ETV Bharat / business

ಸತತ 8ನೇ ದಿನವೂ ಜಿಗಿದ ಇಂಧನ ದರ: ಬೆಂಗಳೂರಲ್ಲಿ 100 ರೂ. ಗಡಿಯತ್ತ ಪೆಟ್ರೋಲ್​!

ಕೊರೊನಾ ಬಿಕ್ಕಟ್ಟಿನಿಂದ ಕಳೆಗುಂದಿದ್ದ ತೈಲ ಬೇಡಿಕೆ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಉತ್ಪಾದನೆ ಪ್ರಮಾಣ ಕಡಿಗೊಳಿಸಿ ಕೃತಕ ದರ ಹೆಚ್ಚಳದ ಮೊರೆ ಹೋಗಿರುವ ಸೌದಿಯ ನಡೆಯಿಂದಾಗಿ ಕಳೆದ ಎರಡು ತಿಂಗಳಿಂದ ಚಿಲ್ಲರೆ ಇಂಧನ ಬೆಲೆ ಹೆಚ್ಚಳವಾಗುತ್ತಿದೆ. ಭಾರತದಲ್ಲಿ ಸಹ ಸತತ ಎಂಟನೇ ದಿನವೂ ಚಿಲ್ಲರೆ ಇಂಧನ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.

petrol
petrol
author img

By

Published : Feb 16, 2021, 11:53 AM IST

ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್​ನ ಚಿಲ್ಲರೆ ಬೆಲೆ ಏರಿಕೆ ಸತತ ಎಂಟನೇ ದಿನವೂ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ತೈಲ ದರ ಹೆಚ್ಚಳವಾಗಿದ್ದರಿಂದ ಬೆಲೆಗಳ ಏರಿಕೆ ಕಂಡು ಬಂದಿದೆ.

ತೈಲ ಮಾರುಕಟ್ಟೆ ವಿತರಣಾ ಕಂಪನಿಗಳು ಡೀಸೆಲ್‌ನ ಪಂಪ್ ಬೆಲೆಯನ್ನು ಪ್ರತಿ ಲೀಟರ್‌ಗೆ 35 ಪೈಸೆ ಮತ್ತು ಲೀಟರ್‌ ಪೆಟ್ರೋಲ್ ದರ 30 ಪೈಸೆಯಷ್ಟು ಹೆಚ್ಚಿಸಿವೆ. ಈ ಹೆಚ್ಚಳದಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಈಗ ಲೀಟರ್‌ಗೆ 89.29 ರೂ. ಮತ್ತು ಡೀಸೆಲ್‌ 79.70 ರೂ.ಯಲ್ಲಿ ಮಾರಾಟ ಆಗುತ್ತಿದೆ.

ಕಳೆದ ಏಳು ದಿನಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 2.36 ರೂ.ಗಳಷ್ಟು ಹೆಚ್ಚಳವಾಗಿದ್ದರೇ ಡೀಸೆಲ್ ದರ ಲೀಟರ್‌ ಮೇಲೆ 2.91 ರೂ.ಯಷ್ಟು ಏರಿಕೆಯಾಗಿದೆ. ದೇಶಾದ್ಯಂತ ಪೆಟ್ರೋಲ್ ಬೆಲೆ ಹೆಚ್ಚಳವು ಪ್ರತಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸ್ಥಳೀಯ ತೆರಿಗೆಗಳ ಮಟ್ಟವನ್ನು ಅವಲಂಬಿಸಿ ಪ್ರತಿ ಲೀಟರ್‌ ಪೆಟ್ರೋಲ್ ಮೇಲೆ 26 - 32 ಪೈಸೆ ಮತ್ತು ಡೀಸೆಲ್​ ಮೇಲೆ 30-35 ಪೈಸೆಗಳವರೆಗೆ ಹೆಚ್ಚಳವಾಗಿರಲಿದೆ.

ಇದನ್ನೂ ಓದಿ: ಕ್ರೂರ ರಕ್ತ ಚರಿತ್ರೆ ಮರೆತೇ ತವರಿಗೆ ಮರಳಲು ಪಂಡಿತರ ತವಕ: ಕುದಿ ಕಾಶ್ಮೀರದಲ್ಲಿ ನೆಮ್ಮದಿಯ ಸಿಂಚನ!

ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಕೇವಲ 4 ರೂ. ಹೆಚ್ಚಳವಾದರೇ (95.75 ರೂ.) ಮೂರು ಅಂಕಿ 100 ರೂ. ತಲುಪಿಲಿದೆ. ಡೀಸೆಲ್ ಬೆಲೆ ಲೀಟರ್‌ಗೆ 90 ರೂ.ಯಷ್ಟಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ಪ್ರೀಮಿಯಂ ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂ. ಗಡಿ ದಾಟಿದೆ.

ಮಂಗಳವಾರದ ದರ ಹೆಚ್ಚಳವು ಜಾಗತಿಕ ತೈಲ ಬೆಲೆಗಳ ನಡೆ (ಉತ್ಪನ್ನ ಮತ್ತು ಕಚ್ಚಾ) ಅನುಸರಿಸಿದೆ. ಇದು ಕಳೆದ ಕೆಲವು ದಿನಗಳಲ್ಲಿ ದಾಖಲೆಯ ಲಾಭ ಕಾಯ್ದುಕೊಂಡಿದ್ದು, ಕಚ್ಚಾ ಬ್ಯಾರೆಲ್ 63.5 ಡಾಲರ್​​ಗೆ ತಲುಪಿದೆ.

ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಮೇಲೆ 31 ಪೈಸೆ ಹೆಚ್ಚಳವಾಗಿ 92.28 ರೂ.ಯಲ್ಲಿ ಖರೀದಿಯಾಗುತ್ತಿದೆ. ಡೀಸೆಲ್​ ದರದಲ್ಲಿಯೂ ಸಹ 37 ಪೈಸೆ ಏರಿಕೆಯಾಗಿ 84.49 ರೂ.ಗೆ ಮುಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.