ETV Bharat / business

ಪಿವಿಆರ್​-ಐನಾಕ್ಸ್​ಗೆ 333 ಕೋಟಿ ರೂ. ನಷ್ಟ: 50 ಸ್ಕ್ರೀನ್​ ಸ್ಥಗಿತಕ್ಕೆ ನಿರ್ಧಾರ - 30 ಚಿತ್ರಮಂದಿರಗಳಲ್ಲಿ 168 ಹೊಸ ಪರದೆ

ಚಲನಚಿತ್ರ ಪ್ರದರ್ಶನ ಕಂಪನಿ ಪಿವಿಆರ್ - ಐನಾಕ್ಸ್​ ಮುಂದಿನ ಆರು ತಿಂಗಳಲ್ಲಿ 50 ಸ್ಕ್ರೀನ್​ಗಳನ್ನು ಮುಚ್ಚಲು ನಿರ್ಧರಿಸಿವೆ. ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು 333 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

PVR Pictures is now PVR INOX Pictures
PVR Pictures is now PVR INOX Pictures
author img

By

Published : May 17, 2023, 5:06 PM IST

ಚೆನ್ನೈ : ಮಲ್ಟಿಪ್ಲೆಕ್ಸ್ ಚಿತ್ರಮಂದಿರ ನಿರ್ವಾಹಕ ಕಂಪನಿ PVR - Inox ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ ರೂ 333 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿದೆ. ಕಂಪನಿಗೆ ಹಿಂದಿನ ಡಿಸೆಂಬರ್ ತ್ರೈಮಾಸಿಕದಲ್ಲಿ ರೂ 16.1 ಕೋಟಿ ಲಾಭವಾಗಿತ್ತು ಮತ್ತು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ರೂ 105 ಕೋಟಿ ನಷ್ಟವಾಗಿತ್ತು. ನಾಲ್ಕನೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳ ಆದಾಯವು ದುಪ್ಪಟ್ಟಾಗಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಇದ್ದ 536 ಕೋಟಿ ರೂಪಾಯಿ ಆದಾಯಕ್ಕೆ ಹೋಲಿಸಿದರೆ 1,143 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.

ಏತನ್ಮಧ್ಯೆ ಮುಂದಿನ ಆರು ತಿಂಗಳೊಳಗೆ ಸುಮಾರು 50 ಚಿತ್ರಮಂದಿರಗಳನ್ನು ಮುಚ್ಚುವುದಾಗಿ ಕಂಪನಿ ಪ್ರಕಟಿಸಿದೆ. ಈ ಚಿತ್ರಮಂದಿರಗಳು ಒಂದೋ ನಷ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಅಥವಾ ಇವುಗಳ ಲಾಭಕರ ವಹಿವಾಟು ಅವಧಿ ಅಂತ್ಯವಾಗಿದೆ ಹಾಗೂ ಇವು ಮತ್ತೆ ಲಾಭದಲ್ಲಿ ನಡೆಯುವ ಸಾಧ್ಯತೆಗಳು ಕಡಿಮೆ. ಕಳೆದ ಆರ್ಥಿಕ ವರ್ಷದಲ್ಲಿ, ಪಿವಿಆರ್ ಮತ್ತು ಐನಾಕ್ಸ್​ ಎರಡೂ ಜಂಟಿಯಾಗಿ 30 ಚಿತ್ರಮಂದಿರಗಳಲ್ಲಿ 168 ಹೊಸ ಪರದೆಗಳನ್ನು ಆರಂಭಿಸಿದ್ದವು. ಹಣಕಾಸು ವರ್ಷ 2024 ರಲ್ಲಿ ಕಂಪನಿಗಳು ಹೆಚ್ಚುವರಿಯಾಗಿ 150 ರಿಂದ 175 ಪರದೆಗಳನ್ನು ಆರಂಭಿಸುವ ಗುರಿಯನ್ನು ಹೊಂದಿವೆ.

ಪಿವಿಆರ್ ಐನಾಕ್ಸ್​ ವಿಲೀನ: ಪ್ರಖ್ಯಾತ ಚಲನಚಿತ್ರ ಪ್ರದರ್ಶಕ ಸಂಸ್ಥೆಗಳಾದ ಪಿವಿಆರ್ ಹಾಗೂ ಐನಾಕ್ಸ್​ ಎರಡೂ ವಿಲೀನವಾಗಿದ್ದು, ಪಿವಿಆರ್ ಐನಾಕ್ಸ್​ ಲಿಮಿಟೆಡ್ ಎಂಬ ಹೊಸ ಕಂಪನಿ ಅಸ್ತಿತ್ವಕ್ಕೆ ಬಂದಿದೆ. ಕಂಪನಿಯ ಚಲನಚಿತ್ರ ಅಂಗಸಂಸ್ಥೆಗೆ ಪಿವಿಆರ್ ಐನಾಕ್ಸ್​ ಪಿಕ್ಚರ್ಸ್ ಎಂದು ಹೆಸರಿಸಲಾಗಿದೆ. ​ಪಿವಿಆರ್ ಮತ್ತು ಐನಾಕ್ಸ್​ ಭಾರತದ ಅತಿದೊಡ್ಡ ಚಲನಚಿತ್ರ ಪ್ರದರ್ಶನ ಬ್ರ್ಯಾಂಡ್‌ಗಳಾಗಿದ್ದು, ಎರಡೂ ವಿಲೀನವಾಗಿ ಪಿವಿಆರ್ ಐನಾಕ್ಸ್​ ರೂಪುಗೊಂಡಿವೆ. ಎರಡೂ ಒಟ್ಟಾಗಿ ಭಾರತ ಮತ್ತು ಶ್ರೀಲಂಕಾದ 115 ನಗರಗಳಲ್ಲಿ 361 ಸ್ಥಳಗಳಲ್ಲಿ 1,689 ಸಿನಿಮಾ ಪರದೆಗಳ ಜಾಲವನ್ನು ನಿರ್ವಹಿಸುತ್ತವೆ ಮತ್ತು ಭಾರತದಲ್ಲಿ ಮಲ್ಟಿಪ್ಲೆಕ್ಸ್ ಪ್ರದರ್ಶನದಲ್ಲಿ ಶೇಕಡಾ 43 ರಷ್ಟು ಪಾಲು ಹೊಂದಿವೆ.

"ಪಿವಿಆರ್ ಐನಾಕ್ಸ್​ ಪಿಕ್ಚರ್ಸ್ (ಹಿಂದೆ PVR ಪಿಕ್ಚರ್ಸ್) ನಿಮ್ಮ ಕಥೆಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ಅತ್ಯಂತ ನವೀನ, ಉತ್ತೇಜಕ ಮತ್ತು ಮೋಜಿನ ಸ್ಥಳವಾಗಿದೆ. ಎರಡು ದೊಡ್ಡ ಶಕ್ತಿಗಳು ಒಟ್ಟಾಗಿ ಸೇರುತ್ತಿರುವುದರಿಂದ ಅವಕಾಶಗಳ ಪ್ರಮಾಣವು ಅಭೂತಪೂರ್ವವಾಗಿದೆ. ಪಿವಿಆರ್ ಐನಾಕ್ಸ್​ ಪಿಕ್ಚರ್ಸ್ ಪ್ರಪಂಚದಾದ್ಯಂತದ ಕಂಟೆಂಟ್ ನಿರ್ಮಾಪಕರಿಗೆ ಪಾಲುದಾರರಾಗಿ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತದೆ ಮತ್ತು ಭಾರತೀಯ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾದ ಕಂಟೆಂಟ್​ ಗುಣಮಟ್ಟ ಮತ್ತು ವಿಷಯಗಳನ್ನು ವಿಸ್ತರಿಸುತ್ತದೆ" ಎಂದು ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಹೇಳಿದ್ದಾರೆ. "ಪಿವಿಆರ್ ಐನಾಕ್ಸ್​ ಪಿಕ್ಚರ್ಸ್ ಅಂತರರಾಷ್ಟ್ರೀಯ ನಿರ್ಮಾಪಕರು, ಮಾರಾಟ ಏಜೆಂಟ್‌ಗಳು, ಸ್ವತಂತ್ರ ಚಲನಚಿತ್ರ ಸಮುದಾಯ ಮತ್ತು ಸ್ಟುಡಿಯೊಗಳು ಮೌಲ್ಯಯುತ ಕಂಟೆಂಟ್​ ಅನ್ನು ತಯಾರಿಸಲು ಹಿಂದೆಂದಿಗಿಂತಲೂ ಉತ್ತಮ ಸ್ಥಾನದಲ್ಲಿದೆ" ಎಂದು ಬಿಜ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ನಿಷ್ಕ್ರಿಯ ಗೂಗಲ್ ಅಕೌಂಟ್​ ಡಿಲೀಟ್​: Google ಮಹತ್ವದ ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.