ETV Bharat / business

ಡಾಲರ್​ಗೆ ರೂಪಾಯಿ ಪಂಚ್; ಮುರಿಯಿತು 5 ತಿಂಗಳ ಹಿಂದಿನ ದಾಖಲೆ

ಸೋಮವಾರದ ಸಾಗರೋತ್ತರದ ಫಾರೆಕ್ಸ್​ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ 36 ಪೈಸೆ ಕುಸಿದಿದೆ. ರೂಪಾಯಿ ಮೌಲ್ಯ 9 ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆರ್‌ಬಿಐ ಕೇಂದ್ರಕ್ಕೆ 1.76 ಲಕ್ಷ ಕೋಟಿ ರೂ. ನೀಡುವಂತೆ ಸಂಬಂಧಿಸಿದ ಜಲನ್‌ ಸಮಿತಿ ಶಿಫಾರಸು ಹೊರ ಬೀಳುತ್ತಿದಂತೆ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Aug 27, 2019, 11:51 PM IST

ನವದೆಹಲಿ: ಆರ್​ಬಿಐನಿಂದ ಕೇಂದ್ರಕ್ಕೆ ದೊರೆಯಲಿರುವ 1.76 ಲಕ್ಷ ಕೋಟಿ ರೂ. ನಿಧಿಯಿಂದಾಗಿ ದೇಶೀಯ ಆರ್ಥಿಕತೆಯಲ್ಲಿ ಸಕಾರಾತ್ಮಕ ಮಾರುಕಟ್ಟೆ ಪ್ರವೃತ್ತಿ ಉಂಟಾಗಿದ್ದು, ಡಾಲರ್ ಎದುರು ರೂಪಾಯಿ ಒಂದೇ ದಿನದಲ್ಲಿ ಗರಿಷ್ಠ ಏರಿಕೆ ದಾಖಲಿಸಿ ಐದು ತಿಂಗಳ ಹಿಂದಿನ ರೆಕಾರ್ಡ್​ ಬ್ರೇಕ್ ಮಾಡಿದೆ.

ಸೋಮವಾರದ ಸಾಗರೋತ್ತರದ ಫಾರೆಕ್ಸ್​ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ 36 ಪೈಸೆ ಕುಸಿದ ರೂಪಾಯಿ ಒಂಬತ್ತು ತಿಂಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ಆರ್​ಬಿಐ ಕೇಂದ್ರಕ್ಕೆ 1.76 ಲಕ್ಷ ಕೋಟಿ ರೂ. ನೀಡುವಂತೆ ಜಲನ್ ಸಮಿತಿಯಲ್ಲಿ ಶಿಫಾರಸು ಹೊರ ಬೀಳುತ್ತಿದಂತೆ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ.

ಮಂಗಳವಾರದ ಫಾರೆಕ್ಸ್​ ಮಾರುಕಟ್ಟೆ ಡಾಲರ್ ಎದುರು ರೂಪಾಯಿ 54 ಪೈಸೆಯಷ್ಟು ಮೌಲ್ಯ ಹೆಚ್ಚಿಸಿಕೊಂಡು ₹ 71.48ಕ್ಕೆ ಏರಿಕೆಯಾಗಿದೆ. ಈ ಮೂಲಕ ಒಂದೇ ದಿನದ ವಹಿವಾಟಿನಲ್ಲಿ ಹೆಚ್ಚಿನ ಏರಿಕೆ ದಾಖಲಿಸಿದ ಐದು ತಿಂಗಳ ಹಿಂದಿನ ದಾಖಲೆ ಅಳಿಸಿ ಹಾಕಿದೆ. 2019ರ ಮಾರ್ಚ್​ 18ರಂದು 54 ಪೈಸೆ ಹೆಚ್ಚಳವಾಗಿ ₹ 71.48ರಲ್ಲಿ ವಹಿವಾಟು ನಡೆಸಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.