ಮುಂಬೈ: ತೈಲ ಬೆಲೆ ಏರಿಕೆಯ ಆತಂಕದ ನಡುವೆ ಇಂದು ಕೂಡ ಮುಂಬೈ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 200 ಅಂಕಗಳ ಕುಸಿತ ಕಂಡು 57,071ರಲ್ಲಿ ವಹಿವಾಟು ನಡೆಸುತ್ತಿದೆ. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 54.9 ಅಂಶಗಳನ್ನು ಕಳೆದು ಕೊಂಡು 17 ಸಾವಿರ ಅಸುಪಾಸಿನಲ್ಲಿದೆ.
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಏಷ್ಯನ್ ಪೇಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ನೆಸ್ಲೆ ಇಂಡಿಯಾ ಹಾಗೂ ಆಕ್ಸಿಸ್ ಬ್ಯಾಂಕ್ ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ. ಮತ್ತೊಂದೆಡೆ ಟಾಟಾ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್ ಮತ್ತು ಪವರ್ ಗ್ರಿಡ್ ಷೇರುಗಳು ಲಾಭ ಗಳಿಸುತ್ತಿವೆ.
ಕಚ್ಚಾ ತೈಲದಲ್ಲಿನ ಅಲ್ಪಾವಧಿಯ ಚಂಚಲತೆಯು ಹೆಚ್ಚು ಆತಂಕಕಾರಿಯಾಗಿದ್ದು, ಷೇರುಪೇಟೆಯಲ್ಲಿನ ಏರಿಳಿತಕ್ಕೂ ಕಾರಣವಾಗಿದೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ ಕೆ ವಿಜಯಕುಮಾರ್ ಹೇಳಿದ್ದಾರೆ.
ಏಷ್ಯಾದ ಇತರ ಪೇಟೆಗಳಾದ ಶಾಂಘೈ, ಸಿಯೋಲ್, ಹಾಂಕಾಂಗ್ ಮತ್ತು ಟೋಕಿಯೋದಲ್ಲಿನ ಮಿಡ್-ಸೆಷನ್ ಡೀಲ್‌ಗಳಲ್ಲಿ ಹೆಚ್ಚಿನ ಲಾಭದಲ್ಲಿ ವಹಿವಾಟು ನಡೆಸುತ್ತಿವೆ. ಆದರೆ, ಅಮೆರಿಕ ಷೇರುಪೇಟೆ ಭಾರಿ ನಷ್ಟದಲ್ಲಿ ಕೊನೆಗೊಂಡಿದೆ. ನಿನ್ನೆ ದಿನದ ವಾಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 571.44 ಪಾಯಿಂಟ್ ಕುಸಿದು 57,292.49ರಲ್ಲಿ ಹಾಗೂ ನಿಫ್ಟಿ 169.45 ಪಾಯಿಂಟ್ ಅಥವಾ 0.98 ರಷ್ಟು ಕುಸಿದು 17,117.60ರಲ್ಲಿ ವ್ಯಾಪಾರ ಮುಗಿಸಿದ್ದವು.
ಅಂತಾರಾಷ್ಟ್ರೀಯ ತೈಲ ಮಾನದಂಡ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇ.2.14 ರಷ್ಟು ಏರಿಕೆಯಾಗಿ 118.09 ಡಾಲರ್‌ಗೆ ತಲುಪಿದೆ.
ಇದನ್ನೂ ಓದಿ: ನೀವು ಕ್ರೆಡಿಟ್ ಕಾರ್ಡ್ ಹೊಂದಿರುವಿರಾ? ಹಾಗಾದರೆ ಇವೆಲ್ಲ ಆಫರ್ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು!