ನ್ಯೂಯಾರ್ಕ್: ಮೂರು ದಶಕಗಳಿಗೂ ಅಧಿಕ ಕಾಲದ ಬಳಿಕ ಅಮೆರಿಕದ ವಾಲ್ ಸ್ಟ್ರೀಟ್ ಸ್ಟಾಕ್ ಮಂಗಳವಾರದ ವಹಿವಾಟಿನಂದು ಇಳಿಕೆಯಾಗಿದೆ.
ಕೊರೊನಾ ವೈರಸ್ ಭೀತಿಯನ್ನು ಹತ್ತಿಕ್ಕುವ ಯತ್ನ ಮತ್ತು ಅದನ್ನು ಶಾಂತಗೊಳಿಸಲು ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್ಗಳು ಪರದಾಡುತ್ತಿವೆ. ಆದರೆ, ಹಲವೆಡೆ ಇಕ್ವಿಟಿಗಳ ಬುಡವೇ ಅಲುಗಾಡುತ್ತಿವೆ.
ಇದರ ನಡುವೆ ತೈಲ ಬೆಲೆಗಳು ಬ್ಯಾರೆಲ್‌ಗೆ 30 ಡಾಲರ್ಕ್ಕಿಂತ ಕಡಿಮೆಯಾಗಿದೆ. ಡಾಲರ್ ಸೋಮವಾರ ಯೂರೋ ವಿರುದ್ಧದ ಭಾರಿ ನಷ್ಟದಿಂದ ಹೊರಬಂದಿದೆ. 1987 ರಿಂದೀಚೆಗೆ ಅತಿ ಕೆಟ್ಟ ವಹಿವಾಟು ಕಂಡು ವಾಲ್ ಸ್ಟ್ರೀಟ್ ಸ್ಟಾಕ್ ಸೂಚ್ಯಂಕಗಳು ಆರಂಭಿಕ ಅವಧಿಯಲ್ಲಿ ಶೇ 1.7 ಕುಸಿತ ಕಂಡಿತು.
ಎಸ್&ಪಿ 500 ಮತ್ತು ನಾಸ್ಡಾಕ್ ಸುಮಾರು ಶೇ 12ರಷ್ಟು ಹಾಗೂ ಡೌಜೋನ್ ಸುಮಾರು ಶೇ 13ರಷ್ಟು ಕುಸಿದವು. ಕೇಂದ್ರೀಯ ಬ್ಯಾಂಕ್ಗಳು ಮತ್ತು ಸರ್ಕಾರಗಳು ಕೊರೊನಾ ವೈರಸ್ ಹಬ್ಬುವಿಕೆಯಿಂದ ಉಂಟಾಗುತ್ತಿರುವ ಪರಿಣಾಮ ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರ ಪರಿಣಾಮ ಷೇರುಪೇಟೆ ಕುಸಿದಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚುತ್ತಿರುವ ಆರ್ಥಿಕ ಹಾನಿಯನ್ನು ತಡೆಗಟ್ಟಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 850 ಬಿಲಿಯನ್ ಡಾಲರ್ಗಳಷ್ಟು ತುರ್ತು ಖರ್ಚು ಪ್ಯಾಕೇಜ್ ಅನ್ನು ಅನುಮೋದಿಸಲು ಕಾಂಗ್ರೆಸ್ಗೆ ಕೇಳಲಿದ್ದಾರೆ ಎಂಬ ವರದಿಗಳು ಮಂಗಳವಾರದಂದು ಹೂಡಿಕೆದಾರರ ಮೇಲೆ ಪ್ರಭಾವ ಬೀರಿದವು. ಇದರಲ್ಲಿ ವೇತನದಾರರ ತೆರಿಗೆ ಕಡಿತ ಮತ್ತು ಬೇಲ್ಔಟ್ ಸಹ ಒಳಗೊಂಡಿದೆ.
ಯುರೋಪಿಯನ್ ಷೇರು ಮಾರುಕಟ್ಟೆಗಳು ತಮ್ಮ ಲಾಭಗಳನ್ನು ಅಳಿಯುವ ಮುನ್ನ ಮಂಗಳವಾರದ ಆರಂಭಿಕ ಅವಧಿಯಲ್ಲಿ ಐದು ಪ್ರತಿಶತದಷ್ಟು ಏರಿಕೆಯಾದವು.
ಯುರೋಪಿಯನ್ ಮಾರುಕಟ್ಟೆಗಳು ಚೇತರಿಸಕೊಳ್ಳಲು ಪ್ರಯತ್ನಿಸಿದಾಗಲೆಲ್ಲ ಅದು ಸುಗಮವಾದ ನೌಕಾಯಾನದಂತೆ ಆಗುವುದಿಲ್ಲ" ಎಂದು ಸ್ಪ್ರೆಡೆಕ್ಸ್ ವ್ಯಾಪಾರ ಸಮೂಹದ ವಿಶ್ಲೇಷಕ ಕಾನರ್ ಕ್ಯಾಂಪ್ಬೆಲ್ ಅಭಿಪ್ರಾಯಪಟ್ಟಿದ್ದಾರೆ.