ನವದೆಹಲಿ : ಗೃಹ ಸಾಲದ ಮೇಲಿನ ಪ್ರೊಸೆಸಿಂಗ್ ಫೀ ಮನ್ನಾ ಮಾಡಿ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಆದೇಶ ಹೊರಡಿಸಿದೆ. ಆಗಸ್ಟ್ ತಿಂಗಳ ಕೊನೆಯವರೆಗೆ ಗ್ರಾಹಕರಿಗೆ ಇದು ಅನ್ವಯವಾಗಲಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸದ್ಯ ಗೃಹ ಸಾಲದ ಮೇಲೆ ಶೇ. 0.40ರಷ್ಟು ಪ್ರೊಸೆಸಿಂಗ್ ಶುಲ್ಕ ಹೇರಿದ್ದು, 'ಮಾನ್ಸೂನ್ ಧಮಾಕಾ ಆಫರ್' ಮೂಲಕ ಈ ಯೋಜನೆ ಜಾರಿಗೊಳಿಸಿದೆ. ಹೀಗಾಗಿ, ಸೀಮಿತ ಅವಧಿಗೆ ಮಾತ್ರ ಈ ಆಫರ್ ಅನ್ವಯವಾಗಲಿದೆ. ಮನೆ ಖರೀದಿ ಮಾಡುವವರಿಗೆ ಎಸ್ಬಿಐ ಶೇ. 6.70ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದ್ದು, ಗ್ರಾಹಕರಿಗೆ ಇದಕ್ಕಿಂತಲೂ ಉತ್ತಮವಾದ ಅವಕಾಶ ಮತ್ತೊಮ್ಮೆ ಸಿಗುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿರಿ: ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ COVID ಉಲ್ಭಣ.. ಕೊರೊನಾ ಹೋರಾಟಕ್ಕೆ 1800 ಕೋಟಿ ರೂ. ನೀಡಿದ ಕೇಂದ್ರ
ಇದೀಗ ನೀಡಿರುವ 'Monsoon Dhamaka Offer' ಆಗಸ್ಟ್ 31, 2021ಕ್ಕೆ ಕೊನೆಯಾಗಲಿದೆ. ಪ್ರೊಸೆಸಿಂಗ್ ಶುಲ್ಕ ಮನ್ನಾ ಯೋಜನೆ ಮನೆ ಖರೀದಿಗೆ ಗ್ರಾಹಕರಿಗೆ ಮತ್ತಷ್ಟು ಸರಳವಾಗಲಿದೆ ಎಂದಿದೆ.
ಇದೇ ವಿಚಾರವಾಗಿ ಮಾತನಾಡಿರುವ ಎಸ್ಬಿಐನ ರಿಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಎಂಡಿ ಸಿ.ಎಸ್ ಶೆಟ್ಟಿ, ಅತಿ ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಸಾಲ ನೀಡಲಾಗುತ್ತಿದ್ದು, ಪ್ರತಿ ಭಾರತೀಯರಿಗೂ ಇದರ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಎಸ್ಬಿಐನ YONO App ಮೂಲಕ ಗೃಹ ಸಾಲಕ್ಕೆ ಅರ್ಜಿ ಹಾಕುವವರಿಗೆ ಶೇ.0.05ರ ವಿನಾಯತಿ ಸಹ ಸಿಗಲಿದೆ ಎಂದು ತಿಳಿಸಿದ್ದು, ಮಹಿಳೆಯರಿಗೆ 5 ಬೇಸಿಕ್ ಪಾಯಿಂಟ್ ವಿನಾಯತಿಗೆ ಅರ್ಹರು ಎಂದಿದೆ.