ETV Bharat / business

ಅಮೆರಿಕದ ಬೈಡನ್ ಬೆನ್ನುಹತ್ತಿದ ಮುಂಬೈ ಗೂಳಿ: ಷೇರುಪೇಟೆಯ ಹಳೆ ರೆಕಾರ್ಡ್​ ಪುಡಿಪುಡಿ!

ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 704 ಏರಿಕೆ ಕಂಡು 42,597 ಅಂಕಗಳ ಮಟ್ಟದ ತಲುಪಿದ್ದರೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಮೊದಲ ಬಾರಿಗೆ 12,461 ಅಂಕಗಳಿಗೆ ತಲುಪಿತು. ಇದು ಈ ದಿನದಂದು 206.60 ಅಂಕಗಳಷ್ಟು ಏರಿಕೆ ದಾಖಲಿಸಿತು. 2020ರ ಜನವರಿಯಲ್ಲಿ ಸೆನ್ಸೆಕ್ಸ್​ನ 42,273.87 ಅಂಕ ಹಾಗೂ ನಿಫ್ಟಿಯ 12,430.5 ಅಂಕ ಇದುವರೆಗಿನ ಸಾರ್ವಕಾಲಿಕ ಗರಿಷ್ಠ ಏರಿಕೆ ಆಗಿತ್ತು. ಇಂದು ಈ ದಾಖಲೆ ಅಳಿಸಿ ಹಾಕಿದೆ.

Sensex
ಗೂಳಿ
author img

By

Published : Nov 9, 2020, 4:07 PM IST

ಮುಂಬೈ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಅವರನ್ನು ವಿಜೇತರೆಂದು ಘೋಷಿಸಿದ್ದರಿಂದ ಬ್ಯಾಂಕ್​ ಮತ್ತು ಐಟಿ ಕಂಪನಿಗಳು ಸಕಾರಾತ್ಮಕ ಜಾಗತಿಕ ಸೂಚನೆಗಳ ನಡೆಸಿದ್ದು, ಇದರ ತತ್ಪರಿಣಾಮವಾಗಿ ದೇಶೀಯ ಬೆಂಚ್‌ಮಾರ್ಕ್ ಸೂಚ್ಯಂಕಗಳು ಸೋಮವಾರ ಜೀವಿತಾವಧಿಯಲ್ಲಿ ಗರಿಷ್ಠ ಮಟ್ಟ ತಲುಪಿದವು.

ಸೋಮವಾರದ ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 704 ಏರಿಕೆ ಕಂಡು 42,597 ಅಂಕಗಳ ಮಟ್ಟದ ತಲುಪಿದ್ದರೆ, ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಮೊದಲ ಬಾರಿಗೆ 12,461 ಅಂಕಗಳಿಗೆ ತಲುಪಿತು. ಇದು ಈ ದಿನದಂದು 206.60 ಅಂಕಗಳಷ್ಟು ಏರಿಕೆ ದಾಖಲಿಸಿತು. 2020ರ ಜನವರಿಯಲ್ಲಿ ಸೆನ್ಸೆಕ್ಸ್​ನ 42,273.87 ಅಂಕ ಹಾಗೂ ನಿಫ್ಟಿಯ 12,430.5 ಅಂಕ ಇದುವರೆಗಿನ ಸಾರ್ವಕಾಲಿಕ ಗರಿಷ್ಠ ಏರಿಕೆ ಆಗಿತ್ತು. ಇಂದು ಈ ದಾಖಲೆ ಅಳಿಸಿಹಾಕಿದೆ.

ನಿಫ್ಟಿ ಬ್ಯಾಂಕ್​ ವಿಭಾಗ ಶೇ 2.7ರಷ್ಟು ಏರಿಕೆ ದಾಖಲಿಸಿದೆ. ಭಾರತಿ ಏರ್‌ಟೆಲ್ ಮತ್ತು ಇಂಡಸ್​ಇಂಡ್​ ಬ್ಯಾಂಕ್ ದಿನದ ವಹಿವಾಟಿನಲ್ಲಿ ಟಾಪ್​ ಗೇನರ್​ಗಳಾದರು. ಸೆನ್ಸೆಕ್ಸ್​ ವಿಭಾಗದ 30 ಷೇರುಗಳಲ್ಲಿ ಬಜಾಜ್​ ಫೈನಾನ್ಸ್, ಐಟಿಸಿ ಹಾಗೂ ಮಾರುತಿ ಹೊರತುಪಡಿಸಿ ಉಳಿದ ಎಲ್ಲಾ ಷೇರುಗಳು ಗ್ರೀನ್​ ವಲಯದಲ್ಲಿ ವಹಿವಾಟು ನಡೆಸಿದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.