ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಬೆಂಚ್‌ಮಾರ್ಕ್ ಸೂಚ್ಯಂಕಗಳು ಏಷ್ಯಾದ ಮಾರುಕಟ್ಟೆಯ ಅನುಕೂಲಕರ ಸೂಚನೆಗಳ ಮಧ್ಯೆ ಗುರುವಾರ ಬೆಳಗ್ಗೆ ಕಡಿಮೆ ಲಾಭದೊಂದಿಗೆ ವಹಿವಾಟು ನಡೆಸಿದವು.
ಬೆಳಗ್ಗೆ 9.30ರ ವೇಳೆಗೆ ಮುಂಬೈ ಷೇರು ಸೂಚ್ಯಂಕ ಸೆನ್ಸೆಕ್ಸ್ 200.23 ಅಂಕ ಹೆಚ್ಚಳವಾಗಿ 48721.96 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಸೂಚ್ಯಂಕ 50.50 ಅಂಕ ಏರಿಕೆಯಾಗಿ 14668.35 ಅಂಕಗಳ ಮಟ್ಟದಲ್ಲೂ ವಹಿವಾಟು ನಿರತವಾಗಿವೆ.
ವೈಯಕ್ತಿಕ ಷೇರುಗಳಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಬ್ಯಾಂಕಿನಲ್ಲಿ ನಿರ್ವಹಣಾ ನಿಯಂತ್ರಣದ ವರ್ಗಾವಣೆಯೊಂದಿಗೆ ಕಾರ್ಯತಂತ್ರದ ಹೂಡಿಕೆಗಾಗಿ ತಾತ್ವಿಕ ಅನುಮೋದನೆ ನೀಡಿದ ನಂತರ ಐಡಿಬಿಐ ಬ್ಯಾಂಕ್ ಶೇ 13 ರಷ್ಟು ಏರಿಕೆ ಕಂಡಿದೆ. ನಿಫ್ಟಿ ವಲಯ ಸೂಚ್ಯಂಕಗಳ ಗ್ರೀನ್ ಬಣ್ಣದಲ್ಲಿದ್ದು, ನಿಫ್ಟಿ ಫಾರ್ಮಾ ಸೂಚ್ಯಂಕದ ನೇತೃತ್ವದಲ್ಲಿ ಶೇ 0.9ರಷ್ಟು ಹೆಚ್ಚಳವಾಗಿದೆ.