ETV Bharat / business

'ಬ್ರಾಂಡ್​ ಕಾಶಿ'ಯ ಹಣ್ಣು,ತರಕಾರಿಗೆ ಯುರೋಪ್​, ಗಲ್ಫ್​ನಲ್ಲಿ ಭಾರೀ ಡಿಮ್ಯಾಂಡ್! - ರಫ್ತು

ಯುರೋಪ್​ ಒಕ್ಕೂಟ ರಾಷ್ಟ್ರಗಳು, ಗಲ್ಫ್ ಮತ್ತು ಸಿಂಗಾಪುರದಲ್ಲಿ ಇಲ್ಲಿನ ಉತ್ಪನ್ನಗಳಿಗೆ ಯಥೇಚ್ಛವಾದ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ, ಸ್ಥಳೀಯ ರೈತರಿಗೆ ಅಂತಾರಾಷ್ಟ್ರೀಯ ಮಾನದಂಡದಡಿ ಗುಣಮಟ್ಟದ ಉತ್ಪನ್ನಗಳ ಬೆಳೆಯಲು ತರಬೇತಿ ನಿಡಲಾಗುವುದು ಎಂದು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Aug 28, 2019, 11:28 PM IST

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಸತ್​ ಕ್ಷೇತ್ರ ವಾರಣಾಸಿ ಶೀಘ್ರದಲ್ಲೇ ಹಣ್ಣು ಮತ್ತು ತರಕಾರಿ ರಫ್ತಿನ ಜಾಗತಿಕ ಹಬ್​ ಆಗಲಿದೆ ಎನ್ನಲಾಗುತ್ತಿದೆ.

ಯುರೋಪ್​ ಒಕ್ಕೂಟ ರಾಷ್ಟ್ರಗಳು, ಗಲ್ಫ್ ಮತ್ತು ಸಿಂಗಾಪುರದಲ್ಲಿ ಇಲ್ಲಿನ ಉತ್ಪನ್ನಗಳಿಗೆ ಯಥೇಚ್ಛವಾದ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ, ಸ್ಥಳೀಯ ರೈತರಿಗೆ ಅಂತಾರಾಷ್ಟ್ರೀಯ ಮಾನದಂಡದಡಿ ಗುಣಮಟ್ಟದ ಉತ್ಪನ್ನಗಳ ಬೆಳೆಯಲು ತರಬೇತಿ ನೀಡಲಾಗುವುದು ಎಂದು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ವಾರಣಾಸಿಯಲ್ಲಿ ಬೆಳೆಯುವ ತರಕಾರಿ ಮತ್ತು ಹಣ್ಣುಗಳು ಬನಾರಸ್ ಬ್ರಾಂಡ್‌​ ಅಥವಾ ಬ್ರಾಂಡ್​ ಕಾಶಿ ಎಂದೇ ಪ್ರಸಿದ್ಧಿಯಾಗುತ್ತಿವೆ. ರಫ್ತು ಬೇಸಾಯದ ಸರಕುಗಳ ನೀತಿಯಡಿ ರಫ್ತು ಉತ್ತೇಜನ ಕಾರ್ಯಕ್ರಮಗಳನ್ನು ಆಯೋಜಿಸಿದ ಬೆಳೆಗಾರರಿಗೆ ಸಾಗರೋತ್ತರ ಮಾರುಕಟ್ಟೆಯ ಹೆಚ್ಚಿನ ಪ್ರಯೋಜನೆ ದೊರೆಯುವಂತೆ ಮಾಡಲಾಗುವುದು. ಆದಷ್ಟೇ ಬೇಗನೆ ಭಾರತದ ರೈತರ ರಫ್ತು ಉತ್ಪನ್ನಗಳು ದ್ವಿಗುಣಗೊಳಿಸಿ ಜಾಗತಿಕ ಮೌಲ್ಯದತ್ತ ಕೊಂಡೊಯ್ಯುವ ಇರಾದೆ ಸರ್ಕಾರದ ಮುಂದಿದೆ ಎಂದು ಹೇಳಿದ್ದಾರೆ.

ನೆದರ್​ಲ್ಯಾಂಡ್​, ಅಮೆರಿಕ, ಜಪಾನ್​ ಮತ್ತು ಯುಎಇ ರಾಷ್ಟ್ರಗಳು ಭಾರತದ ಹಣ್ಣುಗಳ ಆಮದಿಗೆ ಮೊರೆ ಹೋಗುತ್ತಿವೆ. 2018-19ರ ಇಯರ್ ಆನ್ ಇಯರ್​ನಲ್ಲಿ ಭಾರತದ ಹಣ್ಣುಗಳ ರಫ್ತು ಪ್ರಮಾಣ ಶೇ 8ರಿಂದ ಶೇ 12ಕ್ಕೆ ಏರಿಕೆಯಾಗಿದೆ. ತರಕಾರಿಗಳ ರಫ್ತು ಸಹ ಶೇ 0.3ರಷ್ಟು ಹೆಚ್ಚಳವಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.