ಮುಂಬೈ: ಜಾಗತಿಕ ಮಟ್ಟದಲ್ಲಿ ಸಕಾರಾತ್ಮಕ ಸೂಚನೆಗಳ ಮಧ್ಯೆ ಹಣಕಾಸು ಮತ್ತು ಐಟಿ ಷೇರುಗಳ ಲಾಭದಿಂದಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 500 ಏರಿಕೆ ಕಂಡಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕವು ಬೆಳಗ್ಗೆ 11.46ರ ವೇಳೆಗೆ 384.93 ಅಂಕ ಹೆಚ್ಚಳವಾಗಿ 51,664.44 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 96.40 ಅಂಕ ಏರಿಕೆ ಕಂಡು 15,217.20 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಎಲ್ & ಟಿ ಶೇ 2ರಷ್ಟು ಏರಿಕೆ ಕಂಡಿದ್ದು ಒಎನ್‌ಜಿಸಿ, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಎಸ್‌ಬಿಐ, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಇನ್ಫೋಸಿಸ್ ಮತ್ತು ಟಿಸಿಎಸ್ ನಂತರದ ಸ್ಥಾನಗಳಲ್ಲಿವೆ. ಮತ್ತೊಂದೆಡೆ ಬಜಾಜ್ ಆಟೋ, ಸನ್ ಫಾರ್ಮಾ, ಎಚ್‌ಯುಎಲ್ ಮತ್ತು ಮಾರುತಿ ಟಾಫ್ ಲೂಸರ್ಗಳಾಗಿವೆ.
ಬುಧವಾರದ ವಹಿವಾಟಿನಂದು ಸೆನ್ಸೆಕ್ಸ್ 254.03 ಅಂಕ ಹೆಚ್ಚಳದಿಂದ 51,279.51 ಅಂಕಗಳಿಗೆ ತಲುಪಿದರೇ ನಿಫ್ಟಿ 76.40 ಅಂಕ ಏರಿಕೆ ಕಂಡು 15,174.80 ಅಂಕಗಳಲ್ಲಿ ಕೊನೆಗೊಂಡಿತು. ಮಹಾಶಿವರಾತ್ರಿ ನಿಮಿತ್ತ ಗುರುವಾರ ಮಾರುಕಟ್ಟೆಗಳು ಮುಚ್ಚಿದ್ದವು.
ಇದನ್ನೂ ಓದಿ: ಬಳಕೆದಾರರ ನಿಯಂತ್ರಣಕ್ಕೆ ಸಿಗಲಿದೆ ಗೂಗಲ್ ಪೇ ಡೇಟಾ: ಹೇಗೆ ಗೊತ್ತೇ?
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬಂಡವಾಳ ಮಾರುಕಟ್ಟೆಯಲ್ಲಿ ನಿವ್ವಳ ಮಾರಾಟಗಾರರಾಗಿದ್ದರು, 15.69 ಕೋಟಿ ರೂ. ಷೇರು ಖರೀದಿಸಿದರು. ಅಮೆರಿಕ ಅಧ್ಯಕ್ಷ ಜೋ ಬೈಡನ್ 1.9 ಟ್ರಿಲಿಯನ್ ಡಾಲರ್ ಅಮೆರಿಕನ್ ಉತ್ತೇಜಕ ಯೋಜನೆಗೆ ಸಹಿ ಹಾಕಿದ್ದು, ಇದು ದೇಶದ ಆರ್ಥಿಕತೆಗೆ ಪ್ರಮುಖ ಉತ್ತೇಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಯುಎಸ್ ವಹಿವಾಟುಗಳು ರಾತ್ರಿಯ ವ್ಯಾಪಾರದಲ್ಲಿ ಭರ್ಜರಿ ಲಾಭದೊಂದಿಗೆ ಕೊನೆಗೊಂಡಿತು.
ಏಷ್ಯಾದ ಶಾಂಘೈ, ಸಿಯೋಲ್ ಮತ್ತು ಟೋಕಿಯೊದಲ್ಲಿನ ಪೇಟೆಗಳು ಮಧ್ಯಂತರ ಅವಧಿಯಲ್ಲಿ ಸಕಾರಾತ್ಮಕ ವಹಿವಾಟು ನಡೆಸುತ್ತಿದ್ದರೇ ಹಾಂಕಾಂಗ್ ಕೆಂಪು ಬಣ್ಣದಲ್ಲಿದೆ. ಜಾಗತಿಕ ತೈಲ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ 0.14ರಷ್ಟು ಕಡಿಮೆಯಾಗಿ 69.53 ಡಾಲರ್‌ಗೆ ವಹಿವಾಟು ನಡೆಸುತ್ತಿದೆ.