ಮುಂಬೈ: ಅಂತಾರಾಷ್ಟ್ರೀಯ ಹಣಕಾಸು ನಿಧಿ ಜಾಗತಿಕ ಆರ್ಥಿಕ ಪ್ರಗತಿಯ ಅಂದಾಜು ಕಡಿತಗೊಳಿಸಿ ಶೇ 3.3ಕ್ಕೆ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ಏಷ್ಯನ್ ಷೇರು ಪೇಟೆಗಳಲ್ಲಿ ಹಿನ್ನಡೆಯನ್ನು ಅನುಸರಿಸಿರುವ ಮುಂಬೈ ಷೇರು ಪೇಟೆ ಬುಧವಾರದ ವಹಿವಾಟಿನಲ್ಲಿ ಮಹಾ ಕುಸಿತಕ್ಕೆ ಗುರಿಯಾಯಿತು.
ದಿನದ ಅಂತ್ಯದ ವೇಳೆಗೆ ಷೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 365.52 ಅಂಕಗಳ ನಷ್ಟದೊಂದಿಗೆ 38,573.70 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 84.25 ಅಂಕಗಳ ನಷ್ಟದೊಂದಿಗೆ 11,587.25 ಅಂಕಗಳ ಮಟ್ಟದಲ್ಲೂ ಮುಕ್ತಾಯ ಕಂಡವು.
ಡಾಲರ್ ಎದುರು ರೂಪಾಯಿ ಇಂದಿನ ವಹಿವಾಟಿನಲ್ಲಿ 11 ಪೈಸೆಗಳ ಚೇತರಿಕೆಯನ್ನು ಕಂಡ ₹ 69.18 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬೈ ಷೇರು ಪೇಟೆಯ ಇಂದಿನ ವಹಿವಾಟಿನಲ್ಲಿ ಟಾಪ್ ಗೇನರ್‌ಗಳಾಗಿ ಕೋಲ್ ಇಂಡಿಯಾ, ಒಎನ್ಜಿಸಿ, ಟಾಟಾ ಸ್ಟೀಲ್, ಎಂ&ಎಂ, ಟಾಟಾ ಮೋಟರ್, ರಿಲಯನ್ಸ್, ಕೋಟಕ್ ಬ್ಯಾಂಕ್, ಎಸ್ಬಿಐಎನ್, ಯೆಸ್ ಬ್ಯಾಂಕ್, ಪವರ್ ಗ್ರಿಡ್; ಟಾಪ್ ಲೂಸರ್: ಐಸಿಐಸಿಐ ಬ್ಯಾಂಕ್, ಎಲ್ಟಿ, ಏಷ್ಯಾನ್ ಪೆಯಿಂಟ್ಸ್, ಎಚ್ಸಿಎಲ್ ಟೆಕ್, ಎಕ್ಸಸ್ ಬ್ಯಾಂಕ್, ಮಾರುತಿ, ಎಚ್ಡಿಎಫ್ಸಿ ಬ್ಯಾಂಕ್.