ಮುಂಬೈ: ಮುಂಬೈ ಷೇರು ಮಾರುಕಟ್ಟೆ ವಾರದ ಮೊದಲ ದಿನವೇ ಭಾರಿ ಏರಿಕೆ ಕಂಡಿದೆ. ವಹಿವಾಟಿನ ಆರಂಭದ ಮೊದಲ ಒಂದು ಗಂಟೆಯಲ್ಲೇ ಸೆನ್ಸೆಕ್ಸ್ ಒಂದು ಸಾವಿರಕ್ಕೂ ಅಧಿಕ ಅಂಕ ಏರಿಕೆಯಾಗಿದೆ.
ಸೋಮವಾರದ ಆರಂಭದ ಒಂದು ಗಂಟೆಯಲ್ಲಿ ಸೆನ್ಸೆಕ್ಸ್ 1,331 ಏರಿಕೆಯಾಗಿ 39,346 ಅಂಕದಲ್ಲಿ ವಹಿವಾಟು ನಡೆಸುತ್ತಿದೆ. ನಿಫ್ಟಿ 268 ಅಂಕ ಏರಿಕೆಯಾಗಿ 11,542ಕ್ಕೆ ಬಂದು ನಿಂತಿದೆ.
ಹಣಕಾಸು ಸಚಿವರ ಕ್ರಮ: ಭಾರತದಲ್ಲಿ ಅವಧಿಗೂ ಮೊದಲೇ ಬಂತು ದೀಪಾವಳಿ!
ಕಾರ್ಪೋರೇಟ್ ತೆರಿಗೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರದಂದು ಶೇ.25.17ಕ್ಕೆ ಇಳಿಸಿದ ಪರಿಣಾಮ ಇಂದಿನ ವಹಿವಾಟು ಏರುಗತಿಯಲ್ಲೇ ಆರಂಭ ಕಂಡಿದೆ. ಹಣಕಾಸು ಸಚಿವೆ ಶುಕ್ರವಾರ ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿದ ಸಮಯದಲ್ಲೇ ಸೆನ್ಸೆಕ್ಸ್ 2000 ಸಾವಿರ ಅಂಕ ಏರಿಕೆಯಾಗಿತ್ತು.
ಇಂದೇ ಮುಂಬೈ ಷೇರುಪೇಟೆಯಲ್ಲಿ ಪಟಾಕಿ ಸಿಡಿತ...ದೀಪಾವಳಿ ಸಂಭ್ರಮ! ಸೆನ್ಸೆಕ್ಸ್ 2000 ಅಂಕ ಜಿಗಿತ
ಕುಸಿಯುತ್ತಿರುವ ಆರ್ಥಿಕತೆಯನ್ನು ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರ ನೂತನ ಘೋಷಣೆಗಳನ್ನು ಮಾಡುತ್ತಿರುವುದರಿಂದ ಸಹಜವಾಗಿಯೇ ಹೂಡಿಕೆದಾರರಲ್ಲಿ ನಂಬಿಕೆ ಮೂಡಿಸಿದೆ.
-
Sensex jumps over 1,400 points, hotel stocks gain after GST rationalisation
— ANI Digital (@ani_digital) September 23, 2019 " class="align-text-top noRightClick twitterSection" data="
REad @ANI Story | https://t.co/BugHdARy3j pic.twitter.com/EiKNBZLasR
">Sensex jumps over 1,400 points, hotel stocks gain after GST rationalisation
— ANI Digital (@ani_digital) September 23, 2019
REad @ANI Story | https://t.co/BugHdARy3j pic.twitter.com/EiKNBZLasRSensex jumps over 1,400 points, hotel stocks gain after GST rationalisation
— ANI Digital (@ani_digital) September 23, 2019
REad @ANI Story | https://t.co/BugHdARy3j pic.twitter.com/EiKNBZLasR
ಇಂದಿನ ಆರಂಭಿಕ ವಹಿವಾಟಿನಲ್ಲಿ ಎಲ್&ಟಿ, ಐಟಿಸಿ, ಇಂಡಸ್ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಉತ್ತಮ ಗಳಿಕೆ ಪಡೆದಿದ್ದರೆ, ಇನ್ಫೋಸಿಸ್, ಟಿಸಿಎಸ್ ಹಾಗೂ ಟೆಕ್ ಎಂ ಷೇರುಗಳು ಕೊಂಚ ಕುಸಿತ ಕಂಡಿವೆ.
ಇಂದು ಜಿಎಸ್ಟಿ ಸರಳೀಕರಣ ಘೋಷಣೆ ಹಿನ್ನೆಲೆಯಲ್ಲಿ ಇಂದು ಮುಂಬೈ ಷೇರುಪೇಟೆ 1400 ಅಂಕಗಳ ಏರಿಕೆ ಕಾಣುವ ಮೂಲಕ 40 ಸಾವಿರದ ಗಡಿಯತ್ತ ನಾಗಾಲೋಟದಿಂದ ಓಡುತ್ತಿದೆ.