ETV Bharat / business

ಮತದಾನದ ಹೊಸ್ತಿಲಲ್ಲಿ ಸೆನ್ಸೆಕ್ಸ್​ ಸಾರ್ವಕಾಲಿಕ ಹೊಸ ಎತ್ತರಕ್ಕೆ..!

ಮಂಗಳವಾರದ ವಹಿವಾಟಿನಲ್ಲಿ 185 ಅಂಕಗಳ ಜಿಗಿತದೊಂದಿಗೆ ಸಾರ್ವಕಾಲಿಕ ದಾಖಲೆಯ 39,056 ಅಂಶಗಳ ಮಟ್ಟದಲ್ಲಿ ಕೊನೆಗೊಳಿಸಿತು. ಇಂದು ಕೂಡ ತನ್ನ ದಾಖಲೆಯ ಜಿಗಿತ ಗೂಳಿಯ ತೆಕ್ಕೆಗೆ ಸಿಲುಕಿದೆ.

ಸಂಗ್ರಹ ಚಿತ್ರ
author img

By

Published : Apr 3, 2019, 11:24 AM IST

ಮುಂಬೈ: ಸತತ ಐದನೇ ದಿನವೂ ಏರು ಗತಿಯನ್ನು ಕಾಯ್ದುಕೊಂಡ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಬುಧವಾರದ ಆರಂಭಿಕ ಅವಧಿಯಲ್ಲಿ 150 ಅಂಕಗಳ ಜಿಗಿತದೊಂದಿಗೆ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ಹೆಚ್ಚಿಸಿಕೊಂಡಿದೆ.

ಬೆಳಗ್ಗೆ 10:40ರ ವೇಳೆಗೆ ಸೆನ್ಸೆಕ್ಸ್​ 186.58 ಅಂಕಗಳ ಎರಿಕೆಯೊಂದಿಗೆ 39,243 ಮಟ್ಟದಲ್ಲೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 34.75 ಅಂಕಗಳ ಏರಿಕೆಯೊಂದಿಗೆ 11,747 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿವೆ.

ಏಷ್ಯಾ ಮಾರುಕಟ್ಟೆಯ ಸಕಾರಾತ್ಮಕ ಪ್ರವೃತ್ತಿಯನ್ನು ಅನುಸರಿಸಿದ ಮುಂಬೈ ಪೇಟೆ ಬ್ಯಾಂಕಿಂಗ್ ಮತ್ತು ಆಟೋ ಷೇರಗಳ ಮೌಲ್ಯ ವೃದ್ಧಿಯಾಗಿದ್ದವು. ಇದನ್ನು ಅನುಸರಿಸಿ ಟಾಟಾ ಮೋಟಾರ್ಸ್​, ಭಾರ್ತಿ ಏರ್‌ಟೆಲ್‌, ಇಂಡಸ್​ಇಂಡ್​ ಬ್ಯಾಂಕ್​, ಎಚ್​ಡಿಎಫ್​ಸಿ ಟ್ವಿನ್ಸ್, ಪವರ್ ಗ್ರಿಡ್​, ಟಾಟಾ ಸ್ಟೀಲ್, ಯೆಸ್​ ಬ್ಯಾಂಕ್, ಎಸ್‌ಬಿಐ ಷೇರುಗಳ ದರ ಏರಿಕೆ ದಾಖಲಿಸಿದವು.

ಇನ್ಫೋಸಿಸ್​, ಎಚ್​ಯುಎಲ್​, ಎಲ್​&ಟಿ ಮತ್ತು ಸನ್ ಫಾರ್ಮಾ ಕಡಿಮೆ ದರಕ್ಕೆ ಕುಸಿದವು. ಹೂಡಿಕೆ ತಜ್ಞರ ಪ್ರಕಾರ, ವಿದೇಶಿ ಬಂಡವಾಳದ ಒಳ ಹರಿವು, ಆರ್​ಬಿಐನ ಬಡ್ಡಿ ದರ ಪರಾಮರ್ಶ ನೀತಿಯಡಿ ಕ್ರೆಡಿಟ್​ ರೆಟ್ ಕಡಿತ ಹಾಗೂ ಜಾಗತಿಕ ಆರ್ಥಿಕ ನಡೆ ಪೇಟೆಯಲ್ಲಿ ಪ್ರಭಾವ ಬೀರಲಿದೆ ಎಂದು ವಿಶ್ಲೇಷಿಸಿದ್ದಾರೆ.

ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 9 ಪೈಸೆ ಏರಿಕೆ ಕಂಡಿದ್ದು, ₹ 68.65ರಲ್ಲಿ ವಹಿವಾಟು ನಡೆಸುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ ₹ 543.36 ಕೋಟಿ ಷೇರುಗಳನ್ನು ಖರೀದಿಸಿದರೇ ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 437.70 ಕೋಟಿ ಷೇರುಗಳನ್ನು ಮಾರಾಟ ಮಾಡಿದರು.

Intro:Body:

ಮತದಾನದ ಹೊಸ್ತಿಲಲ್ಲಿ ಸೆನ್ಸೆಕ್ಸ್​ ಸಾರ್ವಕಾಲಿಕ ಹೊಸ ಎತ್ತರಕ್ಕೆ..!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.