ಮುಂಬೈ: ಜಾಗತಿಕ ಮಾರುಕಟ್ಟೆಗಳ ಋಣಾತ್ಮಕ ಸೂಚನೆಗಳಿಂದ ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್&ಟಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಇಳಿಕೆಯಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 600 ಅಂಕ ಕಳೆದುಕೊಂಡಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕ 617.10 ಅಂಕ ಅಥವಾ ಶೇ 1.25ರಷ್ಟು ಇಳಿಕೆ ಕಂಡು 48,599.42 ಅಂಕಗಳಿಗೆ ತಲುಪಿತ್ತು. ನಿಫ್ಟಿ ಕೂಟ 201.35 ಅಂಕ ಅಥವಾ ಶೇ 1.38ರಷ್ಟು ಕುಸಿದು 14,356.50 ಅಂಕಗಳಿಗೆ ತಲುಪಿದೆ.
ಬೆಳಗ್ಗೆ 11.45ರ ವೇಳೆಗೆ ಮುಂಬೈ ಸಂವೇದಿ ಸೂಚ್ಯಂಕ ಅತ್ಯಲ್ಪ 9.68 ಅಂಕ ಹೆಚ್ಚಳವಾಗಿ 49,226 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 26.85 ಅಂಕ ಏರಿಕೆಯೊಂದಿಗೆ 14,584.70 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.
ಇದನ್ನೂ ಓದಿ: 'ಮಹಿಳೆಯರ ಮೇಲಾಗುವ ದೌರ್ಜನ್ಯ ಪ್ರೋತ್ಸಾಹಿಸುವ ಕೆಟ್ಟ ಮನಸ್ಥಿತಿ': ರಾವತ್ ವಿರುದ್ಧ ಜಯಾ ಆಕ್ರೋಶ
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಒಎನ್‌ಜಿಸಿ ಶೇ 5ರಷ್ಟು ಕುಸಿದಿದ್ದು, ಎಲ್ & ಟಿ, ಬಜಾಜ್ ಫೈನಾನ್ಸ್, ಎಂ & ಎಂ, ಮಾರುತಿ, ಎಸ್‌ಬಿಐ, ಟೈಟಾನ್, ಎಚ್‌ಡಿಎಫ್‌ಸಿ ಟ್ವಿನ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಕೋಟಕ್ ಬ್ಯಾಂಕ್, ಭಾರ್ತಿ ಏರ್ಟೆಲ್ ಮತ್ತು ಪವರ್ ಗ್ರಿಡ್ ಟಾಪ್ ಗೇನರ್ಗಳಾದವು.
ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 585.10 ಅಂಕ ಅಥವಾ ಶೇ 1.17ರಷ್ಟು ಕುಗ್ಗಿ 49,216.52 ಅಂಕಗಳ ಮಟ್ಟದಲ್ಲಿ ಮತ್ತು ನಿಫ್ಟಿ 163.45 ಅಂಕ ಇಳಿದು 14,557.85 ಅಂಕಗಳಿಗೆ ತಲುಪಿತ್ತು.
ಗುರುವಾರ ವಹಿವಾಟಿನ ತನಕ ಬಿಎಸ್ಇ ಮಾನದಂಡವು ಐದು ದಿನಗಳ ಅವಧಿಗಳಲ್ಲಿ 2,062.99 ಅಂಕ ಅಥವಾ ಶೇ 4ರಷ್ಟು ಕ್ಷೀಣಿಸಿತ್ತು. ನಿನ್ನೆ 30 ಷೇರುಗಳ ಸೆನ್ಸೆಕ್ಸ್ 585.10 ಅಂಕ ಕುಸಿದು 49,216.52 ಅಂಕಗಳಿಗೆ ತಲುಪಿತು. ಕರಡಿ ಪ್ರವೃತ್ತಿ ಅನುಸರಿಸಿ ಬಿಎಸ್‌ಇ ಪಟ್ಟಿಮಾಡಿದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಆ ಐದು ದಿನಗಳಲ್ಲಿ 8,04,216.71 ಕೋಟಿ ರೂ.ಗಳಿಂದ ಇಳಿದು 2,01,22,436.75 ಕೋಟಿ ರೂ.ಗೆ ತಲುಪಿದೆ.