ಮುಂಬೈ : ಕಳೆದೊಂದು ವಾರದಿಂದ ಕೋವಿಡ್ ಆತಂಕದ ಹೊರತಾಗಿಯೂ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರೆದಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 132 ಅಂಕಗಳ ಏರಿಕೆ ಕಂಡು 61,355ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 51 ಅಂಕಗಳ ಜಿಗಿತದ ಬಳಿಕ 18,307ರಲ್ಲಿದೆ.
ಆರಂಭಿಕ ವಹಿವಾಟಿನಲ್ಲಿ ಹೀರೋ ಮೊಟೊಕಾರ್ಪ್, ಒಎನ್‌ಜಿಸಿ, ಮಾರುತಿ ಸುಜುಕಿ, ಟಾಟಾ ಮೋಟರ್ಸ್, ಅದಾನಿ ಗ್ರೀನ್ ಎನರ್ಜಿ ಲಾಭಗಳಿಸಿದ ಅಗ್ರ ಕಂಪನಿಗಳಾಗಿವೆ. ಮತ್ತೊಂದೆಡೆ ಹೆಚ್‌ಸಿಎಲ್ ಟೆಕ್ನಾಲಜೀಸ್, ಗೇಲ್ ಇಂಡಿಯಾ, ಎಸಿಸಿ, ಅದಾನಿ ಟ್ರಾನ್ಸ್‌ಮಿಷನ್ ನಷ್ಟ ಅನುಭವಿಸಿದ ಪ್ರಮುಖ ಸಂಸ್ಥೆಗಳು.
ಇತ್ತೀಚಿನ ಮಾಹಿತಿ ಬಂದಾಗ ಸೆನ್ಸೆಕ್ಸ್ 121 ಅಂಕಗಳ ಏರಿಕೆಯೊಂದಿಗೆ 61,336ರಲ್ಲಿ ನಿಫ್ಟಿ 46 ಅಂಕಗಳ ಹೆಚ್ಚಳಗೊಂಡು 18,305ರಲ್ಲಿ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ: ನವ ಉದ್ಯಮದ ರಾಜ್ಯವನ್ನಾಗಿಸಲು ಬಿಯಾಂಡ್ ಬೆಂಗಳೂರು ಜಾರಿ: ಸಿಎಂ ಬೊಮ್ಮಾಯಿ