ಮುಂಬೈ: ಸತತ ಎಂಟು ಸೆಷನ್‌ಗಳಲ್ಲೂ ಏರಿಕೆ ದಾಖಲಿಸಿದ್ದ ದೇಶೀಯ ಈಕ್ವಿಟಿ ಮಾರುಕಟ್ಟೆ, ಗುರುವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಆತ್ಮನಿರ್ಭರ ಭಾರತ 3.0 ಆರ್ಥಿಕ ಉತ್ತೇಜಕ ಪ್ಯಾಕೇಜ್ ಹೊರತಾಗಿ ಸೆನ್ಸೆಕ್ಸ್ ಕುಸಿಯಿತು.
ದಿನದ ವಹಿವಾಟು ಅಂತ್ಯದ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 236 ಅಂಕ ಇಳಿಕೆಯಾಗಿ 43,357 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 58 ಅಂಕ ಇಳಿಕೆಯಾಗಿ 12,691 ಅಂಕಗಳ ಮಟ್ಟದಲ್ಲಿ ಕೊನೆಗೊಂಡಿತು.
ಸೆನ್ಸೆಕ್ಸ್ ವಿಭಾಗದಲ್ಲಿ ಎಸ್ಬಿಐ ಶೇ 3.16ರಷ್ಟು ಇಳಿಕೆ ಮುಖೇನ ಗರಿಷ್ಠ ಕುಸಿತ ದಾಖಲಿಸಿತು. ಕೊಟಾಕ್ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಒಎನ್‌ಜಿಸಿ ನಂತರದ ಸ್ಥಾನದಲ್ಲಿವೆ.
ಮತ್ತೊಂದೆಡೆ ಎಚ್‌ಯುಎಲ್, ಐಟಿಸಿ, ಎಲ್ & ಟಿ, ಬಜಾಜ್ ಫಿನ್‌ಸರ್ವ್, ಟೆಕ್ ಮಹೀಂದ್ರಾ ಮತ್ತು ಬಜಾಜ್ ಫೈನಾನ್ಸ್ ಶೇ .2.89ರಷ್ಟು ಲಾಭದೊಂದಿಗೆ ಕೊನೆಗೊಂಡಿವೆ.
ಆರ್ಥಿಕತೆ ವೃದ್ಧಿಗೆ ಉತ್ತೇಜಕ ಕ್ರಮಗಳನ್ನು ಕೇಂದ್ರ ಸರ್ಕಾರ ವಿಸ್ತರಿಸಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2 ಕೋಟಿ ರೂ. ವರೆಗಿನ ಮನೆ ಮಾರಾಟಕ್ಕೆ ತೆರಿಗೆ ವಿನಾಯಿತಿ, ಸಣ್ಣ ಉದ್ಯಮಗಳಿಗೆ ಸಾಲ ಖಾತರಿ, ಹೊಸ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹ ಧನಗಳನ್ನು ಪ್ರಕಟಿಸಿದರು.
ಹೆಚ್ಚುವರಿ ರಸಗೊಬ್ಬರ ಸಬ್ಸಿಡಿ ಮತ್ತು ಉತ್ಪಾದನಾ ಘಟಕಗಳಿಗೆ ಈಗಾಗಲೇ ಘೋಷಿಸಲಾದ ಉತ್ಪಾದನಾ ಯೋಜನೆಯ 2.65 ಲಕ್ಷ ಕೋಟಿ ರೂ. ವೆಚ್ಚ, ಲಾಕ್‌ಡೌನ್ ವೇಳೆ ಘೋಷಿಸಲಾದ ಪ್ರಚೋದಕ ಪ್ಯಾಕೇಜ್ ಅನ್ನು ಒಟ್ಟು ಜಿಡಿಪಿಯ ಶೇ 15ರಷ್ಟಕ್ಕೆ ಹೆಚ್ಚಿಸಿದ್ದರು ಷೇರುಪೇಟೆಯಲ್ಲಿ ಉತ್ಸಹ ಕಂಡು ಬರಲಿಲ್ಲ.