ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರವೃತ್ತಿಯ ಮಧ್ಯೆ ಆರ್‌ಐಎಲ್, ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಗಳಿಕೆಯ ಲಾಭದ ಕಾರಣ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಸೂಚ್ಯಂಕ ಹೊಸ ಗರಿಷ್ಠ ಮಟ್ಟದಲ್ಲಿ ಮುಕ್ತಾಯಗೊಂಡಿದೆ.
ದೈನಂದಿನ ಕೋವಿಡ್-19 ಕ್ಯಾಸೆಲೋಡ್‌ನಲ್ಲಿ ಸ್ಥಿರ ಕುಸಿತವು ಹೂಡಿಕೆದಾರರ ಮನೋಭಾವ ಬಲಪಡಿಸಿದೆ ಎಂದು ದಲ್ಲಾಳಿಗಳು ತಿಳಿಸಿದ್ದಾರೆ.
30 ಷೇರುಗಳ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 514.56 ಅಂಕ ಹೆಚ್ಚಳದಿಂದ 51,937.44 ಅಂಕಗಳಿಗೆ ತಲುಪಿದರೇ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 147.15 ಅಂಕ ಏರಿಕೆ ಕಂಡು ತನ್ನ ಹೊಸ ಮುಕ್ತಾಯದ ದಾಖಲೆಯ 15,582.80 ಅಂಕಗಳಿಗೆ ತಲುಪಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ರಿಲಯನ್ಸ್ ಶೇ 3ರಷ್ಟು ಏರಿಕೆ ಕಂಡಿದ್ದು, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್, ಡಾ.ರೆಡ್ಡಿಸ್, ಮಾರುತಿ ಮತ್ತು ಐಟಿಸಿ ನಂತರದ ಸ್ಥಾನದಲ್ಲಿದೆ. ಮತ್ತೊಂದೆಡೆ ಎಂ&ಎಂ, ಇನ್ಫೋಸಿಸ್, ಇಂಡಸ್ಲ್ಯಾಂಡ್ ಬ್ಯಾಂಕ್, ಎಲ್&ಟಿ ಮತ್ತು ಸನ್ಫಾರ್ಮಾ ದಿನದ ಟಾಪ್ ಲೂಸರ್ಗಳಾದರು.
ಇದನ್ನೂ ಓದಿ: ಇಲ್ಲಿ ಗಮನಿಸಿ: ಸರ್ಕಾರಿ ಬ್ಯಾಂಕ್ಗಳಿಂದ ಕೊರೊನಾ ಚಿಕಿತ್ಸೆಗೆ 5 ಲಕ್ಷ ರೂ. ತನಕ ಪರ್ಸನಲ್ ಲೋನ್!
ಏಷ್ಯಾದ ಶಾಂಘೈ ಮತ್ತು ಸಿಯೋಲ್ ಪೇಟೆಗಳು ಸಕಾರಾತ್ಮಕ ನೋಟ್ಸ್ನಲ್ಲಿ ಕೊನೆಗೊಂಡರೆ, ಹಾಂಕಾಂಗ್ ಮತ್ತು ಟೋಕಿಯೊ ಕೆಂಪು ಬಣ್ಣದಲ್ಲಿವೆ. ಯುರೋಪ್ನಲ್ಲಿನ ಷೇರುಗಳು ಮಧ್ಯಂತರ ವಹಿವಾಟಿನಲ್ಲಿ ವ್ಯವಹಾರಗಳಲ್ಲಿ ಮಿಶ್ರ ನೋಟ್ಸ್ನ ಸಾಗಿದವು.
ಭಾರತವು 50 ದಿನಗಳಲ್ಲಿ 1,52,734 ಪ್ರಕರಣಗಳೊಂದಿಗೆ ಕಡಿಮೆ ದೈನಂದಿನ ಹೊಸ ಕೊರೊನಾವೈರಸ್ ಸೋಂಕು ವರದಿ ಮಾಡಿದೆ. ಸೋಮವಾರ ಇದು 2,80,47,534ಕ್ಕೆ ತಲುಪಿದೆ. ಆದರೆ ಸಕ್ರಿಯ ಕ್ಯಾಸೆಲೋಡ್ 20,26,092ಕ್ಕೆ ಇಳಿದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ಶೇ 1.08ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಗೆ 69.46 ಡಾಲರ್ನಲ್ಲಿ ವಹಿವಾಟು ನಡೆಸಿದೆ.