ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ಚುನಾವಣೆ ಪ್ರಚಾರ ಮುಗಿಸಿ ವಿಶ್ರಾಂತಿಗೆಂದು ಕೇದಾರನಾಥ್ ದೇವಾಲಯದ ಬಳಿ ಗುಹೆಯೊಂದರಲ್ಲಿ ಧ್ಯಾನ ಮಾಡಿದ ಬಳಿಕ ಆ ಗುಹೆಗೆ ಹೆಚ್ಚಿನ ಬೇಡಿಕೆ ಬಂದಿದೆ.
ಪ್ರಸ್ತುತ ಈ ಗುಹೆಯ ನಿರ್ವಹಣೆ ಜವಾಬ್ದಾರಿ ಗರ್ವಾಲ್ ಮಂಡಲ್ ವಿಕಾಸ್ ನಿಗಮ ಲಿಮಿಟೆಡ್(ಜಿಎಂವಿಎನ್) ವಹಿಸಿಕೊಂಡಿದೆ. ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಬುಕ್ ಮಾಡಬಹುದಾಗಿದ್ದು, ಅಲ್ಲಿ ಕುಳಿತು ಧ್ಯಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ.
ಮೋದಿ ಧ್ಯಾನಕ್ಕೆ ಕುಳಿತ ಗುಹೆಗೆ ದಿನಕ್ಕೆ ₹ 1,500 ಬಾಡಿಗೆ ನಿಗದಿಪಡಿಸಲಾಗಿದೆ. ಈಗಾಗಲೇ ಜುಲೈ ತಿಂಗಳ ಪೂರ್ತಿ ಧ್ಯಾನಕ್ಕೆ ಗುಹೆ ಬುಕ್ ಆಗಿದೆ. ಅಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಕೆಲ ದಿನಾಂಕಗಳು ಮುಂಗಡ ಬುಕ್ ಆಗಿವೆ ಎಂದು ಜೆಎಂವಿಎನ್ ತಿಳಿಸಿದೆ. ಗುಹೆಯಲ್ಲಿ ಧ್ಯಾನ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸುಮಾರು 12,500 ಅಡಿ ಎತ್ತರದಲ್ಲಿ ಮತ್ತೆ 3 ಗುಹೆಯಗಳನ್ನು ನಿರ್ಮಿಸಲು ಜಿಎಂವಿಎನ್ ನಿರ್ಧರಿಸಿದೆ.