ಮುಂಬೈ: ಕಳೆದ ಕೆಲ ದಿನಗಳಿಂದ ಹೂಡಿಕೆದಾರರ ಹುರುಪು ಹೆಚ್ಚಿಸಿದ್ದ ಷೇರು ಮಾರುಕಟ್ಟೆ ಇವತ್ತು ಆಘಾತ ನೀಡಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 700 ಅಂಶ ಹಾಗೂ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 220.80 ಅಂಶ ಕುಸಿತ ಕಂಡಿದೆ. ದಿನದ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯ ಭಾರಿ ನಷ್ಟ ಅನುಭವಿಸಿದೆ.
ಷೇರು ಪೇಟೆ ದಿಢೀರ್ ಕುಸಿತ ಕಂಡಿರುವುದರಿಂದ ಯೆಸ್ ಬ್ಯಾಂಕ್, ಇಂಡಸ್ ಬ್ಯಾಂಕ್, ಎಸ್ಬಿಐ ಸೇರಿದಂತೆ ಪ್ರಮುಖ ಬ್ಯಾಂಕ್ಗಳ ಷೇರು ಮೌಲ್ಯ ಕುಸಿದಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರು ಸಹಜವಾಗಿಯೇ ಆತಂಕ ಅನುಭವಿಸಿದ್ದಾರೆ.
ದಿನದಂತ್ಯಕ್ಕೆ ಸೆನ್ಸೆಕ್ಸ್ 38,305 ಅಂಶಗಳು ಹಾಗೂ ನಿಫ್ಟಿ 11,359 ಅಂಶಗಳಲ್ಲಿ ವಹಿವಾಟು ಮುಗಿಸಿದೆ.