ಮುಂಬೈ: ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಸತತ ಎರಡನೇ ದಿನವೂ ಆರಂಭಿಕ ಕುಸಿತದೊಂದಿಗೆ ವ್ಯವಹಾರ ಪ್ರಾರಂಭಿಸಿದವು.
ಮುಂಬೈ ಪೇಟೆಯು ಸ್ವಲ್ಪ ಸಮಯದವರೆಗೆ ಸಣ್ಣ ಲಾಭಗಳಿಗೆ ಜಾರಿದ ನಂತರ, ತಕ್ಷಣವೇ ಕಮ್‌ಬ್ಯಾಕ್ ಮಾಡಿತು. ಬುಧವಾರದ ವಹಿವಾಟಿನಂದು ಬೆಳಗ್ಗೆ 9: 24ಕ್ಕೆ ಸೆನ್ಸೆಕ್ಸ್ 59 ಅಂಕ ಕುಸಿತ ಕಂಡು 52,216ಕ್ಕೆ ತಲುಪಿತು. ನಿಫ್ಟಿ 9 ಅಂಕ ಇಳಿಕೆ ಕಂಡು 15,730ಕ್ಕೆ ತಲುಪಿತು.
ನಂತರ 9.50ರ ವೇಳೆಗೆ ಸೆನ್ಸೆಕ್ಸ್ 50 ಅಂಕ ಜಿಗಿದ ದಾಖಲಿಸಿ 52320.97 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 16 ಅಂಕ ಹೆಚ್ಚಳವಾಗಿ 15,754 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿತು. ಡಾಲರ್ ವಿರುದ್ಧ ರೂಪಾಯಿ ವಿನಿಮಯ ದರ 72.91 ರೂ.ಯಲ್ಲಿ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: ಹೊಸ IT ಇ-ಫೈಲಿಂಗ್ ಪೋರ್ಟಲ್ನಲ್ಲಿ ದೋಷ: ನಿರ್ಮಲಾ ಹೇಳಿಕೆಗೆ ನಿಲೇಕಣಿ ವಿವರಣೆ
ಅಮೆರಿಕ ಮಾರುಕಟ್ಟೆಗಳು ಮಂಗಳವಾರ ಫ್ಲಾಟ್ ಮಟ್ಟದಲ್ಲಿ ಮುಚ್ಚಿವೆ. ಏಷ್ಯಾದ ಮಾರುಕಟ್ಟೆಗಳು ಇಂದು ಜಾಗರೂಕತೆಯಿಂದ ಚಲಿಸುತ್ತಿವೆ. ವಿಶ್ವ ಬ್ಯಾಂಕ್ ತನ್ನ ವರದಿಯಲ್ಲಿ ಭಾರತದ 2022-23ರ ಹಣಕಾಸು ವರ್ಷದ ವಿತ್ತೀಯ ಬೆಳವಣಿಗೆ ಮುನ್ನೋಟವನ್ನು ತಗ್ಗಸಿದೆ.
ಲಾಭ, ನಷ್ಟದ ಲೆಕ್ಕಾಚಾರ
ಒಎನ್‌ಜಿಸಿ, ಪವರ್ ಗ್ರಿಡ್, ಎನ್‌ಟಿಪಿಸಿ, ಇನ್ಫೋಸಿಸ್, ಸನ್ ಫಾರ್ಮಾ, ಎಚ್‌ಸಿಎಲ್ ಟೆಕ್, ಏಷ್ಯನ್ ಪೇಂಟ್ಸ್, ಎಂ & ಎಂ, ಡಾ.ರೆಡ್ಡಿಸ್ ಮತ್ತು ಎಸ್‌ಬಿಐ ಸೆನ್ಸೆಕ್ಸ್ 30 ಸೂಚ್ಯಂಕದಲ್ಲಿ ತಮ್ಮ ಲಾಭ ಮುಂದುವರೆಸಿದೆ. ಐಸಿಐಸಿಐ ಬ್ಯಾಂಕ್, ಕೊಟಾಕ್ ಮಹೀಂದ್ರಾ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ, ಟೈಟಾನ್, ರಿಲಯನ್ಸ್, ಎಚ್‌ಡಿಎಫ್‌ಸಿ ಮತ್ತು ಆಕ್ಸಿಸ್ ಬ್ಯಾಂಕ್ ನಷ್ಟದಲ್ಲಿವೆ.