ETV Bharat / business

ಫಾರ್ಮಾ, FMCG ಷೇರು ಖರೀದಿ ಚುರುಕು: 92 ಅಂಕ ಜಿಗಿದ ಸೆನ್ಸೆಕ್ಸ್​ - ಇಂದಿನ ಷೇರು ಮಾರುಕಟ್ಟೆ

ಆರಭಿಕ ಕುಸಿತದಿಂದ ಚೇತರಿಸಿಕೊಂಡ ಬಿಎಸ್‌ಇ ಸೂಚ್ಯಂಕವು ತನ್ನ ಹೊಸ ಜೀವಿತಾವಧಿಯಲ್ಲಿ ಗರಿಷ್ಠ 49,584.16ಕ್ಕೆ ತಲುಪಿದಾಗ 91.84 ಅಂಕ ಅಥವಾ 0.19ರಷ್ಟು ಹೆಚ್ಚಳವಾಯಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 30.75 ಅಂಕ ಅಥವಾ ಶೇ 0.21ರಷ್ಟು ಏರಿಕೆ ಕಂಡು 14,595.60 ಅಂಕಗಳ ಮಟ್ಟ ತಲುಪಿತು.

Sensex
ಸೆನ್ಸೆಕ್ಸ್
author img

By

Published : Jan 14, 2021, 4:23 PM IST

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಪ್ರವೃತ್ತಿಯ ಮಧ್ಯೆ ಇಂಡೆಕ್ಸ್ ಮೇಜರ್ಗಳಾದ ಟಿಸಿಎಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಲ್ & ಟಿ ಗಳಿಕೆಗಳಿಂದಾಗಿ ಈಕ್ವಿಟಿ ಬೆಂಚ್‌ಮಾರ್ಕ್ ಸೆನ್ಸೆಕ್ಸ್ ಗುರುವಾರ 92 ಅಂಕಗಳ ಮುನ್ನಡೆ ಸಾಧಿಸಿದೆ.

ಆರಂಭಿಕ ಕುಸಿತದಿಂದ ಚೇತರಿಸಿಕೊಂಡ ಬಿಎಸ್‌ಇ ಸೂಚ್ಯಂಕವು ತನ್ನ ಹೊಸ ಜೀವಿತಾವಧಿಯಲ್ಲಿ ಗರಿಷ್ಠ 49,584.16ಕ್ಕೆ ತಲುಪಿದಾಗ 91.84 ಅಂಕ ಅಥವಾ 0.19ರಷ್ಟು ಹೆಚ್ಚಳವಾಯಿತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 30.75 ಅಂಕ ಅಥವಾ ಶೇ 0.21ರಷ್ಟು ಏರಿಕೆ ಕಂಡು 14,595.60 ಅಂಕಗಳ ಮಟ್ಟ ತಲುಪಿತು.

ಸೆನ್ಸೆಕ್ಸ್ ಪ್ಯಾಕ್‌ನಲ್ಲಿ ಟಿಸಿಎಸ್ ಶೇ 3ರಷ್ಟು ಏರಿಕೆ ಕಂಡಿದ್ದು ಇಂಡಸ್ಇಂಡ್ ಬ್ಯಾಂಕ್, ಎಲ್ & ಟಿ, ಐಟಿಸಿ, ಎಚ್‌ಯುಎಲ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಸನ್ ಫಾರ್ಮಾ ನಂತರದ ಸ್ಥಾನದಲ್ಲಿವೆ. ಮತ್ತೊಂದೆಡೆ ಎಚ್‌ಸಿಎಲ್ ಟೆಕ್, ಆಕ್ಸಿಸ್ ಬ್ಯಾಂಕ್, ಏಷ್ಯಾನ್ ಪೆಯಿಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಇನ್ಫೋಸಿಸ್‌ ಹಿಂದುಳಿದವು.

ಇದನ್ನೂ ಓದಿ: ಚೇತರಿಕೆ ತರುವಾಯ ಮಧ್ಯಮಾವಧಿ ಆರ್ಥಿಕ ಬೆಳವಣಿಗೆ ಶೇ 6.5ಕ್ಕೆ ಸೀಮಿತಗೊಳಿಸಿದ ಫಿಚ್

ದೇಶೀಯ ಷೇರುಗಳು ದಿನದ ಕನಿಷ್ಠ ಮಟ್ಟದಿಂದ ಚುರುಕಾಗಿ ಚೇತರಿಸಿಕೊಂಡಿವೆ ಎಂಬುದು ಎಫ್‌ಎಂಸಿಜಿ ಮತ್ತು ಫಾರ್ಮಾ ಷೇರುಗಳೇ ಕಾರಣ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹೆಡ್ ಸ್ಟ್ರಾಟಜಿ ಬಿನೋದ್ ಮೋದಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.