ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದ ಒಂದು ವಾರದಲ್ಲಿ 20 ತಿಂಗಳ ಹಿಂದಿನ ಗರಿಷ್ಠ ಮಟ್ಟದ ಏರಿಕೆಯ ದಾಖಲೆ ಸರಿಗಟ್ಟಿತು.
ಈ ವಾರದಲ್ಲಿ ರೂಪಾಯಿ ಸುಮಾರು ಶೇ 2ರಷ್ಟು ಏರಿಕೆಯಾಗಿದ್ದು, ಇದು 2018ರ ಡಿಸೆಂಬರ್ 21ಕ್ಕೆ ಕೊನೆಗೊಂಡ ವಾರದಿಂದ ಶೇ 2.4ರಷ್ಟು ಹೆಚ್ಚಳವಾದ ನಂತರದ ಅತಿದೊಡ್ಡ ಏರಿಕೆಯಾಗಿದೆ.
ಈ ವಾರದವರೆಗೂ ಕರೆನ್ಸಿ ಫಾರೆಕ್ಸ್ ಮಾರುಕಟ್ಟೆಯಲ್ಲಿ ಬಿಗಿಯಾದ ಹಿಡಿತದಿಂದ ವಹಿವಾಟು ನಡೆಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ರೂಪಾಯಿಯಲ್ಲಿ ತೀಕ್ಷ್ಣ ಮೌಲ್ಯ ನಿರ್ಣಯ ತಡೆಗಟ್ಟಲು ಸರ್ಕಾರಿ ಬ್ಯಾಂಕ್ಗಳ ಮೂಲಕ ನಿಯಮಿತವಾಗಿ ಡಾಲರ್‌ಗಳನ್ನು ಖರೀದಿಸುತ್ತಿತ್ತು.
ಷೇರು ಮಾರುಕಟ್ಟೆಯಲ್ಲಿ ಡಾಲರ್ ಒಳಹರಿವು ಹೆಚ್ಚಳ ಹಾಗೂ ಏಷ್ಯಾದ ಮಾರುಕಟ್ಟೆಯಲ್ಲಿನ ಗಳಿಕೆಯಿಂದ ರೂಪಾಯಿ ಮೌಲ್ಯವರ್ಧನೆ ಆಗಿದೆ. ಶುಕ್ರವಾರದ ವಹಿವಾಟಿನಂದು ರೂಪಾಯಿ ಪ್ರತಿ ಡಾಲರ್‌ಗೆ 73.51ಕ್ಕೆ ಏರಿಕೆಯಾಯಿತು. ಇದು ಮಾರ್ಚ್ 5ರ ನಂತರದ ಗರಿಷ್ಠ ಏರಿಕೆಯಾಗಿದೆ. ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ರೂಪಾಯಿ ಮೌಲ್ಯ 73.83 ಇತ್ತು.
ಶುಕ್ರವಾರ ಬೆಳಗ್ಗೆ ಐದು ತಿಂಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ರೂಪಾಯಿ ಗರಿಷ್ಠ ಮಟ್ಟಕ್ಕೆ ಹೆಚ್ಚಳವಾಗಿದೆ. ಈಕ್ವಿಟಿ ಮಾರುಕಟ್ಟೆಗಳಲ್ಲಿ ಡಾಲರ್ ಒಳಹರಿವಿನ ನೆರವು ಮತ್ತು ಏಷ್ಯಾದ ಮಾರುಕಟ್ಟೆಗಳ ಲಾಭವು ಹೂಡಿಕೆದಾರರಿಗೆ ವರವಾಯಿತು.