ETV Bharat / business

ಸೆನ್ಸೆಕ್ಸ್ 523 ಅಂಶ ಜಿಗಿತ: ₹ 11 ಲಕ್ಷ ಕೋಟಿ ದಾಟಿದ ರಿಲಯನ್ಸ್​ M-ಕ್ಯಾಪಿಟಲ್​

ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನೇತೃತ್ವದ ಕಂಪನಿಯ ನಿವ್ವಳ ಸಾಲ ಮುಕ್ತವಾಗಿದೆ ಎಂದು ಘೋಷಿಸಿದೆ. 2021ರ ಮಾರ್ಚ್ 31ರ ಸಾಲ ಮುಕ್ತವನ್ನು ಮುಂಚಿತವಾಗಿ ಗುರಿ ಸಾಧಿಸಿದೆ. ರಿಲಯನ್ಸ್ ಷೇರುಗಳ ಬೆಲೆಯಲ್ಲಿ ಶೇ 6.5ರಷ್ಟು ಏರಿಕೆ ಕಂಡು 1,764 ರೂ.ಗೆ ತಲುಪಿತು.

Sensex
ಸೆನ್ಸೆಕ್ಸ್​
author img

By

Published : Jun 19, 2020, 6:09 PM IST

ಮುಂಬೈ: ಬೆಂಚ್‌ಮಾರ್ಕ್ ಸೂಚ್ಯಂಕ ತನ್ನ ನೆಗೆತವನ್ನು ಸತತ ಎರಡನೇ ದಿನಕ್ಕೆ ವಿಸ್ತರಿಸಿದ್ದು, ಶುಕ್ರವಾರ ವಾರಾಂತ್ಯದ ವಹಿವಾಟು ಲಾಭದೊಂದಿಗೆ ಕೊನೆಗೊಳಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ನೇತೃತ್ವದ ಕಂಪನಿಯ ನಿವ್ವಳ ಸಾಲ ಮುಕ್ತವಾಗಿದೆ ಎಂದು ಘೋಷಿಸಿದೆ. 2021ರ ಮಾರ್ಚ್ 31ರ ಸಾಲ ಮುಕ್ತವನ್ನು ಮುಂಚಿತವಾಗಿ ಗುರಿ ಸಾಧಿಸಿದೆ. ರಿಲಯನ್ಸ್ ಷೇರುಗಳ ಬೆಲೆಯಲ್ಲಿ ಶೇ 6.5ರಷ್ಟು ಏರಿಕೆ ಕಂಡು 1,764 ರೂ.ಗೆ ತಲುಪಿತು. ಕಂಪನಿಯು 11 ಟ್ರಿಲಿಯನ್ ರೂ. ಮಾರುಕಟ್ಟೆ ಬಂಡವಾಳ ಹೊಂದಿದೆ. ಈ ಮೂಲಕ ಐತಿಹಾಸಿಕ ದಾಖಲೆ ಮಾಡಿದೆ.

ಎಸ್&ಪಿಯ ಬಿಎಸ್ಇ ಸೆನ್ಸೆಕ್ಸ್ ಇಂದು 524 ಅಂಶ ಅಥವಾ ಶೇ 1.53ರಷ್ಟು ಏರಿಕೆ ಕಂಡು 34,732ಕ್ಕೆ ತಲುಪಿದೆ. ಸೂಚ್ಯಂಕದ 30 ಷೇರುಗಳ ಪೈಕಿ 18 ಷೇರುಗಳು ಗ್ರೀನ್​ ವಲಯದಲ್ಲಿ ಮತ್ತು ಉಳಿದ 12 ಷೇರುಗಳು ಕೆಂಪು ಬಣ್ಣದಲ್ಲಿ ಕೊನೆಗೊಂಡಿವೆ. ಆರ್‌ಐಎಲ್ ಜೊತೆಗೆ ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಭಾರ್ತಿ ಏರ್‌ಟೆಲ್ ಗರಿಷ್ಠ ಲಾಭ ಮಾಡಿಕೊಂಡವು.

ಎನ್‌ಎಸ್‌ಇಯ ನಿಫ್ಟಿ- 50 153 ಅಂಶ ಅಥವಾ ಶೇ 1.5ರಷ್ಟು ಏರಿಕೆಯೊಂದಿಗೆ 10,244 ಅಂಶಗಳಲ್ಲಿ ಕೊನೆಗೊಂಡಿತು. 33 ಯೂನಿಟ್​ಗಳು ಪ್ರಗತಿ ಸಾಧಿಸಿದ್ದು, 16 ಯೂನಿಟ್​ಗಳು ಕ್ಷೀಣಿಸಿವೆ. ಒಂದು ಮಾತ್ರ ಯಥಾಸ್ಥಿತಿಯಲ್ಲಿ ಉಳಿದುಕೊಂಡಿತು.

ಕೊರೊನಾ ವೈರಸ್ ಪ್ರಕರಣಗಳಲ್ಲಿನ ಏರಿಕೆಯ ಆತಂಕಗಳು ಏಷ್ಯಾದ ಷೇರುಪೇಟೆಗಳು ಮತ್ತು ಅಮೆರಿಕದ ಸ್ಟಾಕ್ ಫ್ಯೂಚರ್​ ವಾರಾಂತ್ಯದ ಶುಕ್ರವಾರದ ಮೇಲೂ ಪರಿಣಾಮ ಬೀರಿತ್ತು. ಜಪಾನ್ ಹೊರಗಿನ ಎಂಎಸ್​​ಸಿಐನ ಏಷ್ಯಾ-ಪೆಸಿಫಿಕ್ ಷೇರುಗಳ ಸೂಚ್ಯಂಕವು ಶೇ 0.1ರಷ್ಟು ಏರಿಕೆಯಾಗಿದೆ. ಯುಎಸ್ ಎಸ್ & ಪಿ 500 ಇ-ಮಿನಿಸ್​​ ಏರುಪೇರು ಕಾಣುತ್ತಿದೆ.

ಚೀನಾದಲ್ಲಿನ ಷೇರುಗಳು ಶೇ. 1.15ರಷ್ಟು ಏರಿಕೆ ಕಂಡಿದ್ದು ಹಣಕಾಸು ಮತ್ತು ಆರೋಗ್ಯ ಕ್ಷೇತ್ರದ ಲಾಭದ ಪ್ರತಿಫಲವಾಗಿ. ಆದರೆ, ದಕ್ಷಿಣ ಕೊರಿಯಾದ ಷೇರುಗಳು ಶೇ. 0.25ರಷ್ಟು ಕುಸಿದಿವೆ. ಇದಕ್ಕೆ ಉತ್ತರ ಕೊರಿಯಾದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆಯ ಕಳವಳವೇ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.