ETV Bharat / business

ಸ್ಪೆಕ್ಟ್ರಮ್​ ಹರಾಜು: ದಾಖಲೆಯ 57,122.65 ಕೋಟಿ ರೂ. ತರಂಗಾಂತರ ಖರೀದಿಸಿದ ಜಿಯೋ - ಟೆಲಿಕಾಂ ಇಂಡಸ್ಟ್ರೀ ಹರಾಜು ಪ್ರಕ್ರಿಯೆ

ಬಹುನಿರೀಕ್ಷಿತ ಟೆಲಿಕಾಂ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ಆದಾಯ ಹರಿದು ಬಂದಿದ್ದು, ರಿಲಯನ್ಸ್​ ಜಿಯೋ ಹೊಸ ದಾಖಲೆ ನಿರ್ಮಾಣ ಮಾಡಿದೆ.

Reliance Jio
Reliance Jio
author img

By

Published : Mar 2, 2021, 10:37 PM IST

ನವದೆಹಲಿ: ಟೆಲಿಕಾಂ ಇಂಡಸ್ಟ್ರಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 77,815 ಕೋಟಿ ರೂ. ತರಂಗಾಂತರ ಖರೀದಿಯಾಗಿದ್ದು, ರಿಯಲಯ್ಸ್​ ಜಿಯೋದಿಂದ ಬರೋಬ್ಬರಿ 57,122.65 ಕೋಟಿ ರೂ.ಸ್ಪೆಕ್ಟ್ರಮ್​ ಖರೀದಿಯಾಗಿದೆ.

ಮುಂದಿನ ಐದು ವರ್ಷಗಳಿಗಾಗಿ ನಿನ್ನೆಯಿಂದ ಆರಂಭಗೊಂಡಿದ್ದ ಟೆಲಿಕಾಂ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ಇದೀಗ ಕೊನೆಗೊಂಡಿದ್ದು, ಒಟ್ಟು 77,814.80 ಕೋಟಿ ರೂ.ಗಳ ಏರ್​ವೇವ್​ ಖರೀದಿಯಾಗಿದೆ. ಬಿಲಿಯನೇರ್ ಮುಖೇಶ್​ ಅಂಬಾನಿ ನೇತೃತ್ವದ ರಿಲಯನ್ಸ್​ ಜಿಯೋ ಹೆಚ್ಚಿನ ತರಂಗಾಂತರ ಪಡೆದುಕೊಂಡಿದೆ.

ಇದನ್ನೂ ಓದಿ: ಸ್ಪೆಕ್ಟ್ರಮ್ ಹರಾಜು: ಮೊದಲ ದಿನ 77,164 ಕೋಟಿ ರೂ. ಜೇಬಿಗಿಳಿಸಿಕೊಂಡ ಕೇಂದ್ರ ಸರ್ಕಾರ

ಎರಡು ದಿನಗಳ ಹರಾಜಿನಲ್ಲಿ 855.60 ಮೆಗಾಹರ್ಟ್ಸ್​ ಬ್ಯಾಂಡ್​ ಸ್ಪೆಕ್ಟ್ರಮ್ ಅನ್ನು 77,814.80 ಕೋಟಿಗೆ ಖರೀದಿಸಲಾಗಿದೆ ಎಂದು ಟೆಲಿಕಾಂ ಕಾರ್ಯದರ್ಶಿ ಅನ್ಶು ಪ್ರಕಾಶ್ ತಿಳಿಸಿದ್ದಾರೆ.

ಪ್ರಮುಖವಾಗಿ ರಿಲಯನ್ಸ್‌ ಜಿಯೋದಿಂದ 57,122.65 ಕೋಟಿ ರೂ.ಗಳ ಸ್ಪೆಕ್ಟ್ರಮ್​, ಭಾರ್ತಿ ಏರ್ಟೆಲ್​ ಮತ್ತು ವೊಡಾಫೋನ್​​ ಐಡಿಯಾ ಕ್ರಮವಾಗಿ 8,699 ಕೋಟಿ ಮತ್ತು 1,993.40 ಕೋಟಿ ರೂ.ಗಳ ತರಂಗಾಂತರ ಖರೀದಿ ಮಾಡಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.