ಚಂಡೀಗಢ: ಪಂಜಾಬ್‌ನಲ್ಲಿ ಗೋಧಿ ಖರೀದಿ ಭರದಿಂದ ಸಾಗಿದ್ದು, ಶೇ 50ರಿಂದ 60ರಷ್ಟು ಬೆಳೆ ಖರೀದಿಸಲಾಗುತ್ತಿದೆ. ಕೊರೊನಾ ವೈರಸ್ ಪ್ರಕರಣಗಳ ಉಲ್ಬಣದ ಮಧ್ಯೆಯೂ ಗೋಧಿ ಸಂಗ್ರಹವು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸರ್ಕಾರವು ಸಂಗ್ರಹಣೆಗೆ ಮುಂಚಿತವಾಗಿ ಎಲ್ಲ ಮಂಡಿಗಳಲ್ಲಿ (ಕೃಷಿ ಮಾರುಕಟ್ಟೆಗಳಲ್ಲಿ) ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿತ್ತು. ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಒಳಗೊಂಡಿರುವ ಕೋವಿಡ್ ಮಾರ್ಗದರ್ಶಿ ಸಹ ಕಡ್ಡಾಯಗೊಳಿಸಲಾಗಿದೆ.
ಈ ಬಗ್ಗೆ ಮಾಹಿತಿ ಪಡೆಯಲು ಈಟಿವಿ ಭಾರತ ತಂಡವು ವಿವಿಧ ಮಂಡಳಿಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಕುರಿತು ವರದಿ ಸಿದ್ಧಪಡಿಸಿತು. ಖನ್ನಾ ಮಂಡಿಯಲ್ಲಿ ಏಷ್ಯಾದ ಅತಿದೊಡ್ಡ ಆಹಾರ ಮಾರುಕಟ್ಟೆ ಎಂದು ಕರೆಯಲಾಗುತ್ತದೆ.
ರೈತರು ಮುಖಗವಸು ಧರಿಸಬೇಕು ಮತ್ತು ಟ್ರಾಲಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರವೇ ಮಂಡಿ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಪಂಜಾಬ್ ಸರ್ಕಾರ ಸ್ಪಷ್ಟ ಸೂಚನೆ ನೀಡಿತ್ತು.
ಏಷ್ಯಾದ ಅತಿದೊಡ್ಡ ಆಹಾರ ಮಾರುಕಟ್ಟೆ ಖನ್ನಾ ಮಂಡಿಯಲ್ಲಿ, ಸಂಪೂರ್ಣವಾಗಿ ವಿಭಿನ್ನವಾದ ಚಿತ್ರಣ ಕಾಣಬಹುದು. ರೈತರು ಮಾರುಕಟ್ಟೆಗೆ ಪ್ರವೇಶಿಸಿ ಮುಖಗವಸು ಧರಿಸದೇ ತಮ್ಮ ಸಾಮಾನ್ಯ ವ್ಯವಹಾರ ಮಾಡುತ್ತಿದ್ದಾರೆ. ಪ್ರದೇಶವನ್ನು ಸಹ ಸ್ವಚ್ಛಗೊಳಿಸಿಲ್ಲ.
ಬಟಿಂಡಾದ ಡಾನಾ ಮಂಡಿಯಲ್ಲಿ ಪಂಜಾಬ್ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲನೆ ಆಗುತ್ತಿಲ್ಲ. ಪಂಜಾಬ್‌ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಏರಿಕೆಯಾಗುತ್ತಿವೆ.
ಮಾರುಕಟ್ಟೆ ಸಮಿತಿಯು ಮಂಡಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಫೇಸ್ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಒದಗಿಸುತ್ತಿದ್ದರೂ, ಕಾರ್ಮಿಕರು ಮುಕ್ತ ಮಾರುಕಟ್ಟೆಯಲ್ಲಿ ಮುಖಗವಸುಗಳಿಲ್ಲದೇ ಕೆಲಸ ಮಾಡುವುದನ್ನು ಕಾಣಬಹುದು.
ಜಲಂಧರ್‌ನಲ್ಲಿ ಕೋವಿಡ್ 19 ಮಾನದಂಡಗಳ ಉಲ್ಲಂಘನೆ
ಜಲಂಧರ್ ಡಾನಾ ಮಂಡಿಯಲ್ಲಿ ಕುಡಿಯುವ ನೀರು ಅಥವಾ ಸರಿಯಾದ ನೈರ್ಮಲ್ಯ ವ್ಯವಸ್ಥೆ ಪಾಲನೆ ಮಾಡುತ್ತಿಲ್ಲ. ಚಂಡೀಗಢ ಆಡಳಿತವು ಎಲ್ಲ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ ಎಂದು ಹೇಳಿಕೊಂಡಿದೆ. ವಾಸ್ತವದಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಮಂಡಿಯಲ್ಲಿ ಕೆಲಸ ಮಾಡುವ ನೌಕರರ ದೇಹದ ಉಷ್ಣತೆ ತಪಾಸಣೆಗೆ ಯಾವುದೇ ಸ್ಕ್ಯಾನರ್‌ಗಳಿಲ್ಲ. ಕೆಲವು ಕಾರ್ಮಿಕರು ಮುಖಗವಸು ಇಲ್ಲದೇ ಓಡಾಡುತ್ತಿರುವುದು ಕಂಡುಬಂತು.