ಸ್ಯಾನ್ ಫ್ರಾನ್ಸಿಸ್ಕೋ: ಚಿಪ್ ಮೇಕರ್ ಕ್ವಾಲ್ಕಾಮ್ ಹೊಸ ಸ್ನಾಪ್‌ಡ್ರಾಗನ್ 778ಜಿ 5 ಜಿ ಮೊಬೈಲ್ ಪ್ಲಾಟ್‌ಫಾರ್ಮ್ ಬಿಡುಗಡೆ ಮಾಡಿದೆ. ಇದು ಅತ್ಯಾಧುನಿಕ ಮೊಬೈಲ್ ಗೇಮಿಂಗ್ ಮತ್ತು ವೇಗವರ್ಧಿತ ಕೃತಕ ಬುದ್ಧಿಮತ್ತೆ (ಎಐ) ತಲುಪುವಂತೆ ವಿನ್ಯಾಸಗೊಳಿಸಲಾಗಿದೆ.
ಚಿಪ್ಸೆಟ್ ಹಾನರ್, ಐಕ್ಯೂಒ, ಮೊಟೊರೊಲಾ, ಓಪ್ಪೋ, ರಿಯಲ್ಮೀ ಮತ್ತು ಶಿಯೋಮಿಯಿಂದ ಮುಂಬರುವ ಉನ್ನತ-ಶ್ರೇಣಿಯ ಸ್ಮಾರ್ಡ್ಫೋನ್ಗಳಿಗೆ ನಿಗದಿಪಡಿಸಲಾಗಿದೆ.
ಉನ್ನತ ಶ್ರೇಣಿಯಲ್ಲಿ ಹೆಚ್ಚಿನ ಪ್ಲಾಟ್‌ಫಾರ್ಮ್ ಆಯ್ಕೆಗಳಿಗಾಗಿ ಜಾಗತಿಕ ಒಇಎಂಗಳು ಹೆಚ್ಚುತ್ತಿರುವ ಬೇಡಿಕೆ ಪರಿಹರಿಸಲು ಸ್ನಾಪ್‌ಡ್ರಾಗನ್ 778 ಜಿ ಅಭಿವೃದ್ಧಿಪಡಿಸಲಾಗಿದೆ ಎಂದು ಕಂಪನಿಯ ವಾರ್ಷಿಕ 5 ಜಿ ಶೃಂಗಸಭೆಯಲ್ಲಿ ಕ್ವಾಲ್ಕಾಮ್ ಟೆಕ್ನಾಲಜೀಸ್ ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ಕೇದಾರ್ ಕೊಂಡಾಪ್ ಹೇಳಿದ್ದಾರೆ.
ಇದನ್ನೂ ಓದಿ: ಅಮೆಜಾನ್ನಲ್ಲಿ ಜನಾಂಗೀಯ ತಾರತಮ್ಯ, ಲೈಂಗಿಕ ಕಿರುಕುಳ: ಐವರು ಮಹಿಳೆಯರ ದೂರು
ಸ್ನ್ಯಾಪ್‌ಡ್ರಾಗನ್ 778ಜಿ ಮುಂದಿನ ಪೀಳಿಗೆಯ ಅನುಭವಗಳನ್ನು ಹೆಚ್ಚು ವಿಶಾಲವಾಗಿ ಪ್ರವೇಶಿಸಲು ನೆರವಾಗುತ್ತದೆ. ಇತ್ತೀಚಿನ ಹಲವು ಪ್ರೀಮಿಯಂ ತಂತ್ರಜ್ಞಾನಗಳು ಮತ್ತು ಫೀಚರ್ಗಳ ಉನ್ನತ ಶ್ರೇಣಿಯಲ್ಲಿ ತರುತ್ತದೆ ಎಂದರು.
ಸ್ನಾಪ್‌ಡ್ರಾಗನ್ 778ಜಿ ಆಧಾರಿತ ಸಾಧನಗಳು 2021ರ ಎರಡನೇ ತ್ರೈಮಾಸಿಕದಲ್ಲಿ ವಾಣಿಜ್ಯಿಕವಾಗಿ ಲಭ್ಯವಾಗುವ ನಿರೀಕ್ಷೆಯಿದೆ. ಸ್ನಾಪ್‌ಡ್ರಾಗನ್ 778ಜಿ ಮೂರು ಫೋಟೋಗಳು ಅಥವಾ ವಿಡಿಯೋಗಳನ್ನು ಏಕಕಾಲದಲ್ಲಿ ಸೆರೆ ಹಿಡಿಯಲು ಟ್ರಿಪಲ್ ಐಎಸ್‌ಪಿ ಹೊಂದಿದೆ. ಇದರಲ್ಲಿ ವಿಶಾಲ, ಅಲ್ಟ್ರಾ-ವೈಡ್ ಮತ್ತು ಜೂಮ್ ಸೇರಿವೆ.