ನವದೆಹಲಿ: ಸ್ಥಿರ ಠೇವಣಿ (ಎಫ್‌ಡಿ) ಇರಿಸುವ ಉತ್ಸಾಹಿಗಳಿಗೆ ಇತ್ತೀಚಿನ ದಿನಗಳಲ್ಲಿನ ಬ್ಯಾಂಕ್ಗಳ ಬಡ್ಡಿ ದರ ಕಡಿತವು ಎಲ್ಲಿ ಹೂಡಿಕೆ ಮಾಡಬೇಕು? ಯಾವ ಬ್ಯಾಂಕ್ಗಳು ಸೂಕ್ತ? ಎನ್ನುವ ಪ್ರಶ್ನೆಗಳು ಕಾಡುತ್ತಿವೆ.
ಎಸ್‌ಬಿಐನ 1 ರಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಶೇ 6.50 ಪ್ರತಿಶತ, 3 ರಿಂದ 5 ವರ್ಷಕ್ಕಿಂತ ಕಡಿಮೆ ಹಾಗೂ 5 ರಿಂದ10 ವರ್ಷಗಳವರೆಗಿನ ಠೇವಣಿಗಳ ಮೇಲೆ ಶೇ 6.25 ರಷ್ಟು ಬಡ್ಡಿ ನೀಡುತ್ತಿದೆ. ಇದೇ ಅವಧಿಗಳಿಗೆ ಅಂಚೆ ಕಚೇರಿಯು ಮೊದಲ ಎರಡು ಅವಧಿಗೆ ಶೇ 7ರಷ್ಟು ಬಡ್ಡಿ ದರ ನೀಡಿದ್ದರೆ, 5 ವರ್ಷದ ಅವಧಿಗೆ ಶೇ 7.7ರಷ್ಟು ಬಡ್ಡಿ ನೀಡುತ್ತದೆ.
ಎಸ್‌ಬಿಐ ಬಡ್ಡಿ ದರ
1- ವರ್ಷ ಶೇ 6.50ರಷ್ಟು
2- ವರ್ಷ ಶೇ 6.25ರಷ್ಟು
3- ವರ್ಷ ಶೇ 6.25ರಷ್ಟು
ಅಂಚೆ ಕಚೇರಿಯ ಬಡ್ಡಿ ದರ
1- ವರ್ಷ ಶೇ 7ರಷ್ಟು
2- ವರ್ಷ ಶೇ 7ರಷ್ಟು
5- ವರ್ಷ ಶೇ 7.7ರಷ್ಟು
ಒಂದು ವೇಳೆ ನೀವು 1,00,000, 2,00,000, 3,00,000 ಹಾಗೂ 4,00,000 ಲಕ್ಷ ರೂ. ಒಂದು ವರ್ಷ ನಿಶ್ಚಿತ ಠೇವಣಿ ಇರಿಸಲು ಬಯಸಿದ್ದರೆ ಸಿಗುವ ಬಡ್ಡಿಯ ಲಾಭ ಹೀಗಿರಲಿದೆ.
ಎಸ್‌ಬಿಐ 1,00,000 2,00,000 3,00,000 4,00,000 (ರೂ.)
1- ವರ್ಷ 1,06,660 2,13,320 3,19,980 4,26,640
ಅಂಚೆ ಕಚೇರಿ 1,00,000 2,00,000 3,00,000 4,00,000 (ರೂ.)
1- ವರ್ಷ 1,07,186 2,14,372 3,21,558 4,28,744
* ಎಸ್‌ಬಿಐನ ಎಫ್‌ಡಿ ಮೆಚ್ಯುರಿಟಿ, ರಾಷ್ಟ್ರೀಯ ಉಳಿತಾಯ ಸಂಸ್ಥೆಯ ರಾಷ್ಟ್ರೀಯ ಉಳಿತಾಯ ಬಡ್ಡಿ ದರದ ಅನ್ವಯ ಲೆಕ್ಕಾಚಾರ ಮಾಡಲಾಗಿದೆ.