ETV Bharat / business

ಷೇರು ಮಾರುಕಟ್ಟೆಯತ್ತ ಮುಖ ಮಾಡಿದ ಚಿಲ್ಲರೆ ವ್ಯಾಪಾರಸ್ಥರು: ಕಾರಣ? - ಎಸ್‌ಬಿಐ ವರದಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್ ಅವರು ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2020-21ನೇ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯಲ್ಲಿ ವೈಯಕ್ತಿಕ ಹೂಡಿಕೆದಾರರ ಸಂಖ್ಯೆ 142 ಲಕ್ಷದಷ್ಟು ಹೆಚ್ಚಾಗಿದೆ. ಕಳೆದ ವರ್ಷ ತೆರೆಯಲಾದ 152 ಲಕ್ಷ ಹೊಸ ಖಾತೆಗಳಲ್ಲಿ 122.5 ಲಕ್ಷ ಹೊಸ ಖಾತೆಗಳನ್ನು ಸಿಡಿಎಸ್‌ಎಲ್‌ನಲ್ಲಿ ತೆರೆಯಲಾಗಿದ್ದು, ಎನ್‌ಎಸ್‌ಡಿಎಲ್‌ನಲ್ಲಿ 19.7 ಲಕ್ಷ ತೆರೆಯಲಾಗಿದೆ ಎಂದು ಎಸ್‌ಬಿಐ ವರದಿ ತಿಳಿಸಿದೆ.

SBI report
ಷೇರು ಮಾರುಕಟ್ಟೆ
author img

By

Published : Jun 22, 2021, 6:42 PM IST

ನವದೆಹಲಿ: ಕಳೆದ 14 ತಿಂಗಳುಗಳಿಂದ ದೇಶವು ಕೋವಿಡ್ -19ಗೆ ತುತ್ತಾಗಿ ಎಲ್ಲಾ ಕ್ಷೇತ್ರದ ಜನರ ಮೇಲೆ ಪರಿಣಾಮ ಬೀರಿತ್ತು. ಈ ಸಂದರ್ಭದಲ್ಲಿ ಚಿಲ್ಲರೆ ಹೂಡಿಕೆದಾರರು, ಸಾಮಾನ್ಯ ಗೃಹ ಹೂಡಿಕೆದಾರರು ದೊಡ್ಡ ಪ್ರಮಾಣದಲ್ಲಿ ಷೇರು ಮಾರುಕಟ್ಟೆಗಳತ್ತ ಮುಖ ಮಾಡಿದ್ದಾರೆ ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಮೂಹ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್ ಅವರು ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2020-21ನೇ ಹಣಕಾಸು ವರ್ಷದಲ್ಲಿ ಮಾರುಕಟ್ಟೆಯಲ್ಲಿ ವೈಯಕ್ತಿಕ ಹೂಡಿಕೆದಾರರ ಸಂಖ್ಯೆ 142 ಲಕ್ಷದಷ್ಟು ಹೆಚ್ಚಾಗಿದೆ. ಕಳೆದ ವರ್ಷ ತೆರೆಯಲಾದ 152 ಲಕ್ಷ ಹೊಸ ಖಾತೆಗಳಲ್ಲಿ 122.5 ಲಕ್ಷ ಹೊಸ ಖಾತೆಗಳನ್ನು ಸಿಡಿಎಸ್‌ಎಲ್‌ನಲ್ಲಿ ತೆರೆಯಲಾಗಿದ್ದು, ಎನ್‌ಎಸ್‌ಡಿಎಲ್‌ನಲ್ಲಿ 19.7 ಲಕ್ಷ ತೆರೆಯಲಾಗಿದೆ ಎಂದು ಎಸ್‌ಬಿಐ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ಪ್ರವೃತ್ತಿ ಮುಂದುವರೆದಿದೆ. ಈ ವರ್ಷದ ಮೊದಲ ಎರಡು ತಿಂಗಳಲ್ಲಿ (ಏಪ್ರಿಲ್-ಮೇ) 44.7 ಲಕ್ಷ ಹೊಸ ಚಿಲ್ಲರೆ ಹೂಡಿಕೆದಾರರ ಖಾತೆಗಳನ್ನು ಸೇರಿಸಲಾಗಿದೆ. ಇದು ಷೇರುಗಳ ವಹಿವಾಟಿಗೆ ತೆರೆದ ಹೊಸ ಖಾತೆಗಳ ಸಂಖ್ಯೆ ಮಾತ್ರವಲ್ಲದೆ, ಷೇರು ವಿನಿಮಯದ ಒಟ್ಟು ವಹಿವಾಟಿನಲ್ಲಿ ವೈಯಕ್ತಿಕ ಹೂಡಿಕೆದಾರರ ಪಾಲು ಕೂಡ ಮಾರ್ಚ್ 2020 ರಲ್ಲಿ 39% ರಿಂದ ಮಾರ್ಚ್ 2021 ರಲ್ಲಿ 45% ಕ್ಕೆ ಏರಿದೆ ಎಂದು ಎನ್ಎಸ್ಇ ಅಂಕಿಅಂಶಗಳು ತಿಳಿಸಿವೆ.

ಭಾರತೀಯ ಮಧ್ಯಮ ವರ್ಗದ ಹೂಡಿಕೆದಾರರು ಸಾಂಪ್ರದಾಯಿಕ ಉಳಿತಾಯ ಸಾಧನಗಳಾದ ಬ್ಯಾಂಕ್ ಠೇವಣಿ, ಸ್ಥಿರ ಠೇವಣಿ, ಭವಿಷ್ಯ ನಿಧಿ ಖಾತೆಗಳು, ಅಂಚೆ ಕಚೇರಿ ಉಳಿತಾಯ ಮತ್ತು ಸ್ಥಿರ ಠೇವಣಿ ಯೋಜನೆಗಳು, ಎಲ್‌ಐಸಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಇನ್ನೂ ಕೆಲವರು ಚಿನ್ನ ಮತ್ತು ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡುತ್ತಾರೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ₹ 99.99: ಮುಂಬೈನಲ್ಲಿ ಹೊಸ ದಾಖಲೆ

ಭಾರತದ ಒಟ್ಟಾರೆ ಉಳಿತಾಯಕ್ಕೆ ಮನೆಯ ಉಳಿತಾಯ ಪ್ರಮುಖ ಕಾರಣವಾಗಿದೆ. ಮನೆಯ ಉಳಿತಾಯದಲ್ಲಿ, ಗಮನಾರ್ಹ ಭಾಗ, ಸುಮಾರು 41% ಆರ್ಥಿಕ ಉಳಿತಾಯದಲ್ಲಿದೆ ಎಂದು ಎಸ್‌ಬಿಐ ವರದಿಯಲ್ಲಿ ವಿವರಿಸಲಾಗಿದೆ. ಆದಾಗ್ಯೂ, ಕೋವಿಡ್ -19 ಲಾಕ್‌ಡೌನ್ ಅವಧಿಯಲ್ಲಿ ಕಂಡುಬರುವ ಸ್ಟಾಕ್ ಮಾರುಕಟ್ಟೆಗಳಲ್ಲಿ ಸ್ಥಿರವಾದ ಏರಿಕೆ ಈ ಮಧ್ಯಮ ವರ್ಗದ ವೈಯಕ್ತಿಕ ಹೂಡಿಕೆದಾರರನ್ನು ಷೇರು ಮಾರುಕಟ್ಟೆಗಳತ್ತ ಆಕರ್ಷಿಸಿದೆ.

ಜಾಗತಿಕವಾಗಿ, ಕಳೆದ ಒಂದು ವರ್ಷದಲ್ಲಿ ವಿಶ್ವದಾದ್ಯಂತದ ಸ್ಟಾಕ್ ಮಾರುಕಟ್ಟೆಗಳಲ್ಲಿ ಮಾರುಕಟ್ಟೆ ಬಂಡವಾಳೀಕರಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಆದರೆ ಭಾರತದ ವಿಷಯದಲ್ಲಿ ಇದು ಇತರ ಪ್ರಮುಖ ದೇಶಗಳಿಗಿಂತ ಹೆಚ್ಚಾಗಿದೆ. ಸೆನ್ಸೆಕ್ಸ್‌ನ ಮಾರುಕಟ್ಟೆ ಬಂಡವಾಳೀಕರಣವು ಒಂದು ವರ್ಷದ ಹಿಂದೆ ಅದರ ಮೌಲ್ಯಕ್ಕಿಂತ 1.8 ಪಟ್ಟು ಹೆಚ್ಚಾಗಿದೆ. ಭಾರತದ ಮಾನದಂಡ 30-ಷೇರುಗಳ ಸೂಚ್ಯಂಕ- ಬಿಎಸ್ಇ ಸೆನ್ಸೆಕ್ಸ್ 2020ರ ಏಪ್ರಿಲ್ ಆರಂಭದಲ್ಲಿ 28,265 ರಿಂದ ಈಗ 52,000 ಕ್ಕಿಂತ ಹೆಚ್ಚಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.