ETV Bharat / business

ಮತ್ತೆ ಹೆಡೆ ಬಿಚ್ಚಿದ ತೈಲ ದರ: 2 ವರ್ಷದಲ್ಲೇ ಪೆಟ್ರೋಲ್, ಡೀಸೆಲ್ ರೇಟ್​ ಅತ್ಯಧಿಕ ಏರಿಕೆ

ದೆಹಲಿಯಲ್ಲಿ ಪೆಟ್ರೋಲ್ 82.86 ರೂ.ಗಳಿಂದ 83.13 ರೂ.ಗೆ ಏರಿದೆ. ಡೀಸೆಲ್ 73.07 ರೂ.ಯಿಂದ 73.32 ರೂ.ಗೆ ಏರಿಕೆಯಾಗಿದೆ. 2018ರ ಸೆಪ್ಟೆಂಬರ್​ನಿಂದ ಪೆಟ್ರೋಲ್ ಮತ್ತು ಡೀಸೆಲ್​ ಅತ್ಯಧಿಕ ದರದಲ್ಲಿ ಮಾರಾಟ ಆಗುತ್ತಿದೆ. ಎರಡು ತಿಂಗಳ ವಿರಾಮದ ನಂತರ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆ ಪುನಾರಂಭಿಸಿದಾಗ ನವೆಂಬರ್ 20ರಿಂದ 13 ಬಾರಿ ದರ ಹೆಚ್ಚಳವಾಗಿದೆ.

fuel
ತೈಲ
author img

By

Published : Dec 5, 2020, 3:07 PM IST

Updated : Dec 5, 2020, 3:22 PM IST

ನವದೆಹಲಿ: ಅಂತಾರಾಷ್ಟ್ರೀಯ ತೈಲ ಬೆಲೆಗಳು ಕಳೆದ ಹದಿನೈದು ದಿನಗಳಲ್ಲಿ 13 ಬಾರಿ ದರ ಹೆಚ್ಚಳ ಮಾಡಿದ ನಂತರ ಎರಡು ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 83 ರೂ. ದಾಟಿದೆ.

ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 27 ಪೈಸೆ ಮತ್ತು ಡೀಸೆಲ್ 25 ಪೈಸೆಯಷ್ಟು ಏರಿಸಿವೆ.

ದೆಹಲಿಯಲ್ಲಿ ಪೆಟ್ರೋಲ್ 82.86 ರೂ.ಗಳಿಂದ 83.13 ರೂ.ಗೆ ಏರಿದೆ. ಡೀಸೆಲ್ 73.07 ರೂ.ಯಿಂದ 73.32 ರೂ.ಗೆ ಏರಿಕೆಯಾಗಿದೆ. 2018ರ ಸೆಪ್ಟೆಂಬರ್​ನಿಂದ ಪೆಟ್ರೋಲ್ ಮತ್ತು ಡೀಸೆಲ್​ ಅತ್ಯಧಿಕ ದರದಲ್ಲಿ ಮಾರಾಟ ಆಗುತ್ತಿದೆ. ಎರಡು ತಿಂಗಳ ವಿರಾಮದ ನಂತರ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆ ಪುನಾರಂಭಿಸಿದಾಗ ನವೆಂಬರ್ 20ರಿಂದ 13 ಬಾರಿ ದರ ಹೆಚ್ಚಳವಾಗಿದೆ.

ಎಸ್​ಬಿಐಗೆ 1,800 ಕೋಟಿ ರೂ. ಸಾಲ ವಂಚನೆ: ಮೂರು ಕಡೆ ಸಿಬಿಐ ದಾಳಿ, ಕಂಪನಿಗಳ ಕಡತ ಶೋಧ

16 ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 2.07 ರೂ ಮತ್ತು ಡೀಸೆಲ್ ದರ 2.86 ರೂ.ನಷ್ಟಾಗಿತ್ತು ಹೆಚ್ಚಳವಾಗಿದೆ. 'ಲಸಿಕೆ ಭರವಸೆಗಳು ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಿವೆ' ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.

ಕೋವಿಡ್ -19 ಲಸಿಕೆ ಬೇಡಿಕೆಯು ಚೇತರಿಕೆಗೆ ಕಾರಣವಾಗುತ್ತವೆ ಎಂಬ ಭರವಸೆಯಿಂದ 2020ರ ಅಕ್ಟೋಬರ್ ಅಂತ್ಯದಲ್ಲಿ ಬ್ರೆಂಟ್ ಕಚ್ಚಾ ತೈಲವು ಕನಿಷ್ಠ ಶೇ 34ರಷ್ಟು ಹೆಚ್ಚಾಗಿದೆ.

ಯುರೋಪ್ ಮತ್ತು ಅಮೆರಿಕದಲ್ಲಿ ಕೋವಿಡ್​​ನ ಎರಡನೇ ಅಲೆಯ ಹೊರತಾಗಿಯೂ ತೈಲ ಬೆಲೆ ಏರಿಕೆಯಾಗಿದೆ. ಲಿಬಿಯಾದ ತೈಲ ಉತ್ಪಾದನೆಯು ದಿನಕ್ಕೆ 0.1 ಮಿಲಿಯನ್ ಬ್ಯಾರೆಲ್​ಗಳಿಂದ (ಬಿಪಿಡಿ) 1.25 ಮಿಲಿಯನ್ ಬಿಪಿಡಿಗೆ ಏರಿದೆ ಎಂದು ಐಸಿಐಸಿಐ ಹೇಳಿದೆ.

Last Updated : Dec 5, 2020, 3:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.