ETV Bharat / business

ಜೊಮ್ಯಾಟೋ-ಬ್ಲಿಂಕಿಟ್‌ ವಿಲೀನ ಒಪ್ಪಂದಕ್ಕೆ ಸಹಿ - ವರದಿ - ಆನ್‌ಲೈನ್‌ ಶಾಂಪಿಂಗ್‌ ಪ್ಲಾಟ್‌ಫಾರ್ಮ್‌ ಬ್ಲಿಂಕಿಟ್‌

ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ಗೆ ಪೈಪೋಟಿ ನೀಡಲು ದಿನಸಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್‌ವರೆಗೆ ಎಲ್ಲಾ ಅಗತ್ಯ ವಸ್ತುಗಳ ವಿತರಣೆಯನ್ನು ವೇಗಗೊಳಿಸಲು ಆನ್‌ಲೈನ್‌ ಶಾಪಿಂಗ್‌ ಸಂಸ್ಥೆ ಬ್ಲಿಂಕಿಟ್‌ ಜೊಮ್ಯಾಟೋದೊಂದಿಗೆ ವಿಲೀನಕ್ಕೆ ಸಹಿ ಹಾಕಿದೆ ಎನ್ನಲಾಗ್ತಿದೆ.

Zomato And Blinkit Sign Merger Agreement: Report
ಜೊಮ್ಯಾಟೋ-ಬ್ಲಿಂಕಿಟ್‌ ವಿಲೀನ ಒಪ್ಪಂದಕ್ಕೆ ಸಹಿ - ವರದಿ
author img

By

Published : Mar 15, 2022, 8:45 PM IST

ಬೆಂಗಳೂರು: ಮನೆ ಬಾಗಿಲಿಗೆ ಆಹಾರ ಡೆಲಿವರಿ ಮಾಡುವ ಜೊಮ್ಯಾಟೋ ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಫಾರ್ಮ್‌ ಬ್ಲಿಂಕಿಟ್‌ಅನ್ನು ವಿಲೀನ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಹಿ ಮಾಡಿವೆ ಎಂದು ವರದಿಯಾಗಿದೆ.

ಕಳೆದ ಆಗಸ್ಟ್‌ನಲ್ಲಿ ಜೊಮ್ಯಾಟೋ ಸಾಫ್ಟ್‌ಬ್ಯಾಂಕ್ ಬೆಂಬಲಿತ ಬ್ಲಿಂಕಿಟ್‌ನಲ್ಲಿ 518 ರೂಪಾಯಿಗಳ ($67.77 ಮಿಲಿಯನ್) ಶೇ.9 ಕ್ಕಿಂತ ಹೆಚ್ಚು ಪಾಲನ್ನು ಪಡೆದುಕೊಂಡಿತ್ತು. ಸ್ಥಳೀಯವಾಗಿ ಪ್ರಾಬಲ್ಯ ಹೊಂದಿ ಬೆಳೆಯುತ್ತಿರುವ ವಾಲ್‌ಮಾರ್ಟ್‌ನ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ಗೆ ಪೈಪೋಟಿ ನೀಡಲು ದಿನಸಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್‌ವರೆಗೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ವೇಗಗೊಳಿಸಲು ಬ್ಲಿಂಕಿಟ್‌ನ ಸಿಇಒ ಅಲ್ಬಿಂದರ್‌ ಧಿಂಡ್ಸಾ ನಿರ್ಧರಿಸಿದ್ದು, ಜೊಮ್ಯಾಟೋ ಜೊತೆ ವಿಲೀನಕ್ಕೆ ಮುಂದಾಗಿದ್ದಾರೆ.

ದೇಶಾದ್ಯಂತ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಈ ಸ್ಟಾರ್ಟಪ್ ಸಂಸ್ಥೆ 10 ನಿಮಿಷಗಳಲ್ಲಿ ಗ್ರಾಹಕರಿಗೆ ವಸ್ತುಗಳನ್ನು ವಿತರಣೆ ಮಾಡುತ್ತದೆ. ಇದು ಇತರೆ ಸ್ಪರ್ಧಿಗಳು ತೆಗೆದುಕೊಳ್ಳುವ ಸಮಯಕ್ಕಿಂತ ಕಡಿಮೆ ಇದೆ. ಸ್ವದೇಶಿ ಮೂಲದ ಬ್ಲಿಂಕಿಟ್‌ ಅನ್ನು 2013ರ ಡಿಸೆಂಬರ್‌ 27 ರಂದು ಅಲ್ಬಿಂದರ್‌ ಧಿಂಡ್ಸಾ ಹಾಗೂ ಸೌರಭ್‌ ಕುಮಾರ್‌ ಆರಂಭಿಸಿದ್ದರು.

ಇದನ್ನೂ ಓದಿ: ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಹೊಸ ಗ್ರಾಹಕರಿಗೆ ಆರ್‌ಬಿಐ ನಿರ್ಬಂಧಕ್ಕೆ ಕಂಪನಿ ಸ್ಪಷ್ಟನೆ ಹೀಗಿದೆ...

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.