ಮುಂಬೈ: ಆಕ್ಸ್‌ಫರ್ಡ್ ವಿವಿಯಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಯ ಪ್ರಯೋಗಗಳನ್ನು ಪರವಾನಗಿ ಪಡೆದ ಕೂಡಲೇ ಭಾರತದಲ್ಲಿ ಆರಂಭಿಸುವುದಾಗಿ ಸಂಶೋಧಕರೊಂದಿಗೆ ಪಾಲುದಾರಿಕೆ ಹೊಂದಿರುವ ಭಾರತೀಯ ಸಂಸ್ಥೆ ಘೋಷಿಸಿದ ಬಳಿಕ, ಮುಂಬೇ ಷೇರುಪೇಟೆಯಲ್ಲಿ ಸೆನ್ಸೆಕ್ಸ್ ಏರಿಕೆ ದಾಖಲಿಸಿದೆ.
ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಂದು 511 ಅಂಕ ಏರಿಕೆ ದಾಖಲಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್, ಎಚ್‌ಡಿಎಫ್‌ಸಿ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.
ದಿನದ ಮಧ್ಯಂತರ ವಹಿವಾಟಿನಲ್ಲಿ 37,990.55 ಅಂಕಗಳ ಗರಿಷ್ಠ ಮಟ್ಟ ತಲುಪಿದ ನಂತರ, ಬಿಎಸ್ಇ ಸೆನ್ಸೆಕ್ಸ್ 511.34 ಅಂಕ ಅಥವಾ ಶೇ 1.37ರಷ್ಟು ಹೆಚ್ಚಳವಾಗಿ 37,930.33 ಅಂಕಗಳಿಗೆ ತಲುಪಿದೆ. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 140.05 ಅಂಕ ಅಥವಾ ಶೇ 1.27ರಷ್ಟು ಏರಿಕೆ ಕಂಡು 11,162.25 ಅಂಕಗಳಲ್ಲಿ ಕೊನೆಗೊಂಡಿತು.
ಮಾರುತಿ, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಕೊಟಾಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಟಾ್ಪ್ ಗೇನರ್ಗಳಾಗಿದ್ದರೇ ಬಜಾಜ್ ಫೈನಾನ್ಸ್, ಬಜಾಜ್ ಫಿನ್ಸರ್ವ್, ಏಷ್ಯಾನ್ ಪೆಯಿಂಟ್ಸ್, ಐಟಿಸಿ, ಎಂ&ಎಂ, ಭಾರ್ತಿ ಏರ್ಟೆಲ್ ಮತ್ತು ಸನ್ ಫಾರ್ಮಾ ಟಾಪ್ ನಷ್ಟಕ್ಕೆ ಒಳಗಾದವು.
ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆ ಸುರಕ್ಷಿತವಾಗಿದೆ. ಮನುಷ್ಯನ ದೇಹದೊಳಗೆ ಬಲವಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ ಎಂದು ವಿಜ್ಞಾನಿಗಳು ಸೋಮವಾರ ಘೋಷಿಸಿದರು.
ಭಾರತದಲ್ಲಿ ದೆಹಲಿಯ ಏಮ್ಸ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್-19 ಲಸಿಕೆಯ ಕೊವಾಕ್ಸಿನ್‌ಗಾಗಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಸ್ವಯಂಸೇವಕರನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದ್ದಾಗಿ ಹೇಳಿತು.