ETV Bharat / business

ತಗ್ಗದ ಒಮಿಕ್ರಾನ್‌ ಭೀತಿ ; ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 949 ಅಂಕಗಳ ಭಾರಿ ಕುಸಿತ

ಮಧ್ಯಾಹ್ನದ ವಹಿವಾಟಿನ ಸಮಯದಲ್ಲಿ ಮಾರಾಟ ಮತ್ತಷ್ಟು ತೀವ್ರಗೊಂಡಾಗ ಸಂಜೆಯ ವೇಳೆಗೂ ಸೂಚ್ಯಂಕ ಪತನದಲ್ಲೇ ಅಂತ್ಯ ಕಂಡಿವೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್ ರಂಗನಾಥನ್ ವಿವರಿಸಿದರು..

author img

By

Published : Dec 6, 2021, 5:17 PM IST

Updated : Dec 6, 2021, 6:58 PM IST

Sensex nosedives 949 pts on Omicron scare; Nifty tanks below 16,950
ತಗ್ಗದ ಒಮಿಕ್ರಾನ್‌ ಭೀತಿ; ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 949 ಅಂಕಗಳ ಭಾರಿ ಕುಸಿತ

ಮುಂಬೈ : ಕೋವಿಡ್‌ನ ರೂಪಾಂತರಿ ಒಮಿಕ್ರಾನ್ ಭೀತಿ ಮುಂದುವರಿದಿರುವುದು ಮುಂಬೈ ಷೇರುಪೇಟೆಗೆ ಭಾರಿ ಹೊಡೆತ ನೀಡಿದೆ. ವಾರದ ಆರಂಭದ ದಿನವಾದ ಇಂದಿನ ದಿನದಾಂತ್ಯಕ್ಕೆ ಸೆನ್ಸೆಕ್ಸ್‌ 949 ಅಂಕಗಳ ನಷ್ಟ ಅನುಭವಸಿದೆ. 56,747ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಇತ್ತ ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 284 ಅಂಕಗಳ ಪತನದ ಬಳಿಕ 16,912ಕ್ಕೆ ಇಳಿದಿದೆ.

ವಾರಾಂತ್ಯದಲ್ಲಿ ದೇಶದಲ್ಲಿನ ಒಮಿಕ್ರಾನ್‌ ಪ್ರಕರಣಗಳು ಹೆಚ್ಚಾ ಹಿನ್ನೆಲೆ ಭಾರತೀಯ ಷೇರುಗಳಲ್ಲಿ ಕುಸಿತ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಂಡಸ್‌ಇಂಡ್ ಬ್ಯಾಂಕ್ ಹೆಚ್ಚು ನಷ್ಟ ಹೊಂದಿದ ಕಂಪನಿಗಳ ಪೈಕಿ ಅಗ್ರಸ್ಥಾನದಲ್ಲಿತ್ತು.

ಈ ಬ್ಯಾಂಕ್‌ ಶೇ.4ರಷ್ಟು ಕುಸಿತ ಕಂಡಿದೆ. ಬಜಾಜ್ ಫಿನ್‌ಸರ್ವ್, ಭಾರ್ತಿ ಏರ್‌ಟೆಲ್, ಟಿಸಿಎಸ್, ಹೆಚ್‌ಸಿಎಲ್ ಹಾಗೂ ಟೆಕ್ ಮಹೀಂದ್ರಾ ನಂತರದ ಸ್ಥಾನದಲ್ಲಿವೆ. ದಿನದ ಆರಂಭದಿಂದಲೇ ಎಲ್ಲಾ ವಲಯಗಳ ಷೇರುಗಳು ನಷ್ಟದಲ್ಲಿ ಸಾಗಿದವು.

ಮಧ್ಯಾಹ್ನದ ವಹಿವಾಟಿನ ಸಮಯದಲ್ಲಿ ಮಾರಾಟ ಮತ್ತಷ್ಟು ತೀವ್ರಗೊಂಡಾಗ ಸಂಜೆಯ ವೇಳೆಗೂ ಸೂಚ್ಯಂಕ ಪತನದಲ್ಲೇ ಅಂತ್ಯ ಕಂಡಿವೆ ಎಂದು ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ಎಸ್ ರಂಗನಾಥನ್ ವಿವರಿಸಿದರು.

ಏಷ್ಯಾದ ಇತರೆ ಮಾರುಕಟ್ಟೆಗಳಾದ ಶಾಂಘೈ, ಹಾಂಗ್‌ಕಾಂಗ್ ಹಾಗೂ ಟೋಕಿಯೋದಲ್ಲಿನ ಷೇರುಗಳು ನಷ್ಟದೊಂದಿಗೆ ಕೊನೆಗೊಂಡರೆ, ಸಿಯೋಲ್ ಷೇರುಪೇಟೆ ಲಾಭದಲ್ಲಿ ಅಂತ್ಯಗೊಂಡಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 30 ಪೈಸೆ ಕುಸಿತಗೊಂಡ ಬಳಿಕ 75.42 ರೂಪಾಯಿಯಲ್ಲಿ ವ್ಯವಹಾರ ನಡೆಸಿದೆ. ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 2.23 ಶೇಕಡಾ ಏರಿಕೆಯಾಗಿ 71.44 ಡಾಲರ್‌ಗೆ ಮಾರಾಟವಾಗಿದೆ.

ಇದನ್ನೂ ಓದಿ: ದೇಶಕ್ಕೆ ಒಮಿಕ್ರಾನ್‌ ಪ್ರವೇಶದ ಎಫೆಕ್ಟ್‌ ; ಷೇರುಪೇಟೆಯಲ್ಲಿ ಸೆನ್ಸೆಕ್ಸ್‌ 764 ಅಂಕಗಳ ಕುಸಿತ

Last Updated : Dec 6, 2021, 6:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.