ಮುಂಬೈ : ದೇಶೀಯ ಷೇರು ಮಾರುಕಟ್ಟೆಗಳು ಬುಧವಾರದಂದು ನಕಾರಾತ್ಮಕವಾಗಿ ಕೊನೆಗೊಂಡಿವೆ. ಬೆಳಗ್ಗೆ ಋಣಾತ್ಮಕ ವಹಿವಾಟು ಪ್ರಾರಂಭಿಸಿದ ಸೂಚ್ಯಂಕಗಳು ಹಗಲಿನಲ್ಲಿ ಸ್ವಲ್ಪ ಚಂಚಲತೆ ತೋರಿಸಿದವು.
ಹೂಡಿಕೆದಾರರು ಅಲ್ಪಾವಧಿ ಲಾಭಕ್ಕೆ ಮೊರೆಹೋದರು ಮತ್ತು ಮತ್ತೆ ನಷ್ಟಕ್ಕೆ ಜಾರಿದರು. ಇಂಟ್ರಾಡೇ ಕನಿಷ್ಠ ಮಟ್ಟ ದಾಖಲಿಸಿದರು.
ಬೆಳಗ್ಗೆ 50,088 ಅಂಕಗಳಲ್ಲಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್ ಗರಿಷ್ಠ 50,279 ಮತ್ತು ಕನಿಷ್ಠ 49,831 ಅಂಕಗಳಿಗೆ ತಲುಪಿದೆ. ಇದು ಅಂತಿಮವಾಗಿ 290 ಅಂಕಗಳ ನಷ್ಟದೊಂದಿಗೆ 49,902 ಅಂಕಗಳಲ್ಲಿ ಮುಕ್ತಾಯವಾಯಿತು.
ಇದೇ ಪ್ರವೃತ್ತಿಯನ್ನು ಮುಂದುವರೆಸಿದ ನಿಫ್ಟಿ 15,058 ಅಂಕಗಳಿಂದ ಪ್ರಾರಂಭವಾಗಿ 15,133-15,008 ಅಂಕಗಳ ನಡುವೆ ಸಾಗಿತು. ಅಂತಿಮವಾಗಿ 77 ಅಂಕಗಳ ನಷ್ಟದೊಂದಿಗೆ 15,030 ಅಂಗಳಲ್ಲಿ ಕೊನೆಗೊಂಡಿತು. ನಿನ್ನೆಯ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 73.15 ರೂ.ಯಷ್ಟಿತ್ತು.
ಇದನ್ನೂ ಓದಿ: ಭಾರತದ ಕೋವಿಡ್ 2.0: 'ಆರ್ಥಿಕತೆಗಿಂತ ಮಾನವೀಯತೆ'ಯ ಬಿಕ್ಕಟ್ಟು- ಜಪಾನ್ ಬ್ರೋಕರೆಜ್
ಋಣಾತ್ಮಕ ಅಂತಾರಾಷ್ಟ್ರೀಯ ಸಂಕೇತಗಳ ಜೊತೆಗೆ ಪ್ರಮುಖ ವಲಯ ಸೂಚ್ಯಂಕಗಳು ಇಳಿಮುಖವಾಗಿದ್ದು, ಮಾರುಕಟ್ಟೆಯ ಮನೋಭಾವಕ್ಕೆ ಧಕ್ಕೆ ತಂದಿದೆ.
ಅಲ್ಲದೆ, ಹೂಡಿಕೆದಾರರು ಕಳೆದ ಎರಡು ದಿನಗಳಲ್ಲಿ ಲಾಭದ ಹಿನ್ನೆಲೆಯಲ್ಲಿ ಹೆಚ್ಚಿನ ಗಳಿಕೆಯ ಬಗ್ಗೆ ಆಶಾವಾದಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಚ್ಯಂಕಗಳು ನಷ್ಟಕ್ಕೆ ಒಳಗಾದವು.
ಸೆನ್ಸೆಕ್ಸ್ 30ರಲ್ಲಿ ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಬಜಾಜ್ ಆಟೋ, ಟೆಕ್ ಮಹೀಂದ್ರಾ, ಎಸ್‌ಬಿಐ, ಡಾ.ರೆಡ್ಡಿಸ್, ಎಂ&ಎಂ, ಬಜಾಜ್ ಫಿನ್‌ಸರ್ವ್,ಹೆಚ್‌ಡಿಎಫ್‌ಸಿ ಟ್ವಿನ್ಸ್, ಭಾರ್ತಿ ಏರ್‌ಟೆಲ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ನಷ್ಟಕ್ಕೀಡಾದವು.