ETV Bharat / business

ರೆಕಾರ್ಡ್​ ಬ್ರೇಕಿಂಗ್​ ಬೆಲೆ ಏರಿಕೆ: ಚಿನ್ನದ ಬಳಿಕ ಬೆಳ್ಳಿಯ ಹಳೆ ದಾಖಲೆ ಧೂಳಿಪಟ..! - ಬೆಳ್ಳಿರ ಬೆಲೆ

ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆ.ಜೆ. ಬೆಳ್ಳಿಯ ಮೇಲೆ ₹ 2,000 ಏರಿಕೆಯಾಗಿ ₹ 45,000 ಗೆ ಮಾರಾಟ ಆಗಿದೆ. ಪ್ರತಿ 10 ಗ್ರಾಂ. ಚಿನ್ನಾಭರಣ ದರದಲ್ಲಿ ₹100 ಇಳಿಕೆಯಾಗಿ ಒಟ್ಟು ₹ 38,370ರಲ್ಲಿ ವಹಿವಾಟು ನಡೆಸಿತ್ತಿದೆ ಎಂದು ಆಲ್​ ಇಂಡಿಯಾ ಸರಫ ಅಸೋಸಿಯೇಷನ್​ ತಿಳಿಸಿದೆ.

ಸಾಂದರ್ಭಿಕ ಚಿತ್ರ
author img

By

Published : Aug 14, 2019, 8:08 AM IST

ನವದೆಹಲಿ: ಕಳೆದ ಕೆಲ ತಿಂಗಳಿಂದ ದೇಶಿಯ ಚಿನಿವಾರ ಪೇಟೆಯಲ್ಲಿ ಚಿನ್ನ- ಬೆಳ್ಳಿ ಧಾರಣಿಯಲ್ಲಿ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ. ಕಳೆದ ಗುರುವಾರ ಬಂಗಾರ ಬೆಲೆ ಸರ್ವಕಾಲಿಕ ಏರಿಕೆ ದಾಖಲಿಸಿ ವಾರ ಕಳೆಯುವುದರೊಳಗೆ ಬೆಳ್ಳಿಯ ಧಾರಣಿ ದಾಖಲೆಯ ಜಿಗಿತ ಕಂಡಿದೆ.

ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆ.ಜೆ. ಬೆಳ್ಳಿಯ ಮೇಲೆ ₹ 2,000 ಏರಿಕೆಯಾಗಿ ₹ 45,000 ಮಾರಾಟ ಆಗುತ್ತಿದೆ. ಪ್ರತಿ 10 ಗ್ರಾಂ. ಚಿನ್ನಾಭರಣ ದರದಲ್ಲಿ ₹100 ಇಳಿಕೆಯಾಗಿ ಒಟ್ಟು ₹ 38,370ರಲ್ಲಿ ವಹಿವಾಟು ನಡೆಸುತ್ತಿದೆ ಎಂದು ಆಲ್​ ಇಂಡಿಯಾ ಸರಫ ಅಸೋಸಿಯೇಷನ್​ ತಿಳಿಸಿದೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಂಡುಬರುತ್ತಿರುವ ಖರೀದಿಯ ಪ್ರವೃತ್ತಿಯಿಂದ ಬೆಳ್ಳಿ ಬೆಲೆಯಲ್ಲಿ ಸಾರ್ವಕಾಲಿಕ ಗರಿಷ್ಠ ಏರಿಕೆ ದಾಖಲಿಸಿದೆ. ಕೈಗಾರಿಕಾ ಘಟಕಗಳು ಮತ್ತು ನಾಣ್ಯ ತಯಾರಕರು ದರ ಹೆಚ್ಚಿಸುವುದರ ಜೊತೆಗೆ ಜಾಗತಿಕ ಬೆಳವಣಿಗೆಗಳು ಬಿಳಿ ಲೋಹದ ಏರಿಕೆಗೆ ಕಾರಣವಾಗಿದೆ ಎಂದು ಆಲ್​ ಇಂಡಿಯಾ ಸರಫ ಅಸೋಸಿಯೇಷನ್​ನ ಉಪಾಧ್ಯಕ್ಷ ಸುರೇಂದ್ರ ಜೈನ್​ ಹೇಳಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.