ನವದೆಹಲಿ: ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಅಥವಾ ಪೂರ್ವ ಸ್ವಾಮ್ಯದ ಕಾರು ಖರೀದಿಸಲು ಆಸಕ್ತಿ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು CARS24 ವರದಿ ತಿಳಿಸಿದೆ.
ಕಳೆದ ವರ್ಷ ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದ ಸುಮಾರು ಶೇ. 22.5ರಷ್ಟು ಗ್ರಾಹಕರು ಈಗ ತಮ್ಮ ಸೀಮಿತ ಬಜೆಟ್‌ನಿಂದಾಗಿ ಪೂರ್ವ ಸ್ವಾಮ್ಯದ ಕಾರು ಖರೀದಿಸಲು ಬಯಸುತ್ತಿದ್ದಾರೆ ಎಂದು ವರದಿ ಹೇಳಿದೆ.
ಪ್ರಯಾಣಿಕರಲ್ಲಿ ಹಲವರು ಈಗ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕೋವಿಡ್-19 ನಂತರದ ಜಗತ್ತಿನಲ್ಲಿ ಖಾಸಗಿ ಕಾರುಗಳನ್ನು ಬಳಸಲು ಎದುರು ನೋಡುತ್ತಿದ್ದಾರೆ. ಆದರೂ ಕೈಗೆಟುಕುವ ದರ ಮತ್ತು ಹೆಚ್ಚಿನ ಅನುಕೂಲವಿರುವ ಸಾರ್ವಜನಿಕ ಸಾರಿಗೆಯು ದೈನಂದಿನ ಪ್ರಯಾಣಿಕರನ್ನು ಆಕರ್ಷಿಸುತ್ತಲೇ ಇರುತ್ತದೆ ಎಂದು ಹೇಳಿದೆ.
46 ಪ್ರತಿಶತದಷ್ಟು ಜನರು ಜಾಗತಿಕ ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಬಜೆಟ್ ಕಡಿಮೆ ಮಾಡಿದ್ದಾರೆ. ಅದರಲ್ಲಿ ಶೇ. 50ರಷ್ಟು ಜನರು ಲಾಕ್ಡೌನ್ ಮುಗಿದ ನಂತರ ಪೂರ್ವ ಸ್ವಾಮ್ಯದ ಕಾರುಗಳನ್ನು ಖರೀದಿಸುವ ಇಚ್ಛೆ ಹೊಂದಿದ್ದಾರೆ. ಶೇ. 22.5ರಷ್ಟು ಗ್ರಾಹಕರು ಕಳೆದ ವರ್ಷದಲ್ಲಿ ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದವರು ಈಗ ತಮ್ಮ ಸೀಮಿತ ಬಜೆಟ್‌ನಿಂದಾಗಿ ಪೂರ್ವ ಸ್ವಾಮ್ಯದ ಕಾರು ಖರೀದಿಸಲು ಬಯಸುತ್ತಿದ್ದಾರೆ ಎಂದು ವರದಿ ಹೇಳಿದೆ.