ETV Bharat / business

ಬಡವನಿಗೆ ಬರೆ, ಶ್ರೀಮಂತನಿಗೆ ಹೊರೆ: ಜಸ್ಟ್​ 21 ದಿನದಲ್ಲಿ 100 ರೂ. ಜಿಗಿದ ಸಿಲಿಂಡರ್ ಬೆಲೆ! - ಎಲ್​ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ಎಲ್‌ಪಿಜಿ ಬೆಲೆಯನ್ನು ಈ ತಿಂಗಳ ಮೊದಲು ಫೆಬ್ರವರಿ 4ರಂದು ಪ್ರತಿ ಸಿಲಿಂಡರ್‌ಗೆ 25 ರೂ. ಮತ್ತು ಫೆ.15ರಂದು 50 ರೂ. ಹೆಚ್ಚಿಸಲಾಗಿತ್ತು. ಡಿಸೆಂಬರ್‌ನಿಂದ ಸಿಲಿಂಡರ್​ ಬೆಲೆಗಳು ಹೆಚ್ಚಾಗುತ್ತಿದ್ದು, ಇದುವರೆಗೂ 150 ರೂ.ನಷ್ಟು ಏರಿಕೆಯಾಗಿದೆ.

ಜಿಎಲ್​ಪಿ ದರ
ಜಿಎಲ್​ಪಿ ದರ
author img

By

Published : Feb 25, 2021, 4:17 PM IST

ನವದೆಹಲಿ: ಸಬ್ಸಿಡಿ ಇಂಧನ ಮತ್ತು ಉಜ್ವಾಲಾ ಯೋಜನೆಯ ಫಲಾನುಭವಿಗಳು ಪಡೆದ ಎಲ್ಲ ವಿಭಾಗಗಳಲ್ಲಿ ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ ಮೇಲೆ 25 ರೂ.ನಷ್ಟು ಹೆಚ್ಚಿಸಲಾಗಿದೆ.

ಬೇಡಿಕೆ ಚೇತರಿಸಿಕೊಂಡಂತೆ ಅಂತಾರಾಷ್ಟ್ರೀಯ ದರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದು ಈ ತಿಂಗಳ ದರಗಳಲ್ಲಿ ಮೂರನೇ ಹೆಚ್ಚಳವಾಗಿದೆ. ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 794 ರೂ.ಗಳಾಗಿದ್ದು, ಬುಧವಾರ 769 ರೂ.ಯಷ್ಟಿತ್ತು. ದರ ಹೆಚ್ಚಳವು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಬಳಕೆದಾರರು ಸೇರಿದಂತೆ ಎಲ್ಲ ವಿಭಾಗಗಳಿಗೂ ಅನ್ವಯಿಸುತ್ತದೆ.

ಇದನ್ನೂ ಓದಿ: 'ಎಂಎಸ್​ಎಂಇ'ಗಳು ಭಾರತದ ಆರ್ಥಿಕ ಬೆಳವಣಿಗೆಯ ಎಂಜಿನ್​: RBI ಗವರ್ನರ್​

ಕಳೆದ ಎರಡು ವರ್ಷಗಳಿಂದ ಸತತ ಬೆಲೆ ಹೆಚ್ಚಳದ ಮೂಲಕ ಮಹಾನಗರ ಮತ್ತು ಪ್ರಮುಖ ನಗರಗಳಲ್ಲಿ ಸಬ್ಸಿಡಿ ತೆಗೆದುಹಾಕಲಾಗಿದೆ. ಆದ್ದರಿಂದ, ದೆಹಲಿಯಂತಹ ಸ್ಥಳಗಳಲ್ಲಿ ಗ್ರಾಹಕರಿಗೆ ಯಾವುದೇ ಸಬ್ಸಿಡಿ ನೀಡಲಾಗುವುದಿಲ್ಲ. ಎಲ್ಲ ಎಲ್​ಪಿಜಿ ಬಳಕೆದಾರರು ಮಾರುಕಟ್ಟೆ ಬೆಲೆ 794 ರೂ. ಪಾವತಿಸಬೇಕಿದೆ.

ಸರಕು ಸಾಗಣೆ ಶುಲ್ಕದಿಂದ ಉಂಟಾಗುವ ಹೆಚ್ಚಿನ ಬೆಲೆಗೆ ಸರಿದೂಗಿಸಲು ದೂರದ ಪ್ರದೇಶಗಳಲ್ಲಿನ ಗ್ರಾಹಕರಿಗೆ ಸಣ್ಣ ಸಹಾಯಧನ ನೀಡಲಾಗುತ್ತದೆ ಎಂದು ತೈಲ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಲ್‌ಪಿಜಿ ಬೆಲೆಯನ್ನು ಈ ತಿಂಗಳ ಮೊದಲು ಫೆಬ್ರವರಿ 4ರಂದು ಪ್ರತಿ ಸಿಲಿಂಡರ್‌ಗೆ 25 ರೂ. ಮತ್ತು ಫೆ.15ರಂದು 50 ರೂ. ಹೆಚ್ಚಿಸಲಾಗಿತ್ತು. ಡಿಸೆಂಬರ್‌ನಿಂದ ಸಿಲಿಂಡರ್​ ಬೆಲೆಗಳು ಹೆಚ್ಚಾಗುತ್ತಿದ್ದು, ಇದುವರೆಗೂ 150 ರೂ.ಯಷ್ಟು ಏರಿಕೆಯಾಗಿದೆ.

ಸತತ ಎರಡನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 90.93 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 81.32 ರೂ.ಯಲ್ಲಿ ಖರೀದಿಯಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.