ಮುಂಬೈ: ಈಕ್ವಿಟಿ ಮಾನದಂಡ ಸೆನ್ಸೆಕ್ಸ್ ಆರಂಭಿಕ ನಷ್ಟದಿಂದ ಚೇತರಿಸಿಕೊಂಡ ನಂತರ ಸೂಚ್ಯಂಕದ ಹೆವಿವೇಯ್ಟ್ಸ್ ಷೇರುಗಳಾದ ರಿಲಯನ್ಸ್, ಟಿಸಿಎಸ್ ಮತ್ತು ಇನ್ಫೋಸಿಸ್ ಲಾಭದ ವಹಿವಾಟು ನಡೆಸುತ್ತಿವೆ.
ದಿನದ ಆರಂಭಿಕ ವಹಿವಾಟಿನಲ್ಲಿ 60 ಅಂಕ ಕುಸಿದ ನಂತರ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 487.48 ಅಂಕ ಹೆಚ್ಚುವರಿ ಏರಿಕೆಯಾಗಿ 50,285.20 ಅಂಕಗಳ ಮಟ್ಟದಲ್ಲಿ ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 158.95 ಅಂಕ ಏರಿಕೆಯಾಗಿ 14806.80 ಅಂಕಗಳಲ್ಲಿ ವಹಿವಾಟು ನಿರತವಾಗಿದೆ.
ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಇಂಡಸ್‌ಇಂಡ್ ಬ್ಯಾಂಕ್ ಶೇ 4.50ರಷ್ಟು ಏರಿಕೆ ಕಂಡಿದ್ದು ಡಾ. ರೆಡ್ಡೀಸ್, ಪವರ್‌ಗ್ರಿಡ್, ಟೆಕ್ ಮಹೀಂದ್ರಾ, ಎಂ&ಎಂ, ಸನ್ ಫಾರ್ಮಾ ಮತ್ತು ಆಕ್ಸಿಸ್ ಬ್ಯಾಂಕ್ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಮಾರುತಿ, ಕೊಟಕ್ ಬ್ಯಾಂಕ್, ಎಸ್‌ಬಿಐ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಟಾಪ್ ಲೂಸರ್ಗಳಾಗಿವೆ.
ಇದನ್ನೂ ಓದಿ: ರಾಜ್ಯಸಭೆ: ರೈತರ ಸಮಸ್ಯೆ ಚರ್ಚೆಗೆ ಆಡಳಿತ, ಪ್ರತಿಪಕ್ಷಗಳ ಮಧ್ಯೆ ಸಮ್ಮತಿ
ಎಫ್‌ಐಐ ಒಳಹರಿವಿನೊಂದಿಗೆ ಅಪಾಯವು ಮತ್ತೆ ಮಾರುಕಟ್ಟೆಯತ್ತ ಬಂದಿದೆ. ಎಚ್‌ಡಿಎಫ್‌ಸಿ ಟ್ವಿನ್ಸ್, ಟಾಟಾ ಮೋಟಾರ್ಸ್, ಆರ್‌ಐಎಲ್, ಐಸಿಐಸಿಐ ಬ್ಯಾಂಕ್ ಮತ್ತು ಇತರ ಅನೇಕ ಬ್ಲೂಚಿಪ್‌ಗಳಲ್ಲಿ ವಿತರಣಾ ಆಧಾರಿತ ಖರೀದಿ ಕಂಡು ಬಂದಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿಕೆ ವಿಜಯಕುಮಾರ್ ಹೇಳಿದರು.
ಬೆಳವಣಿಗೆಯ ಆಧಾರಿತ ದೊಡ್ಡ ಬಜೆಟ್ನಲ್ಲಿ ಖಾಸಗೀಕರಣಕ್ಕೆ ಒತ್ತು ನೀಡಿ, ಮಾರುಕಟ್ಟೆಯಲ್ಲಿ ಅಪಾಯ ಹಿಮ್ಮೆಟಿಸಿದ್ದರಿಂದ ನಿಫ್ಟಿ 2 ದಿನಗಳಲ್ಲಿ ಶೇ 7ರಷ್ಟು ಏರಿಕೆಯಾಗಿದೆ ಎಂದು ಎಂದರು.