮೌಲ್ಯದ ಪ್ರಕಾರ ನೋಡುವುದಾದರೆ UPI ಪರ್ಸನ್ ಟು ಮರ್ಚಂಟ್ (P2M) ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ (P2P) ಪೇಮೆಂಟ್​ ವಿಧಾನಗಳ ಮೂಲಕ ಕ್ರಮವಾಗಿ ಶೇ 40 ಮತ್ತು ಶೇ 44 ರಷ್ಟು ಅತಿಹೆಚ್ಚು ವಹಿವಾಟುಗಳು ನಡೆದಿವೆ. ಇದರಲ್ಲಿ ಒಟ್ಟಾರೆ ಯುಪಿಐ ಪೇಮೆಂಟ್ ಪ್ರಮಾಣ ಶೇ 84 ರಷ್ಟಿದೆ.

2022 ರಲ್ಲಿ ಯುಪಿಐ 74.05 ಶತಕೋಟಿ ಸಂಖ್ಯೆಯ ವ್ಯವಹಾರಗಳನ್ನು ಮತ್ತು ರೂ 126 ಟ್ರಿಲಿಯನ್ ಮೌಲ್ಯದ ವಹಿವಾಟುಗಳನ್ನು ನಡೆಸಿದೆ. UPI P2P ವಹಿವಾಟುಗಳಿಗೆ ಸರಾಸರಿ ಟಿಕೆಟ್ ಗಾತ್ರ (ATS) ರೂ 2,753 ಮತ್ತು UPI P2M ವಹಿವಾಟುಗಳಿಗೆ ATS ರೂ 687 ಆಗಿತ್ತು. (ಡಿಸೆಂಬರ್ 2022 ರ ವೇಳೆಗೆ). ಆದಾಗ್ಯೂ ಮೌಲ್ಯದ ಪ್ರಕಾರ UPI P2M 18 ಪ್ರತಿಶತ ಪಾಲು ಹೊಂದಿದೆ. ಆದರೆ UPI P2P ಡಿಜಿಟಲ್ ವಹಿವಾಟುಗಳಲ್ಲಿ 66 ಪ್ರತಿಶತವನ್ನು ಹೊಂದಿದೆ ಎಂದು ವರದಿ ತಿಳಿಸಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಯು ಪರಿಮಾಣದಲ್ಲಿ ಶೇಕಡಾ 7 ಮತ್ತು ಮೌಲ್ಯದಲ್ಲಿ ಶೇಕಡಾ 14 ರಷ್ಟಿದೆ.

UPI ವಹಿವಾಟಿನ ಪ್ರಮಾಣ ಮತ್ತು ಮೌಲ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿದೆ. 2021 ಕ್ಕೆ ಹೋಲಿಸಿದರೆ ಇದು 2022 ರಲ್ಲಿ ಶೇಕಡಾ 91 ಮತ್ತು ಮೌಲ್ಯದಲ್ಲಿ ಶೇಕಡಾ 76 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಡಿಸೆಂಬರ್ 2022 ರ ಹೊತ್ತಿಗೆ ಬ್ಯಾಂಕ್‌ಗಳಿಂದ ನಿಯೋಜಿಸಲಾದ ಒಟ್ಟು POS ಟರ್ಮಿನಲ್‌ಗಳ ಸಂಖ್ಯೆಯು 7.55 ಮಿಲಿಯನ್ ಗಡಿಯನ್ನು ದಾಟಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 37 ರಷ್ಟು ಬೆಳವಣಿಗೆಯಾಗಿದೆ.

2022 ರ ಅಂತ್ಯದ ವೇಳೆಗೆ ಚಲಾವಣೆಯಲ್ಲಿರುವ ಒಟ್ಟು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಸಂಖ್ಯೆ 1.02 ಶತಕೋಟಿ ಎಂದು ವರದಿ ಹೇಳಿದೆ. 2022 ರಲ್ಲಿ, ಕ್ರೆಡಿಟ್ ಕಾರ್ಡ್‌ಗಳ ವಹಿವಾಟುಗಳ ಸಂಖ್ಯೆ ಮತ್ತು ಮೌಲ್ಯವು ಕ್ರಮವಾಗಿ 2.76 ಬಿಲಿಯನ್ ಮತ್ತು ರೂ 13.12 ಟ್ರಿಲಿಯನ್ ಆಗಿತ್ತು. ಡೆಬಿಟ್ ಕಾರ್ಡ್ ವಹಿವಾಟಿನ ಪ್ರಮಾಣ ಮತ್ತು ಮೌಲ್ಯವು ಕ್ರಮವಾಗಿ 3.64 ಬಿಲಿಯನ್ ಮತ್ತು ರೂ 7.4 ಟ್ರಿಲಿಯನ್ ಆಗಿದೆ. ಡಿಸೆಂಬರ್ 2022 ರ ಹೊತ್ತಿಗೆ ಪ್ರಿಪೇಯ್ಡ್ ಪಾವತಿ ಸಾಧನಗಳ ಸಂಖ್ಯೆ 16.23 ಬಿಲಿಯನ್ ಆಗಿತ್ತು. ಅದರಲ್ಲಿ 13.34 ಬಿಲಿಯನ್ ವ್ಯಾಲೆಟ್‌ಗಳು ಮತ್ತು 288.8 ಮಿಲಿಯನ್ ಕಾರ್ಡ್‌ಗಳು ಸೇರಿವೆ ಎಂದು ವರದಿ ಹೇಳಿದೆ.

UPI ಶಬ್ದದ ಪೂರ್ಣ ರೂಪವು Unified Payments Interface (ಏಕೀಕೃತ ಪಾವತಿಗಳ ಇಂಟರ್ಫೇಸ್) ಆಗಿದೆ. ನಗದು ರಹಿತ ಆರ್ಥಿಕತೆಯನ್ನು ಸಾಧಿಸಲು ಭಾರತ ತೆಗೆದುಕೊಂಡ ಮೊದಲ ಪ್ರಮುಖ ಹೆಜ್ಜೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಗಿದೆ. ಇದರ ಮೂಲಕ ನಿಮ್ಮ ಸ್ಮಾರ್ಟ್​ಫೋನ್ ಅನ್ನು ವರ್ಚುವಲ್ ಡೆಬಿಟ್ ಕಾರ್ಡ್ ಆಗಿ ಬಳಸಬಹುದು. ನೀವು UPI ಸಹಾಯದಿಂದ ಹಣವನ್ನು ಸ್ವೀಕರಿಸಬಹುದು ಮತ್ತು ಕಳುಹಿಸಬಹುದು.

ಇದನ್ನೂ ಓದಿ : ವಿದ್ಯುಚ್ಛಕ್ತಿ ಬಳಕೆ ದಾಖಲೆ ಮಟ್ಟದಲ್ಲಿ ಏರಿಕೆ: ಬೇಡಿಕೆ ಪೂರೈಸಲು ಸಕಲ ಸಿದ್ಧತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.