ನವದೆಹಲಿ: ವಿವೋ ಮತ್ತು ಶಿಯೋಮಿಯ ಬಳಿಕ ಸ್ಯಾಮ್‌ಸಂಗ್ ಇಂಡಿಯಾ, ಈಗ ಗ್ರಾಹಕರಿಗೆ ಸ್ಮಾರ್ಟ್‌ಫೋನ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸುವ ಆಯ್ಕೆ ನೀಡುತ್ತಿದೆ. ಜೊತೆಗೆ ಗ್ರಾಹಕರು ತಮ್ಮ ನೆರೆಹೊರೆಯ ಚಿಲ್ಲರೆ ಅಂಗಡಿಗಳಿಂದ ಹ್ಯಾಂಡ್‌ಸೆಟ್ ಪಡೆಯಬಹುದಾಗಿದೆ.
ಗ್ರಾಹಕರು ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಿ, ತಮ್ಮ ಸಮೀಪದ ಅಂಗಡಿಗಳಿಂದ ಪಡೆಯುವ ಯೋಜನೆಗೆ ಸ್ಯಾಮ್‌ಸಂಗ್ ಇಂಡಿಯಾ ಬೆನೊ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ ಎಂದು ಸ್ಯಾಮ್‌ಸಂಗ್ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್, ಸಹಸ್ರಾರು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳನ್ನು ಆನ್‌ಲೈನ್ ವ್ಯವಸ್ಥೆಯ ಭಾಗವಾಗಲು ಮತ್ತು ಹೆಚ್ಚಿನ ಗ್ರಾಹಕರನ್ನು ತಲುಪಲು ನೆರವಾಗುತ್ತದೆ. 20,000ಕ್ಕೂ ಹೆಚ್ಚು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳು ಈಗಾಗಲೇ ಸೈನ್ ಅಪ್ ಆಗಿದ್ದಾರೆ ಎಂದು ಹೇಳಿದೆ.
ಬೆನೊವ್‌ನೊಂದಿಗಿನ ನಮ್ಮ ಸಹಭಾಗಿತ್ವವು ವಿಶಾಲ ಆನ್‌ಲೈನ್ ಆಫ್‌ಲೈನ್ (ಒ 2 ಒ) ಕಾರ್ಯತಂತ್ರದ ಭಾಗವಾಗಿದೆ. ಗ್ರಾಹಕರಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಪ್ರಯೋಜನ ಒದಗಿಸುವ ಗುರಿ ಹೊಂದಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾ ಮೊಬೈಲ್ ಬಿಸಿನೆಸ್ನ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್ ಹೇಳಿದರು.
ಸಾಮಾಜಿಕ ಅಂತರ ಕಾಪಾಡಿಕೊಳ್ಳು ಈ ಸಂದರ್ಭದಲ್ಲಿ ನಮ್ಮ ಗ್ರಾಹಕರು ಭೌತಿಕ ಅಂಗಡಿಗೆ ಹೆಜ್ಜೆ ಹಾಕಬೇಕಾಗಿಲ್ಲ. ತಮ್ಮ ಹತ್ತಿರದ ನೆರೆಹೊರೆಯ ಅಂಗಡಿಗಳಿಂದ ಪಡೆಯಬಹುದು. ಹೊಸ ಪ್ಲಾಟ್‌ಫಾರ್ಮ್ ಸಾವಿರಾರು ಭೌತಿಕ ಚಿಲ್ಲರೆ ವ್ಯಾಪಾರಿಗಳಿಗೆ ಸ್ಥಳೀಯ ಗ್ರಾಹಕರೊಂದಿಗೆ ಆನ್‌ಲೈನ್‌ನಲ್ಲಿ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುತ್ತದೆ ಎಂದರು.