ETV Bharat / business

ರಿಲಯನ್ಸ್​​ ಸಿಬ್ಬಂದಿ ಸಂಬಳದಲ್ಲಿ ಶೇ10 - 50ರಷ್ಟು ಕಡಿತ

ದೇಶದಲ್ಲಿ ಹೇರಲಾಗಿರುವ ಲಾಕ್​ಡೌನ್​ ಅನೇಕ ಸಂಕಷ್ಟ ತಂದಿಟ್ಟಿದ್ದು, ಇದರಿಂದ ದೊಡ್ಡ ದೊಡ್ಡ ಸಂಸ್ಥೆಗಳು ಲಾಭವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಮುಖೇಶ್​ ಅಂಬಾನಿ ನೇತೃತ್ವದ ರಿಲಯನ್ಸ್​ ಇಂಡಸ್ಟ್ರೀ ಕೂಡ ಇದೀಗ ತೊಂದರೆಗೊಳಗಾಗಿದೆ.

author img

By

Published : Apr 30, 2020, 5:00 PM IST

Reliance cuts employees' salary
Reliance cuts employees' salary

ಮುಂಬೈ: ದೇಶಾದ್ಯಂತ ಮಾರ್ಚ್​​ 25ರಿಂದ ಹೇರಿಕೆ ಮಾಡಲಾಗಿರುವ ಲಾಕ್​ಡೌನ್​​ ಸದ್ಯ ಕೂಡ ದೇಶದಲ್ಲಿ ಮುಂದುವರೆದಿದೆ. ಹೀಗಾಗಿ ಕೆಲವೊಂದು ಕಂಪನಿಗಳು ಲಾಭಗಳಿಸಲಾಗದೇ ತೊಂದರೆ ಅನುಭವಿಸುತ್ತಿದ್ದು, ಇದರಿಂದ ಭಾರತದ ಅತಿದೊಡ್ಡ ಕಂಪನಿ ರಿಲಯನ್ಸ್​​​ ಇಂಡಸ್ಟ್ರೀ ಕೂಡ ಹೊರತಾಗಿಲ್ಲ.

ರಿಲಯನ್ಸ್​ ಇಂಡಸ್ಟ್ರೀಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಸಂಬಳದಲ್ಲಿ ಶೇ.10 - 50ರಷ್ಟು ಕಡಿತಗೊಳಿಸಲು ಇದೀಗ ಮುಖೇಶ್ ಅಂಬಾನಿ ನಿರ್ಧರಿಸಿದ್ದಾರೆ. ರಿಲಯನ್ಸ್​ ಬೋರ್ಡ್​​ ಡೈರೆಕ್ಟರ್​, ಕಾರ್ಯನಿರ್ವಾಹಕ ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಹಿರಿಯ ಸದಸ್ಯರು ತಮ್ಮ ಸ್ಯಾಲರಿಯಲ್ಲಿ ಶೇ. 30 ರಿಂದ 50 ರಷ್ಟು ಭಾಗ ಬಿಡಲು ನಿರ್ಧರಿಸಿದ್ದಾರೆ.

15 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್​ ಹೊಂದಿರುವ ಸಿಬ್ಬಂದಿಗೆ ರಜೆ ನೀಡಲಾಗಿದ್ದು, ವರ್ಷ ಪೂರ್ತಿ ಸಂಬಳ ಪಡೆದುಕೊಳ್ಳದಿರಲು ಮುಕೇಶ್​ ಅಂಬಾನಿ ನಿರ್ಧರಿಸಿದ್ದಾರೆ. ಇದರ ಜತೆಗೆ ಸಿಬ್ಬಂದಿಗೆ ಪ್ರತಿ ವರ್ಷ ನೀಡುವ ಬೋನಸ್​ ನೀಡದಿರಲು ಸಂಸ್ಥೆ ನಿರ್ಧಾರ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.