ಹೈದರಾಬಾದ್: ದಿನಸಿ ಮತ್ತು ಇತರ ಅಗತ್ಯ ವಸ್ತುಗಳ ಪೂರೈಕೆ ಸೇವೆಯನ್ನು ದೇಶದ 125ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸಲಾಗಿದೆ ಎಂದು ಸ್ವಿಗ್ಗಿ ಸಂಸ್ಥೆ ತಿಳಿಸಿದೆ.
ಸ್ವಿಗ್ಗಿ ಆ್ಯಪ್ನ ಗ್ರೋಸರಿ (ಕಿರಾಣಿ) ಟ್ಯಾಬ್ನಲ್ಲಿ ಜನರು ಬೇಕಾದ ದಿನಸಿ ಮತ್ತು ಇತರ ಸಾಮಾಗ್ರಿಗಳನ್ನು ಆರ್ಡರ್ ಮಾಡಬಹುದು. ಸಮೀಪದ ಮಳಿಗೆಗಳಿಂದ ಸಾಮಗ್ರಿಗಳನ್ನು ಡೆಲಿವರಿ ಬಾಯ್ಗಳು ಮನೆ ಬಾಗಿಲಿಗೆ ತಲುಪಿಸುತ್ತಾರೆ ಎಂದು ಸಂಸ್ಥೆ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವಿಗ್ಗಿ ಸಿಇಒ ವಿವೇಕ್ ಸುಂದರ್, ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಹೈಪರ್ ಲೋಕಲ್ ಸೇವೆಯ ಮುಖಾಂತರ ಮನೆ ಬಾಗಿಲಿಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸುವ ಕೆಲಸವನ್ನು ಮಾಡಲಿದ್ದೇವೆ. ಇದಕ್ಕಾಗಿ ನಾವು ಆಯಾ ಪ್ರದೇಶದ ವ್ಯಾಪಾರ ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಇದರಿಂದ ಜನರಿಗೆ ಬೇಕಾದ ಸಾಮಗ್ರಿಗಳನ್ನು ತಲುಪಿಸಿ, ಅವರು ಮನೆಯಲ್ಲೇ ಇರುವಂತೆ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ. ಅಲ್ಲದೆ ನಮ್ಮ ವಿತರಣಾ ಸಿಬ್ಬಂದಿಗೆ ನೆರವಾಗುತ್ತದೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಸ್ವಿಗ್ಗಿ ಆ್ಯಪ್ನಲ್ಲಿ ಗ್ರಾಹಕರು ತಮ್ಮ ಸಮೀಪದ ಬೇಕಾದ ಮಳಿಗೆಯಿಂದ ವಸ್ತುಗಳನ್ನು ಆಯ್ಕೆ ಮಾಡಬಹುದು ಮತ್ತು ಅವುಗಳನ್ನು ಕಾರ್ಟ್ಗೆ ಸೇರಿಸಬಹುದು. ಈ ಸೇವೆಯಲ್ಲಿ ಮುಂಗಡ ಹಣ ಪಾವತಿಸಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.
ಸ್ವಿಗ್ಗಿ ರಾಷ್ಟ್ರೀಯ ಬ್ರಾಂಡ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಾದ ಎಚ್‌ಯುಎಲ್, ಪಿ & ಜಿ, ಗೋದ್ರೇಜ್, ಡಾಬರ್, ಮಾರಿಕೊ, ವಿಶಾಲ್ ಮೆಗಾ ಮಾರ್ಟ್, ಅದಾನಿ ವಿಲ್ಮರ್ಸ್, ಸಿಪ್ಲಾ ಮತ್ತು ಇತರ ಮಳಿಗೆಗಳೊಂದಿಗೆ ಆಹಾರ ಪದಾರ್ಥಗಳನ್ನು ಪೂರೈಸಲು ಸಹಭಾಗಿತ್ವವನ್ನು ಹೊಂದಿದೆ.