ಮುಂಬೈ: ಗ್ರೀನ್‌ಬ್ಯಾಕ್ ಸಾಮರ್ಥ್ಯದ ವಹಿವಾಟಿನ ಹಿನ್ನೆಲೆಯಲ್ಲಿ ಭಾರತೀಯ ಕರೆನ್ಸಿ ರೂಪಾಯಿ ಪ್ರತಿ ಡಾಲರ್‌ಗೆ 76.91 ರೂ.ಗೆ ತಲುಪುವ ಮೂಲಕ ಸಾರ್ವಕಾಲಿಕ ಕನಿಷ್ಠ ಕುಸಿತ ಕಂಡಿದೆ.
ತೈಲ ಬೆಲೆಗಳಲ್ಲಿನ ದೌರ್ಬಲ್ಯ ಮತ್ತು ಜಾಗತಿಕ ಹಾಗೂ ದೇಶೀಯ ಷೇರು ಮಾರುಕಟ್ಟೆಗಳಲ್ಲಿ ಚಂಚಲತೆಯು ಭಾರತೀಯ ಕರೆನ್ಸಿಯ ಕುಸಿಯಲು ಮುಖ್ಯ ಕಾರಣವಾಯಿತು.
ಆದಾಗ್ಯೂ ರೂಪಾಯಿ ಮೌಲ್ಯವು ಚೇತರಿಸಿಕೊಂಡಿದೆ. ಪ್ರಸ್ತುತ 76.80 ರೂ.ಯಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ವಹಿವಾಟಿನಂದು ಪ್ರತಿ ಡಾಲರ್‌ಗೆ 76.83 ರೂ.ಯಷ್ಟಿತ್ತು.
ರೂಪಾಯಿಯ ದೌರ್ಬಲ್ಯಕ್ಕೆ ವಿದೇಶಿ ಸಾಂಸ್ಥಿಕ ಹೂಡಿಕೆಗಳ ಹೊರಹರಿವು ಕೂಡ ಒಂದು ಪ್ರಮುಖ ಕಾರಣವಾಗಿದೆ. ಮಂಗಳವಾರ ಪೇಟೆಯಂದು ವಿದೇಶಿ ಹೂಡಿಕೆದಾರರು 2,095.23 ಕೋಟಿ ರೂ. ಷೇರು ಮಾರಾಟ ಮಾಡಿದ್ದಾರೆ.