ETV Bharat / business

ಇಂದು ಕೂಡ ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ ಏರಿಕೆ; ಬೆಂಗಳೂರಿನಲ್ಲಿ ತೈಲ ಬೆಲೆ ಹೀಗಿದೆ.. - ಇಂದಿನ ಪೆಟ್ರೋಲ್‌ ಡೀಸೆಲ್‌ ಬೆಲೆಗಳು

ಇಂದು ಕೂಡ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 102.26 ರೂಪಾಯಿ ಇದ್ದರೆ, ಡೀಸೆಲ್‌ 86.58 ರೂಪಾಯಿ ಇದೆ.

Petrol, diesel prices hiked again for the second day in a row
ಇಂದು ಕೂಡ ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ ಏರಿಕೆ; ಬೆಂಗಳೂರಿನಲ್ಲಿ ತೈಲ ಬೆಲೆ ಹೀಗಿದೆ..
author img

By

Published : Mar 23, 2022, 7:52 AM IST

ನವದೆಹಲಿ: ತೈಲ ಕಂಪನಿಗಳು ಇಂದು ಕೂಡ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ತಲಾ 80 ಪೈಸೆ ಹೆಚ್ಚಿಸಿವೆ. ತೈಲ ಮಾರುಕಟ್ಟೆ ಕಂಪನಿಗಳು (OMC) ಕಳೆದ ನಾಲ್ಕು ತಿಂಗಳ ಅವಧಿಯ ನಂತರ ಪೆಟ್ರೋಲಿಯಂ ಉತ್ಪನ್ನಗಳ ಹೆಚ್ಚಳವನ್ನು ನಿನ್ನೆಯಿಂದ ಏರಿಕೆ ಮಾಡಲು ಪ್ರಾರಂಭಿಸಿವೆ.

ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ಇಂದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್‌ ಲೀಟರ್‌ಗೆ 102.26 ರೂಪಾಯಿ ಇದ್ದರೆ, ಡೀಸೆಲ್‌ 86.58 ರೂಪಾಯಿ ಇದೆ.

ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರವು 96.21 ರೂ.ನಿಂದ 97.01 ರೂ. ಏರಿಕೆಯಾಗಿದೆ. ಡೀಸೆಲ್ ದರಗಳು ಲೀಟರ್‌ಗೆ 88.27 ರೂಪಾಯಿಂದ 86.67 ಕ್ಕೆ ಜಿಗಿದಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ 111.67 ರೂ. ಇದರೆ ಡೀಸೆಲ್‌ 95.85 ರೂಪಾಯಿಗೆ ಮಾರಾಟ ಆಗುತ್ತಿದೆ. ನಾಲ್ಕೂವರೆ ತಿಂಗಳ ಬಳಿಕ ನಿನ್ನೆ ಅಡುಗೆ ಅನಿಲ ಸಿಲಿಂಡರ್‌ 50 ರೂಪಾಯಿ ಹಾಗೂ ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: 4 ತಿಂಗಳ ಬಳಿಕ ಗ್ರಾಹಕರ ಜೇಬಿಗೆ ಕತ್ತರಿ; ಪೆಟ್ರೋಲ್‌, ಡೀಸೆಲ್‌ ಲೀಟರ್‌ಗೆ ತಲಾ 80 ಪೈಸೆ, LPG ಸಿಲಿಂಡರ್‌ ಬೆಲೆ 50 ರೂ.ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.