ETV Bharat / business

ಬೀದಿಬದಿ ವ್ಯಾಪಾರಿಗಳ ತಿನಿಸುಗಳ ಆನ್​​​ಲೈನ್ ಡೆಲಿವರಿಗೆ ಮುಂದಾದ ಜೊಮ್ಯಾಟೊ

ಬೀದಿಬದಿ ವ್ಯಾಪಾರಿಗಳು ತಯಾರಿಸುವ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದನ್ನು ಮನೆ ಮನೆಗೆ ತಲುಪಿಸುವ ಆಶಯವನ್ನು ಜೊಮ್ಯಾಟೊ ವ್ಯಕ್ತಪಡಿಸಿದೆ. ಇದರಿಂದಾಗಿ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಲಾಭವೂ ಹೆಚ್ಚಲಿದ್ದು, ಭದ್ರತೆ ದೊರೆತಂತಾಗುತ್ತದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

zomato
ಜೊಮೊಟೊ
author img

By

Published : Feb 5, 2021, 9:44 PM IST

ನವದೆಹಲಿ: ಆನ್​​​​ಲೈನ್ ಫುಡ್​ ಡೆಲಿವರಿ ಸಂಸ್ಥೆ ಜೊಮ್ಯಾಟೊ ಹೊಸ ಯೋಜನೆಗೆ ಮುಂದಾಗಿದ್ದು, ಇನ್ಮುಂದೆ ಸ್ಥಳೀಯ ಬೀದಿಬದಿಯ ತಿನಿಸುಗಳನ್ನೂ ಡೆಲಿವರಿ ಮಾಡುವ ಸೇವೆಗೆ ನಿರ್ಧರಿಸಿದೆ. ಇದಕ್ಕಾಗಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಈ ಮೂಲಕ 300 ಬೀದಿಬದಿ ವ್ಯಾಪಾರಿಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು, 300 ಬೀದಿಬದಿ ವ್ಯಾಪಾರಿಗಳ ಮೂಲಕ ವಿವಿಧ ತಿನಿಸು ಡೆಲಿವರಿ ಮಾಡಲು ತಯಾರಿ ನಡೆಸಿದೆ. ಇದಕ್ಕಾಗಿ ದೇಶದ 6 ನಗರಗಳಾದ ಭೋಪಾಲ್, ರಾಯ್ಪುರ್, ಪಾಟ್ನಾ, ವಡೋದರಾ, ನಾಗ್ಪುರ್​ ಮತ್ತು ಲೂದಿಯಾನವನ್ನು ಆಯ್ಕೆ ಮಾಡಿಕೊಂಡಿದೆ.

ಈ ಪ್ರದೇಶಗಳಲ್ಲಿ ಬೀದಿಬದಿಯ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದನ್ನು ಮನೆ ಮನೆಗೆ ತಲುಪಿಸುವ ಆಶಯ ವ್ಯಕ್ತಪಡಿಸಿದೆ. ಇದರಿಂದಾಗಿ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಲಾಭವೂ ಹೆಚ್ಚಲಿದ್ದು, ಭದ್ರತೆ ದೊರೆತಂತಾಗುತ್ತದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.

ಬೀದಿಬದಿ ವ್ಯಾಪಾರಿಗಳಿಗೆ ಹೆಚ್ಚು ಸುಸ್ಥಿರ ಮತ್ತು ಉತ್ತಮ ಪರಿಸರ ವ್ಯವಸ್ಥೆಯನ್ನು ರಚಿಸಲು ಮತ್ತು ಅವರಿಗೆ ಹೆಚ್ಚಿನ ಗಳಿಕೆಯ ಅವಕಾಶಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಜೊಮ್ಯಾಟೊ ಹೇಳಿದೆ.

ಬೀದಿಬದಿಯ ವ್ಯಾಪಾರಿಗಳಿಗೆ ಪ್ಯಾನ್ ಮತ್ತು ಎಫ್‌ಎಸ್‌ಎಸ್‌ಎಐ ನೋಂದಣಿ, ತಂತ್ರಜ್ಞಾನ / ಪಾಲುದಾರ ಅಪ್ಲಿಕೇಶನ್ ಬಳಕೆಯ ತರಬೇತಿ, ಮೆನು ಡಿಜಿಟಲೀಕರಣ ಮತ್ತು ಬೆಲೆ ನಿಗದಿ, ನೈರ್ಮಲ್ಯ ಮತ್ತು ಪ್ಯಾಕೇಜಿಂಗ್ ಕುರಿತು ತರಬೇತಿ ನೀಡಲಾಗುವುದು ಎಂದಿದೆ.

ಮೊದಲ ಹಂತದಲ್ಲಿ 6 ನಗರಗಳಲ್ಲಿ ಈ ವ್ಯಸಸ್ಥೆ ಜಾರಿಯಾಗಲಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ ಮುಂದೆ ದೇಶದ ವಿವಿಧೆಡೆ ಈ ವ್ಯವಸ್ಥೆ ಜಾರಿಗೆ ನಗರ ವ್ಯವಹಾರಗಳ ಸಚಿವಾಲಯದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ನಕ್ಸಲ್ ಭೀತಿ: ಒಡಿಶಾದಲ್ಲಿ ಊರು ತೊರೆದ 85 ಕುಟುಂಬ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.