ETV Bharat / business

ಒಂದೇ ತಿಂಗಳಲ್ಲಿ ಜಿಯೋಗೆ 79 ಲಕ್ಷ ಹೊಸ ಮೊಬೈಲ್‌ ಬಳಕೆದಾರರು - ಐಡಿಯಾ

ಕಳೆದ ಮಾರ್ಚ್‌ ತಿಂಗಳಲ್ಲಿ ಜಿಯೋ ಸಂಸ್ಥೆಗೆ 79.18 ಲಕ್ಷ ಮಂದಿ ಮೊಬೈಲ್‌ ಬಳಕೆದಾರರನ್ನು ಹೆಚ್ಚಿಸಿಕೊಂಡಿದೆ. ಏರ್‌ಟೆಲ್‌, ಐಡಿಯಾಗಿಂತ ಇದು ಅಧಿಕವಾಗಿದೆ.

reliance jio adds over 79 lakh mobile subscribers in march trai data
ಒಂದೇ ತಿಂಗಳಲ್ಲಿ ಜಿಯೋಗೆ 79 ಲಕ್ಷ ಹೊಸ ಮೊಬೈಲ್‌ ಬಳಕೆದಾರರು
author img

By

Published : Jun 18, 2021, 11:01 PM IST

ನವದೆಹಲಿ: ಮಾರ್ಚ್‌ ತಿಂಗಳಲ್ಲಿ ಜಿಯೋ ಸಂಸ್ಥೆಗೆ 79.18 ಲಕ್ಷ ಮಂದಿ ಮೊಬೈಲ್‌ ಬಳಕೆದಾರರು ಹೆಚ್ಚಾಗಿದ್ದಾರೆ ಎಂದು ಟ್ರಾಯ್‌ ತಿಳಿಸಿದೆ. ಜಿಯೋ ಸಮೀಪ ಸ್ಪರ್ಧಿಗಳಾದ ಏರ್‌ಟೆಲ್‌, ಐಡಿಯಾಗಿಂತ ಇದು ಅಧಿಕವಾಗಿದೆ. ಇದೇ ಅವಧಿಯಲ್ಲಿ ಏರ್‌ಟೆಲ್‌ಗೆ 40.5 ಲಕ್ಷ ಮಂದಿ, ವೊಡಾಫೋನ್‌ ಐಡಿಯಾ 10.8 ಲಕ್ಷ ಮಂದಿ ಹೊಸ ಬಳಕೆ ದಾರರನ್ನು ಹೆಚ್ಚಿಸಿಕೊಂಡಿವೆ.

ಮಾರ್ಚ್ ತಿಂಗಳ ಹೊಸ ಗ್ರಾಹಕರ ಬಳಿಕ ಇದೀಗ ಜಿಯೋದಲ್ಲಿ 42.9 ಕೋಟಿ, ಏರ್‌ಟೆಲ್‌ನಲ್ಲಿ 35.23 ಕೋಟಿ, ಐಡಿಯಾ ವೋಡಾಫೋನ್‌ನಲ್ಲಿ 28.37 ಕೋಟಿ ಬಳಕೆದಾರರು ಇದ್ದಾರೆ. ದೇಶದಲ್ಲಿ ಒಟ್ಟು ಟೆಲಫೋನ್‌ ಮಾರ್ಚ್ ಅಂತ್ಯದ ವೇಳೆಗೆ ದೇಶದ ಒಟ್ಟು ದೂರವಾಣಿ ಚಂದಾದಾರರ ಸಂಖ್ಯೆ 120.1 ಕೋಟಿ ತಲುಪಿದೆ ಎಂದು ಟ್ರಾಯ್ ಹೇಳಿದೆ. ಇದು ತಿಂಗಳಿಗೆ ಶೇಕಡಾ 1.12 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಮಾರ್ಚ್​​​​ನಲ್ಲಿ ಇದು ನಗರ ಪ್ರದೇಶಗಳಲ್ಲಿ ಶೇಕಡಾ 0.97 ಮತ್ತು ಗ್ರಾಮೀಣ ಪ್ರದೇಶದಲ್ಲಿ 1.37 ರಷ್ಟು ಏರಿಕೆಯಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.