ನವದೆಹಲಿ : ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರ ದರ ಸತತ 3 ತಿಂಗಳೂ ಕುಸಿತ ಕಂಡಿದ್ದು, ಹಣದುಬ್ಬರದಲ್ಲಿ ಅಲ್ಪ ಏರಿಕೆ ಕಂಡು ಬಂದಿದೆ.
ಆಹಾರ ಉತ್ಪನ್ನಗಳು ದುಬಾರಿಯಾಗಿದ್ರೂ ಸಹ ಇಂಧನ ಮತ್ತು ವಿದ್ಯುತ್ ಬೆಲೆಗಳ ಕುಸಿತದಿಂದಾಗಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಜೂನ್‌ನಲ್ಲಿ ಶೇ 1.81ರಷ್ಟು ಕುಸಿದಿದೆ. ಮೇ ತಿಂಗಳಲ್ಲಿ ಹಣದುಬ್ಬರವಿಳಿತದ ಪ್ರಮಾಣವು ಶೇ. 3.21ರಷ್ಟಿತ್ತು.
ಮಾಸಿಕ ಡಬ್ಲ್ಯುಪಿಐ (ಸಗಟು ಬೆಲೆ ಸೂಚ್ಯಂಕ) ಆಧಾರಿತ ವಾರ್ಷಿಕ ಹಣದುಬ್ಬರ ದರವು 2020ರ ಜೂನ್ ತಿಂಗಳಲ್ಲಿ ಶೇ-1.81ರಷ್ಟಿದೆ (ತಾತ್ಕಾಲಿಕ). ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ.2.02ರಷ್ಟಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ತಯಾರಿಕ ಉತ್ಪನ್ನಗಳ ವಿಭಾಗದಲ್ಲಿ ಜೂನ್ ವೇಳೆ ಶೇ 0.08ರಷ್ಟು ಹಣದುಬ್ಬರ ಕಂಡಿದೆ. ಮೇ ತಿಂಗಳಲ್ಲಿ ಹಣದುಬ್ಬರವಿಳಿತವು ಶೇ 0.42 ರಷ್ಟಿತ್ತು. ಏಪ್ರಿಲ್ ಡಬ್ಲ್ಯುಪಿಐ ಹಣದುಬ್ಬರ ಶೇ 1.57ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.